Sunday, November 8, 2026
Sunday, November 8, 2026

ಹೆಗ್ಗೋಡಿನ ನೀನಾಸಮ್ ಸಂಸ್ಥೆ ನಾಟಕ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ: ಡಾ. ಎಚ್.ಎಂ. ಶಿವಕುಮಾರ್

Date:

ಸಾಗರ ತಾಲೂಕಿನ ಹೆಗ್ಗೋಡಿನ ನೀನಾಸಮ್ ಸಂಸ್ಥೆಯು ನಾಟಕ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಈ ಸಂಸ್ಥೆಯ ನಾಟಕ ಪ್ರದರ್ಶನ ವೀಕ್ಷಣೆ ವಿಶೇಷ ಅನುಭವ ನೀಡುತ್ತದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಎಚ್ ಎಂ ಶಿವಕುಮಾರ್ ಹೇಳಿದರು.
ಇಲ್ಲಿನ ಎಲ್ ಬಿ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಹಮ್ಮಿಕೊಂಡಿದ್ದ ನೀನಾಸಮ್ ತಿರುಗಾಟದ ನಾಟಕ ಪ್ರದರ್ಶನದ ಸಂದರ್ಭದಲ್ಲಿ ನೀನಾಸಮ್ ಸಂಸ್ಥೆಯ ಕೆ.ವಿ.ಅಕ್ಷರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಪ್ರದರ್ಶನ ಕಲೆಗಳ ವೀಕ್ಷಣೆ ಮೂಲಕ ವಿಶೇಷ ಅರಿವು ಪಡೆದುಕೊಳ್ಳಲು ಸಾಧ್ಯ. ಕಾಲೇಜಿನ ಆವರಣದಲ್ಲಿ ಸುಸಜ್ಜಿತ ರಂಗಮಂದಿರ ಇದೆ. ಇದರ ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತಿರುಗಾಟದ ನಾಟಕ ಪ್ರದರ್ಶನ ಕ್ಕೆ ನಿರಂತರವಾಗಿ ವ್ಯವಸ್ಥೆ ಮಾಡಲಾಗುವುದು ಎಂದರು.
ನಿವೃತ್ತ ಪ್ರಾಧ್ಯಾಪಕ ಶ್ರೀ ಟಿ ಪಿ ಅಶೋಕ್ ನೀನಾಸಮ್ ತಿರುಗಾಟ ನಾಟಕ ಯೋಜನೆ ಕುರಿತು ಮಾತನಾಡಿದರು.
ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಶ್ರೀ ಕೆ ವಿ ಅಕ್ಷರ ಅವರನ್ನು ಅಭಿನಂದಿಸಲಾಯಿತು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ಸೂರ್ಯನಾರಾಯಣ ರಾವ್, ಖಜಾಂಚಿ ಶ್ರೀ ಕವಲಕೋಡು ವೆಂಕಟೇಶ, ಪ್ರಾಚಾರ್ಯ ಡಾ ಎ ಎಸ್ ಲಕ್ಷ್ಮೀಶ, ವಿದ್ಯಾರ್ಥಿ ವೇದಿಕೆಯ ಪ್ರತಿನಿಧಿಗಳು, ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳು, ರಂಗಾಸಕ್ತರು ಹಾಜರಿದ್ದರು.
ಶ್ರೀ ಮಂಜು ಕೊಡಗು ಅವರ ನಿರ್ದೇಶನದ ‘ಪಾದುಕಾ ಕಿರೀಟಿ’ ಮತ್ತು ಮಂಜು ಕಾಸರಗೋಡು ಅವರ ನಿರ್ದೇಶನದ ‘ಕೊಳ’ ನಾಟಕಗಳ ಪ್ರದರ್ಶನ ವನ್ನು ನೀನಾಸಮ್ ತಿರುಗಾಟದ ಕಲಾವಿದರು ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಬೆಳೆ ವಿಮಾ ಕಂಪನಿಗಳು ರೈತರಿಗೆ ಘೋಷಿಸಿದ ವಿಮಾ ಪರಿಹಾರ ಮೊತ್ತ ನೀಡಿ- ಬಿ.ವೈ.ರಾಘವೇಂದ್ರ

B. Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಗಾರು...

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...