Friday, October 30, 2026
Friday, October 30, 2026

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ‘ಯಶಸ್ವಿ ಲೀಡ್‌ಲೆಸ್ ಪೇಸ್‌ಮೇಕರ್’ ಅಳವಡಿಕೆ

Date:

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಶ್ರೀವತ್ಸ ನಾಡಿಗ್ ಅವರು ಮಧ್ಯ ಕರ್ನಾಟಕ ಭಾಗದಲ್ಲಿಯೇ ಮೊದಲ ಬಾರಿಗೆ ‘ಲೀಡ್‌ಲೆಸ್ ಪೇಸ್‌ಮೇಕರ್’ (ತಂತಿ ರಹಿತ ಪೇಸ್‌ಮೇಕರ್) ಅಳವಡಿಕೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ, ಒಬ್ಬ ವಯೋವೃದ್ಧ ಮಹಿಳೆಗೆ ಮರುಜೀವ ನೀಡಿದ್ದಾರೆ.

ಸುಮಾರು ೭೫ ವರ್ಷದ ಹಿರಿಯ ಮಹಿಳೆಯನ್ನು ತೀವ್ರ ಹೊಟ್ಟೆನೋವು ಮತ್ತು ಶಾಕ್ (ರಕ್ತದೊತ್ತಡ ಕುಸಿತ) ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯಲ್ಲಿ ಇವರಿಗೆ ‘ಮೆಸೆಂಟರಿಕ್ ಇನ್‌ಫಾರ್ಕ್ಷನ್’ (ಕರುಳಿಗೆ ರಕ್ತಸಂಚಾರ ಸ್ಥಗಿತಗೊಂಡು ಕರುಳಿನ ಭಾಗ ಕೊಳೆಯುವ ಗಂಭೀರ ಸ್ಥಿತಿ) ಇರುವುದು ಪತ್ತೆಯಾಯಿತು. ಸಿಟಿ ಸ್ಕ್ಯಾನ್‌ನಲ್ಲಿ ಕರುಳಿನ ಬಹುಭಾಗ ಹಾನಿಯಾಗಿರುವುದು(ಗ್ಯಾಂಗ್ರೀನ್) ಕಂಡುಬಂದ ಹಿನ್ನೆಲೆಯಲ್ಲಿ, ತಕ್ಷಣವೇ ಡಾ ಸತೀಶ್ ಕುಮಾರ್ ಅವರು ಶಸ್ತ್ರಚಿಕಿತ್ಸೆ ನಡೆಸಿ ಕರುಳಿನ ಹಾನಿಗೊಂಡ ಭಾಗವನ್ನು ತೆಗೆದುಹಾಕಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ಇವರಿಗೆ ‘ಆಟ್ರಿಯಲ್ ಫೈಬ್ರಿಲೇಶನ್’ (ಹೃದಯ ಬಡಿತದ ಅಸಮತೋಲನ) ಕಂಡುಬಂತು. ಇದರ ಜೊತೆಗೆ ಸುಮಾರು 5 ಸೆಕೆಂಡುಗಳವರೆಗೆ ಹೃದಯ ಬಡಿತ ಸ್ಥಗಿತಗೊಳ್ಳುವ ಅಪಾಯಕಾರಿ ಲಕ್ಷಣಗಳೂ ಕಂಡುಬಂದವು. ಹೋಲ್ಟರ್ ಪರಿಶೀಲನೆಯಲ್ಲಿ ಇದು ವೇಗದ ಮತ್ತು ನಿಧಾನ ಹೃದಯಬಡಿತ ಎರಡನ್ನೂ ಒಳಗೊಂಡ ಹೃದಯದ ತೊಂದರೆ ಎಂದು ದೃಢಪಟ್ಟಿತು. (ಇಲ್ಲಿಯವರೆಗೆ ಪತ್ತೆಯಾಗದೇ ಇದ್ದ ಈ ಹೃದಯ ಬಡಿತದ ಸಮಸ್ಯೆಯೇ ಆಕೆಯ ಕರುಳಿನ ರಕ್ತಸಂಚಾರ ಸ್ಥಗಿತಕ್ಕೆ ಮೂಲ ಕಾರಣ ಎಂದು ವೈದ್ಯರು ಗುರುತಿಸಿದರು.)

ಲೀಡ್‌ಲೆಸ್ ಪೇಸ್‌ಮೇಕರ್ ಆಯ್ಕೆ ಏಕೆ?
ರೋಗಿಗೆ ಆಗಲೇ ಸೋಂಕು ಮತ್ತು ಗುಣವಾಗದ ಗಾಯ ಇದ್ದ ಕಾರಣ, ಸಾಂಪ್ರದಾಯಿಕ ಪೇಸ್‌ಮೇಕರ್ (ತಂತಿ ಮತ್ತು ಚರ್ಮದಡಿ ಬ್ಯಾಟರಿ ಘಟಕವಿರುವ ಮಾದರಿ) ಅಳವಡಿಸುವುದು ಅಪಾಯಕಾರಿಯಾಗಿತ್ತು.ಈ ಹಿನ್ನೆಲೆಯಲ್ಲಿ, ಸೋಂಕಿನ ಅಪಾಯ ಅತ್ಯಂತ ಕಡಿಮೆ ಇರುವ ಮತ್ತು ಸುಲಭವಾಗಿ ಅಳವಡಿಸಬಹುದಾದ ‘ಲೀಡ್‌ಲೆಸ್ ಪೇಸ್‌ಮೇಕರ್’ ಅಳವಡಿಕೆಗೆ ವೈದ್ಯರ ತಂಡ ನಿರ್ಧರಿಸಿತು.

ಲೀಡ್‌ಲೆಸ್ ಪೇಸ್‌ಮೇಕರ್ ಎಂದರೇನು? ಸಾಮಾನ್ಯ ಪೇಸ್‌ಮೇಕರ್‌ಗಿಂತ ಇದರ ಅನುಕೂಲಗಳೇನು?
ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಲ್ಲಿ ಎದೆಯ ಚರ್ಮದಡಿ ಒಂದು ಸಣ್ಣ ಬ್ಯಾಟರಿ ಘಟಕವನ್ನು ಅಳವಡಿಸಿ, ಅದರಿಂದ ತಂತಿಗಳ (ಲೀಡ್ಸ್) ಮೂಲಕ ಹೃದಯಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಆದರೆ ‘ಲೀಡ್‌ಲೆಸ್ ಪೇಸ್‌ಮೇಕರ್’ ಒಂದು ಚಿಕ್ಕ ಗುಳಿಗೆಯ ಗಾತ್ರದ ಸಾಧನವಾಗಿದ್ದು, ಇದನ್ನು ತೊಡೆಸಂದಿಯ ರಕ್ತನಾಳದ ಮೂಲಕವೇ ನೇರವಾಗಿ ಹೃದಯದೊಳಗೆ ಅಳವಡಿಸಲಾಗುತ್ತದೆ. ಇದಕ್ಕೆ ಯಾವುದೇ ತಂತಿ ಅಥವಾ ಪ್ರತ್ಯೇಕ ಬ್ಯಾಟರಿ ಘಟಕದ ಅಗತ್ಯವಿಲ್ಲ.

ಇದರ ಪ್ರಮುಖ ಅನುಕೂಲಗಳು:

  • ಎದೆಯ ಚರ್ಮದಡಿ ಯಾವುದೇ ಕಟ್ ಅಗತ್ಯವಿಲ್ಲ, ಆದ್ದರಿಂದ ಸೋಂಕಿನ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ
  • ತಂತಿ ಇಲ್ಲದಿರುವುದರಿಂದ ತಂತಿ ಸ್ಥಳಾಂತರಗೊಳ್ಳುವ ಸಮಸ್ಯೆ ಇರುವುದಿಲ್ಲ
  • ಶಸ್ತ್ರಚಿಕಿತ್ಸೆಯ ಸಮಯ ಕಡಿಮೆ, ಚೇತರಿಕೆ ಶೀಗ್ರವಾಗುತ್ತದೆ
  • ಈಗಾಗಲೇ ಸೋಂಕು, ಗಾಯ ಅಥವಾ ದುರ್ಬಲ ಆರೋಗ್ಯ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದು ಒಳ್ಳೆಯ ಆಯ್ಕೆ
  • ದೇಹದ ಹೊರಗೆ ಯಾವುದೇ ಗುರುತು ಅಥವಾ ಊತ ಕಾಣಿಸುವುದಿಲ್ಲ

ಶಸ್ತ್ರಚಿಕಿತ್ಸೆ ಮತ್ತು ಫಲಿತಾಂಶ

ಡಾ. ಶ್ರೀವತ್ಸ ನಾಡಿಗ್ ಅವರ ನೇತೃತ್ವದಲ್ಲಿ ಲೀಡ್‌ಲೆಸ್ ಪೇಸ್‌ಮೇಕರ್ ಅಳವಡಿಕೆ ಯಶಸ್ವಿಯಾಗಿ ನಡೆಯಿತು. ಹಲವು ವಾರಗಳ ಚಿಕಿತ್ಸೆ ಮತ್ತು ಆರೈಕೆಯ ನಂತರ ರೋಗಿ ಸಂಪೂರ್ಣ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.

ಇದು ಮಧ್ಯ ಕರ್ನಾಟಕ ಭಾಗದಲ್ಲಿ ನಡೆದ ಮೊದಲ ಲೀಡ್‌ಲೆಸ್ ಪೇಸ್‌ಮೇಕರ್ ಅಳವಡಿಕೆ ಶಸ್ತ್ರಚಿಕಿತ್ಸೆಯಾಗಿದ್ದು, ಶಿವಮೊಗ್ಗ ಭಾಗದ ಜನರಿಗೆ ಇನ್ನು ಮುಂದೆ ಇಂತಹ ಸುಧಾರಿತ ಹೃದಯ ಚಿಕಿತ್ಸೆಗಳಿಗೆ ಬೇರೆ ನಗರಗಳಿಗೆ ತೆರಳುವ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ್ ಶರ್ಮಾ, ಮಾರುಕಟ್ಟೆಯ ಹಿರಿಯ ವ್ಯವಸ್ಥಾಪಕರು ಶ್ರೀ ಶೈಲೇಶ್ ಎಸ್. ಎನ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ರಾಜ್ಯೋತ್ಸವ – ನಮ್ಮ ಹೆಮ್ಮೆಯ ಹಬ್ಬ

Kannada Rajyotsava ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ರಾಜ್ಯೋತ್ಸವವು ಹೆಮ್ಮೆ, ಸ್ವಾಭಿಮಾನ ಮತ್ತು...

Kuvempu University ಕುವೆಂಪು ವಿವಿ ಸಂಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ

Kuvempu University ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ...

Radio Shivamogga ಕನ್ನಡ ರಾಜ್ಯೋತ್ಸವಕ್ಕೆ ರೇಡಿಯೋ ಶಿವಮೊಗ್ಗ 90.8 ಎಫ್.ಎಂ.ನಿಂದ 24 ಗಂಟೆಗಳ ನಿರಂತರ ನೇರಪ್ರಸಾರ

‘ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ. ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ...

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...