(ಡಾ.ಎಸ್. ಗಾಯತ್ರಿದೇವಿ ಸಜ್ಜನ್ರವರು ವಿಶ್ಲೇಷಿಸಿರುವ ಅಲ್ಲಮರ ವಚನಗಳ ಸಂಗ್ರಹ)
ಮಥುರಾ ಪ್ಯಾರಡೈಸ್ನಲ್ಲಿ ಭಾನುವಾರ ಶಿವಮೊಗ್ಗಾ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಡಿಯಲ್ಲಿ ಖ್ಯಾತ ಲೇಖಕಿ ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಗಾಯತ್ರಿದೇವಿ ಸಜ್ಜನ್ರವರು ತಮ್ಮ ತಂದೆ ತಾಯಿಗಳಾದ ಡಾ ಶಿವನಪ್ಪ ಮತ್ತು ಶಾರದಮ್ಮನವರ ಸ್ಮರಣಾರ್ಥ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ತಮ್ಮ ತಂದೆ ತಾಯಿಯರ ಬಗ್ಗೆ ಮಾತನಾಡಿದರು ಬಡತನದ ಕುಟುಂಬದಲ್ಲಿ ಜನಿಸಿದ ಇವರ ತಂದೆಯವರು ಜಯದೇವ ಸ್ವಾಮಿಗಳ ಆಶ್ರಯದಲ್ಲಿದ್ದು ವಿದ್ಯಾಭ್ಯಾಸ ಪಡೆದು, ಕಣ್ಣಿನ ವೈದ್ಯರಾದರು. ಇವರಿಗೆ ಆರು ಜನ ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಹೆಣ್ಣು ಗಂಡು ಎಂಬ ಬೇಧ ಭಾವ ಮಾಡದೇ ಎಲ್ಲರಿಗೂ ಉತ್ತಮವಾದ ಶಿಕ್ಷಣ ಕೊಡಿಸಬೇಕೆಂಬುದೇ ಇವರ ತಂದೆಯವರ ಮಹದಾಸೆಯಾಗಿತ್ತು. ಎಲ್ಲರೂ ಸ್ನಾತಕೋತ್ತರ ಪದವಿ ಪಡೆದು ಉದ್ಯೋಗಸ್ಥೆಯರೂ ಆಗಿದ್ದು ಒಂದು ಪವಾಡವೇ ಸರಿ. ಅವರ ಶಿಸ್ತು, ಕಠಿಣ ಪರಿಶ್ರಮ ಹಾಗೂ ತಾಯಿಯವರ ಪ್ರೀತಿ, ಮಮತೆ ಇವರೆಲ್ಲರಿಗೂ ದಾರಿದೀಪವಾಗಿತ್ತು. ಶ್ರೀಮತಿಯವರ ನಿವೃತ್ತಿಯ ನಂತರದಲ್ಲಿ ಪತಿ ಜಯಪ್ಪನವರ ಸಹಕಾರದಿಂದ ಇವರ ಬರವಣಿಗೆಯ ಕಾಯಕ ಮುಂದುವರೆದು, ಈಗ ಲೋಕಾರ್ಪಣೆಯಾದ ‘ಎತ್ತಣ ಮಾಮರ, ಎತ್ತಣ ಕೋಗಿಲೆ’ ಇವರ ಎಂಟನೆಯ ಪುಸ್ತಕ ಎಂದು ತಿಳಿಸಲು ಹರ್ಷಿಸುತ್ತೇನೆ.
