Thursday, October 29, 2026
Thursday, October 29, 2026

ಅಭಿವೃದ್ಧಿ ಹಾದಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರ : ಕಿಮ್ಮನೆ ಜಯರಾಮ್

Date:

ಸ್ವಂತ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಮುನ್ನಡೆದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಉದ್ಯಮಿ ಕಿಮ್ಮನೆ ಜಯರಾಮ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರವಾಸೋದ್ಯಮ ಎನ್ನುವುದು ಈಗ ಬಹಳ ದೊಡ್ಡ ಉದ್ಯಮವಾಗಿದೆ. ದಕ್ಷಿಣ ಭಾರತದಂತಹ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾದಿಯಲ್ಲಿದೆ. ಈಗ ಹೆಲಿಟೂರಿಸಂನಂತಹ ಹೊಸ ಉದ್ಯಮಕ್ಕೆ ಚಾಲನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ಸರ್ಕಾರವೂ ಸಹ ತನ್ನ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯ ಪ್ರವಾಸದ ಸರ್ಕ್ಯೂಟ್ ಮಾಡಬೇಕೆಂದು ಸಿಎಂ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದ್ದೇನೆ. ಅದಕ್ಕೆ ಪೂರಕವಾಗಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಶಿವಮೊಗ್ಗ ಪ್ರವಾಸಕ್ಕೆ ಹೆಬ್ಬಾಗಿಲು ಆಗಬೇಕು. ಈ ಕನಸು ಮಾಡಲು ಶಿವಮೊಗ್ಗ ಜನತೆಯೂ ಕೈಜೋಡಿಸಬೇಕು. ರಾಷ್ಟ್ರೀಯ ಹೆದ್ದಾರಿ ಮಾರ್ಚ್ ನಲ್ಲಿ ಪೂರ್ಣಗೊಳ್ಳಲಿದೆ. ಕೆಳದಿ, ಇಕ್ಕೇರಿ, ಪಕ್ಷಿಧಾಮ, ಜಲಾಶಯಗಳು, ಕವಲೇದುರ್ಗ ಸೇರಿ ಅನೇಕ ಐತಿಹಾಸಿಕ ತಾಣಗಳಿವೆ ಎಂದು ಹೇಳಿದರು.

ಈಗ ಆಮೇರಿಕಾ, ಫ್ರಾನ್ಸ್ ನಂತಹ ದೇಶಗಳು ಯುದ್ಧ ಮತ್ತಿತರ ಕಾರಣಗಳಿಂದ ನಲುಗಿದೆ. ಭಾರತದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ. ನಾವುಗಳು ನಮ್ಮ ಪ್ರದೇಶಗಳನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣಗಳನ್ನಾಗಿ ಮಾಡೋಣ ಎಂದರು.

ಭಾರತದಲ್ಲಿ ಶೇ. 65ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆಹಾರದ ಕೊರತೆ ನಮ್ಮ ದೇಶದಲ್ಲಿ ಇಲ್ಲ. ಎಐನಲ್ಲಿ ಆಹಾರ ತಿನ್ನುವುದಕ್ಕೆ ಆಗುತ್ತದೆಯೇ. ಆಹಾರಕ್ಕಾಗಿ ಸಾಮಾನ್ಯ ಜನರೇ ಈಗ ದಿನಕ್ಕೆ 300 ರಿಂದ 400 ರೂ. ಖರ್ಚು ಮಾಡುತ್ತಾರೆ. ಆಹಾರೋದ್ಯಮ ಬಹಳ ಚೆನ್ನಾಗಿ ಬೆಳೆದಿದೆ. ಬ್ರೆಜಿಲ್ ದೇಶವೇ ಆಹಾರೋದ್ಯಮಕ್ಕೆ ಹೆಚ್ಚು ಒತ್ತುಕೊಟ್ಟಿದೆ ಎಂದರು.

ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಆಹಾರೋದ್ಯಮಕ್ಕೂ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಕಾರ್ಯದರ್ಶಿ ಕೆ.ಎಸ್.ಶೈಲಿನ್ ಬಾಬು, ಎನ್.ವಿ.ಭಟ್, ಎಸ್.ದತ್ತಾತ್ರಿ, ವನಿತಾ ಸಂದೀಪ್, ಆರ್.ಆನಂದ್, ವೀರಣ್ಣ ಎ.ಹುಗ್ಗಿ, ಬಿ.ಎನ್.ಸತ್ಯನಾರಾಯಣ, ಟಿ.ಆರ್.ಅಶ್ವತ್ಥ್ನಾರಾಯಣ ಶೆಟ್ಟಿ, ಮಹಾದೇವ, ವಸಂತ ಹೋಬಳಿದಾರ್ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿ ಸಂಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ

Kuvempu University ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ...

Radio Shivamogga ಕನ್ನಡ ರಾಜ್ಯೋತ್ಸವಕ್ಕೆ ರೇಡಿಯೋ ಶಿವಮೊಗ್ಗ 90.8 ಎಫ್.ಎಂ.ನಿಂದ 24 ಗಂಟೆಗಳ ನಿರಂತರ ನೇರಪ್ರಸಾರ

‘ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ. ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ...

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...

Hartalu Halappa ರಾಜ್ಯದಲ್ಲಿ ವಿದ್ಯುತ್ ಕೊರತೆ: ಸರ್ಕಾರದ ಅಸಮರ್ಥತೆ- ಮಾಜಿ ಸಚಿವ ಹರತಾಳು ಹಾಲಪ್ಪ ಗಂಭೀರ ಪ್ರಶ್ನೆ.

Hartalu Halappa ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ...