ಶಿವಮೊಗ್ಗ ನಗರದ ಟಿಪ್ಪುನಗರ ವಾಸಿ ಮಹಮ್ಮದ್ ಇರ್ಷಾದ್ ಇವರು ತಮ್ಮ ಪತ್ನಿ ಅಸ್ಮಾ ಫರ್ಹಿನ್ ರವರಿಗೆ ಹೆಚ್ಚಿನ ವರದಕ್ಷಿಣೆ ಹಣ ತರಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ್ದಾಗಿ 2023ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖಾಧಿಕಾರಿ ಭರತ್ ಕುಮಾರ್ ಇವರು ಪ್ರಕರಣದ ತನಿಖೆ ನಡೆಸಿ 2024ರಲ್ಲಿ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ.
ಸಾಕ್ಷಿ ವಿಚಾರಣೆ ನಡೆಸಿ ಪರಸ್ಪರ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧರಾಜು ಎನ್.ಕೆ. ಇವರು ದಿ:24/11/2026 ರಂದು ಆರೋಪಿ ಮಹಮ್ಮದ್ ಇರ್ಷಾದ್ ಇವರಿಗೆ ಕಲಂ.: 498(ಎ) ಐಪಿಸಿ ಅಪರಾಧಕ್ಕೆ ಮೂರು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ಗಳ ದಂಡ, ಕಲಂ:323 ಐಪಿಸಿಗೆ 6 ತಿಂಗಳು ಶಿಕ್ಷೆ ರೂ.1000/- ದಂಡ, ಕಲಂ.324 ಐಪಿಸಿಗೆ 1 ವರ್ಷ ಶಿಕ್ಷೆ ರೂ. 1000/- ದಂಡ, ಕಲಂ.504 ಐಪಿಸಿಗೆ 6 ತಿಂಗಳು ಶಿಕ್ಷೆ ಮತ್ತು ರೂ. 1000/- ದಂಡ, ಕಲಂ.506 ಐಪಿಸಿಗೆ 6 ತಿಂಗಳು ಸಾದಾ ಶಿಕ್ಷೆ ಮತ್ತು ರೂ. 1000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಪ್ರಕರಣದ ಉಳಿದ ಆರೋಪಿತರಿಗೆ ಬಿಡುಗಡೆ ಮಾಡಿರುತ್ತಾರೆ.
ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿ.ಕೆ. ಕಿರಣ್ಕುಮಾರ್ ವಾದ ಮಂಡಿಸಿದ್ದರು.
