ಹೊಯ್ಸಳರ ಶಾಸನದಲ್ಲಿ ಕಾಣಬಹುದು. ಹೊಯ್ಸಳರ ಕಾಲದಲ್ಲಿ ಶಿಲ್ಪಕಲೆ, ದೇವಾಲಯಗಳು, ಅಗ್ರಹಾರಗಳು, ಗುರುಕುಲಗಳು ಸಂಪೂರ್ಣವಾಗಿ ರಾಜಾಶ್ರಯದಲ್ಲಿದ್ದು ಕರ್ನಾಟಕವು ಉತ್ತುಂಗಸ್ಥಾನದಲ್ಲಿತ್ತು.
ಹಾಗೆಯೇ ಹೊಯ್ಸಳರಾಳಿದ ಅಪ್ಪಟ ಮಲೆನಾಡಿನ ಶಿವಮೊಗ್ಗದ ಬಸವನಗಂಗೂರಿನ, ಗಂಗಾಧರೇಶ್ವರನೂ, ಜಿನಬಸದಿಯ ಶಾಸನೋಕ್ತ ವೃತ್ತಾಂತವೂ ಹೀಗಿದೆ.
EC Vol 13, Shimoga
ಬಸವನಗಂಗೂರಿನ ಗಂಗಾಧರೇಶ್ವರ ದೇವಾಲಯವು ಹೊಯ್ಸಳರ ಕಾಲಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಈ ದೇವಾಲಯದ ನವೀಕರಣವನ್ನು ಹೊಯ್ಸಳರ ದೊರೆ ಇಮ್ಮಡಿ ವೀರಬಲ್ಲಾಳರು ಮಾಡಿದ್ದು ಶಕ 1139, ಬಹುಧಾನ್ಯಸಂವತ್ಸರದ ವೈಶಾಖ ಶುದ್ದ ತದಿಗೆಯ ಸೋಮವಾರದಂದು (ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ A.D 1218 ಮಾರ್ಚ್ 31 ರ ಶನಿವಾರ) ಶಕವರುಷ 1140 ಕ್ಕೆ ಹೊಂದುವಂತೆ, ನಾಡಪ್ರಭುವೆನಿಸಿದ್ದ ಮಧು ಸೂಧನ ದೇವನೆಂಬುವವನು ಅವನ ತಂದೆಯಾಗಿದ್ದ ಗಂಗಣ್ಣನು ಮಂಡಲಿ ನಾಡಿನ ಮುದುಗಂಗಾವೂರು (alias) ಕಂದಲೀಪುರದ(ಇಂದಿನ ಬಸವನಗಂಗೂರು) ಗಂಗಾಧರೇಶ್ವರನ ನಿತ್ಯ ಅಭಿಷೇಕಕ್ಕೆ 90 ಕಂಬ ಅಳತೆಯುಳ್ಳ ನೀರಾವರಿ ಹಾಗೂ ಒಣ ಕೃಷಿಭೂಮಿಯಲ್ಲಿ ಗಂಗಾ ಸಮುದ್ರವೆಂಬ ದೊಡ್ಡ ತಟಾಕವನ್ನು ನಿರ್ಮಿಸಿದ್ದಲ್ಲದೆ 30 ಕಂಬ ಪ್ರಮಾಣದ ಪ್ರತ್ಯೇಕ ಭೂಮಿಯನ್ನು ನಿತ್ಯ ನಂದಾದೀಪಕ್ಕೆ, ನೈವೇದ್ಯಕ್ಕೆ ದಾನ( ಉಂಬಳಿಯಾಗಿ ಅಮೃತರಾಸಿಎನ್ನುವವನ ಮೊಮ್ಮಗನಾಗಿದ್ದ ಸೋಮೇಶ್ವರನಿಗೆ) ನೀಡಿದ್ದು ಈ ದಾನವನ್ನು ಕಾಪಾಡಲು ಅಮೃತರಾಸಿ ಎನ್ನುವವನ ವಂಶಸ್ಥನಾದ ಹಾಡುವಳ ಗೊಗ್ಗದ ಮಧುಸೂಧನದೇವನಿಗೂ ವಹಿಸಲಾಗಿತ್ತು ಎನ್ನುವುದನ್ನು ಶಾಸನೋಕ್ತ ದಾಖಲೆಯಿಂದ ತಿಳಿಯಬಹುದು. ಗಂಗಾಧರೇಶ್ವರ ದೇವಾಲಯದ ಸಮೀಪವೇ ಶಾಂತಿನಾಥ (ಜಿನ) ಬಸದಿಯಿದ್ದು ಮಕರ ತೋರಣಗಳು, ಲಲಾಟದಲ್ಲಿ ಸುಂದ ಜಿನ ಶಿಲ್ಪದ ಕೆತ್ತನೆ ಹಾಗೂ ಜಾಲಂದ್ರಗಳು ಯೋಧರ, ವಾದಕರ ಕೆತ್ತನೆಗಳು ಬಹು ಸುಂದರವಾಗಿದ್ದು ಬಸದಿಯ ಅರ್ಧ ಭಾಗ ನಾಶವಾಗಿದೆ. ಈ ಬಸದಿಯ, ಗಂಗಾಧರೇಶ್ವರನ ನಿರ್ವಹಣೆಗಾಗಿ ಅಮೃತರಾಸಿ ಗುರುಗಳ ಮೊಮ್ಮಗನಾಗಿದ್ದ ಸೋಮೇಶ್ವರ ಗುರುಗಳಿಗೆ ವಿಶಾಲವಾದ ಗಂಗಾಸಮುದ್ರ ಎಂಬ ಕೆರೆಯ ಕೆಳಗಿನ 40 ಕಂಬದ ಪ್ರಮಾಣದ ಭೂಮಿಯನ್ನೂ, ಏಳ್ಳು ದೀಪಕ್ಕಾಗಿ 30 ಕಂಬದ ಪ್ರಮಾಣದ ಭೂಮಿಯನ್ನು ಧಾರಾಪೂರ್ವಕವಾಗಿ ದಾನ ಕೊಟ್ಟ 51 ಸಾಲಿನ ಶಾಸನಿದ್ದು ಹಲವು ಭಾಗಗಳಲ್ಲಿ ತುಂಡಾಗಿರುವುದನ್ನು ಕಾಣಬಹುದು. ಈಗ ಪುರಾತನ ಗಂಗಾಧರೇಶ್ವನ ದೇವಾಲಯ ಸಂಪೂರ್ಣ ನೆಲಕಚ್ಚಿದ್ದು ಗಂಗಾಸಮುದ್ರವೆಂಬ ಹೆಸರಿನ ವಿಶಾಲ ಕೆರೆಯೂ ಭೂಮಿಯ ಆಳದಲ್ಲಿ ಹುದುಗಿಹೋಗಿರುವುದು ನಮ್ಮ ಜನರ ಇತಿಹಾಸ ಪ್ರಜ್ಞೆಗೆ ಸಾಕ್ಷಿಯಾಗಿದೆ.
ದಕ್ಷಿಣ ಭಾರತದ ಶಾಸನಗಳ ಅಧ್ಯಯನದ ಪ್ರಕಾರ ಭೂಮಿಯ ಅಳತೆಯನ್ನು ಒಂದು ಕಂಬದ ಪ್ರಮಾಣವಾಗಿ ಅಳತೆಯ ಪ್ರಮಾಣವಾಗಿತ್ತು. (ಉಲ್ಲೇಖ:ಪ್ರಾಚೀನ ಕರ್ನಾಟಕ ಐತಿಹಾಸಿಕ ಪಾರಿಭಾಷಿಕ ಕೋಶ)
1 ಕಂಬ ≈ 6 ರಿಂದ 7 ಅಡಿ (ಸುಮಾರು 1.8 – 2.1 ಮೀಟರ್)
ಇದು ಒಂದು ಮಾನವನ ಎತ್ತರದಷ್ಟಿರುವ ಅಳತೆ ಎಂದು ಪರಿಗಣಿಸಲಾಗುತ್ತದೆ.
ಶಾಸನಗಳಲ್ಲಿ ಬಳಕೆ
ಮಧ್ಯಯುಗದ ಕನ್ನಡ ಶಾಸನಗಳಲ್ಲಿ ಕೆಲವೊಮ್ಮೆ ಹೀಗೆ ಬರುತ್ತದೆ:
“10 ಕಂಬ ಉದ್ದ”
“3 ಕಂಬ ಅಗಲ”
ಇದು ಸಾಮಾನ್ಯವಾಗಿ ಭೂಮಿಯ ಅಳತೆ ಅಥವಾ ಕಟ್ಟಡದ ಗಾತ್ರ ಸೂಚಿಸಲು ಬಳಸಲಾಗುತ್ತಿತ್ತು.
ಪುರಾತನ
ಶಾಸನಗಳಲ್ಲಿ ಇನ್ನೂ ಕೆಲವು ಅಳತೆಗಳು ಕಾಣುತ್ತವೆ:
ಅಂಗುಲ (Angula) – ಬೆರಳಿನ ಅಗಲ
ಹಸ್ತ (Hasta) – ಸುಮಾರು 1.5 ಅಡಿ
ದಂಡ (Danda) – ಸುಮಾರು 6 ಅಡಿ
ಕಂಬ (Kamba) – ಸುಮಾರು 6–7 ಅಡಿ
ಸಾಮಾನ್ಯವಾಗಿ ಕರ್ನಾಟಕದ ಭೂಮಿ ಅಳತೆ ಪದ್ಧತಿಯಲ್ಲಿ:
1 ಕಂಬ = 1 ಗುಂಟೆ
ಅಂದರೆ:
1 ಕಂಬದ ಅಳತೆ = 1089 ಚದರ ಅಡಿ (sq ft)
40 ಕಂಬ = 40 ಗುಂಟೆ = 1 ಏಕರೆ
ಸಾರಾಂಶ:
1 ಕಂಬ = 1 ಗುಂಟೆ
40 ಕಂಬ = 1 ಏಕರೆ
ದಿಲೀಪ್ ನಾಡಿಗ್
ಪರಂಪರಾ ವೇದ, ವಿಜ್ಞಾನ, ಇತಿಹಾಸ.
6361124316
9448148710
ಸಂಶೋಧಕ: ದಿಲೀಪ್ ನಾಡಿಗ್. ಶಿವಮೊಗ್ಗ.
