ಆಡಳಿತದಲ್ಲಿ ಪಾರದರ್ಶಕತೆ, ಯೋಜನೆಗಳ ಅನುಷ್ಠಾನದಲ್ಲಿ ಹೊಣೆಗಾರಿಕೆ ಹಾಗೂ ಜನರಿಗೆ ನಿಖರ ಮಾಹಿತಿ ಒದಗಿಸುವುದು ನಮ್ಮ ಸರ್ಕಾರದ ಆಶಯ. ಸರ್ಕಾರದ ಪ್ರತಿಯೊಂದು ಕಾರ್ಯಕ್ರಮದ ಗುರಿ, ಪ್ರಗತಿ ಮತ್ತು ಫಲಿತಾಂಶಗಳು ಸಾರ್ವಜನಿಕರಿಗೂ ತಿಳಿಯುವಂತಿರಬೇಕು ಎಂಬ ಉದ್ದೇಶದಿಂದ ‘ಸಿಎಂ ಡ್ಯಾಶ್‌ಬೋರ್ಡ್’ ರೂಪಿಸಲಾಗಿದೆ.
ಸರ್ಕಾರದ 10 ವಲಯಗಳ 51 ಅಭಿಯಾನಗಳು, ಐದು ಗ್ಯಾರಂಟಿ ಯೋಜನೆಗಳು, ಸಾರ್ವಜನಿಕ ಕಾಮಗಾರಿಗಳು ಹಾಗೂ ವಿವಿಧ ನಾಗರಿಕ ಸೇವೆಗಳ ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸಬಹುದು. ಇಲಾಖೆಗಳ ತಂತ್ರಾಂಶಗಳಿಂದ ನೇರವಾಗಿ ಮಾಹಿತಿ ಪಡೆದು ಪ್ರತಿದಿನ ನವೀಕರಿಸುವ ಈ ವೇದಿಕೆಯು ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ, ಸರ್ಕಾರದ ಕೆಲಸಗಳನ್ನು ಜನರ ಮುಂದಿಡುವ ಪಾರದರ್ಶಕ ವ್ಯವಸ್ಥೆಯಾಗಿದೆ.
ಸರ್ಕಾರದ ಯೋಜನೆಗಳು ಮತ್ತು ಪ್ರಗತಿಯ ಸಮಗ್ರ ಮಾಹಿತಿ ಪಡೆಯಲು ಸಿಎಂ ಡ್ಯಾಶ್‌ಬೋರ್ಡ್ https://cmdashboard.karnataka.gov.in ಗೆ ಭೇಟಿ ನೀಡಿ.