ಡಾ. ಎಸ್. ಗಾಯತ್ರಿದೇವಿ ಸಜ್ಜನ್ರವರು ರಚಿಸಿದ ಎತ್ತಣ ಮಾಮರ, ಎತ್ತಣ ಕೋಗಿಲೆ (ಅಲ್ಲಮರ ವಚನಗಳ ವಿಶ್ಲೇಷಣೆ) – ಭಾಗ 2, ಎಂಬ ಕೃತಿಯನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಹಿರಿಯ ಪತ್ರಕರ್ತರಾದ ಶ್ರೀಯುತ ಎಸ್. ಚಂದ್ರಕಾಂತ್ರವರು ಲೋಕಾರ್ಪಣೆ ಮಾಡಿದರು. ಶ್ರೀಯುತರು ಕೃತಿಯ ಬಗ್ಗೆ ಮಾತನಾಡುತ್ತಾ ‘ಅಲ್ಲಮರ ಬೆಡಗಿನ ವಚನಗಳು ಕಬ್ಬಣದ ಕಡಲೆಯೇ ಸರಿ. ಆದರೆ ಲೇಖಕಿಯು ಈ ವಚನಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ವಿಶ್ಲೇಷಿಸಿರುವುದು ಶ್ಲಾಘನೀಯ, ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇವರು ತುಂಬಿದ ಕೊಡವಿದ್ದಂತೆ. ಇವರು ಈಗಾಗಲೇ ಪ್ರಕಟಿಸಿರುವ ಸರ್ವಜ್ಞ ಬೆಳಗಿದ ಜ್ಞಾನದೀವಿಗೆ ನನ್ನ ಅಚ್ಚುಮೆಚ್ಚಿನ ಪುಸ್ತಕ’ ಎಂದು ನುಡಿದರು. ಈ ಕೃತಿಯ ಪರಿಚಯವನ್ನು ಖ್ಯಾತ ಲೇಖಕಿಯಾಗಿರುವ ದೀಪ ಕುಬುಸದ್ರವರು ಮಾಡುತ್ತಾ, ಡಾ. ಎಸ್. ಗಾಯತ್ರಿದೇವಿ ಸಜ್ಜನ್ರವರು ವಚನಗಳ ವಿಶ್ಲೇಷಣೆ ಮಾಡುವಾಗ ಸಿದ್ದೇಶ್ವರ ಸ್ವಾಮಿಗಳ ವಿರಚಿತ ‘ವಚನ ನಿರ್ವಚನದಿಂದ ಆಯ್ದ ನುಡಿಮುತ್ತುಗಳನ್ನು ಹಾಗೂ ಡಾ.ಎಲ್ ಬಸವರಾಜುರವರ ವಿಶ್ಲೇಷಣೆಯನ್ನು ಜೋಡಿಸಿರುವುದು ಈ ಕೃತಿಯ ಮೆರಗನ್ನು ಹೆಚ್ಚಿಸಿದೆ ಎಂದು ನುಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ವೀಣಾ, ಮತ್ತು ಶ್ರೀಮತಿ ಶೀಲಾರವರು ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ಮಾಡಿದರು. ಎಲ್ಲರಿಗೂ ಆತ್ಮೀಯವಾಗಿ ಸ್ವಾಗತವನ್ನು ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಮಾಲಾ ರಾಮಚಂದ್ರ ಇವರು ಕೋರಿದರು.
ಈ ಸಂಘದ ಅಧ್ಯಕ್ಷರಾದ ಶ್ರೀಮತಿ ಸಿ.ಎಸ್. ಕಾತ್ಯಾಯಿನಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸಂಘದ ಧೈಯೋದ್ದೇಶಗಳನ್ನು ತಿಳಿಸಿದರು.
ಸಂಘದ ಗೌರವಾನ್ವಿತ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾರವರು ವೇದಿಕೆಯ ಮೇಲೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಂಘದ ಸದಸ್ಯರಾದ ಶ್ರೀಮತಿ ರುಕ್ಕಿಣಿ ಆನಂದ್ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಚಂದ್ರಕಾಂತ್ ರವರ ಪರಿಚಯವನ್ನು ಮಾಡಿಕೊಟ್ಟರು.
ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಕೆ.ಪಿ. ಲತಾರವರು ಡಾ. ಎಸ್ ಗಾಯತ್ರಿದೇವಿ ಸಜ್ಜನ್ರವರನ್ನು ಪರಿಚಯಿಸುತ್ತಾ ‘ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ನನ್ನ ಮೇಡಂ ಎಂದು ಹೇಳಲು ಹೆಮ್ಮೆಯಾಗುವುದು ಎಂದು ನುಡಿದರು.
ಲೇಖಕಿಯ ಕೃತಿಯ ಬಗ್ಗೆ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಶ್ರೀಯುತ ಲವಕುಮಾರ್ ಸ್ವಾಮಿಯವರು ಮೆಚ್ಚುಗೆಯ ಮಾತುಗಳನ್ನಾಡಿದರು.
ಹೆಸರಾಂತ ವಾಗ್ನಿಗಳಾದ ಶ್ರೀಮತಿ ಕಿರಣ್ ದೇಸಾಯಿಯವರು ಲೇಖಕಿಯನ್ನು ಸನ್ಮಾನಿಸಿದರು.
ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಸಂಘದ ಸದಸ್ಯರಾದ ಶ್ರೀಮತಿ ಜಯಶ್ರೀ ಗಣೇಶ್, ಎಸ್.ಕೆ.ಗಾಯತ್ರಿ, ಸ್ಥಿತಾ ನಂದೀಶ್, ಎನ್.ಎಲ್.ಇಂದಿರಾ, ರುಕ್ಕಿಣಿ ಆನಂದ್, ಮಂಜುಳಾ ರಾಜು ಅಲ್ಲಮರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನ ಸೆಳೆದಿದ್ದು. ಶ್ರೀಮತಿ ಮಂಜುಳಾ ರಾಜುರವರು ಈ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.
