Saturday, October 24, 2026
Saturday, October 24, 2026

ಸೋಮಣ್ಣ ಆನೆಗೆ ನಿಯಮಾನುಸಾರ ಅಂಬಾರಿಗೆ ನಿರ್ಧರಿಸಲಾಗಿತ್ತು. ಅವಘಡದ ಬಗ್ಗೆ ಸಂಪೂರ್ಣ ವರದಿ ಬಂದ ನಂತರ ಕ್ರಮ- ಮಧು ಬಂಗಾರಪ್ಪ

Date:

ದಸರಾ ಮಹೋತ್ಸವದ ಅಂತಿಮ ದಿನವಾದ ಅಕ್ಟೋಬರ್ 21 ರಂದು ಮಧ್ಯಾಹ್ನ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಅಂಬಾರಿ ಮೆರವಣಿಗೆಯಲ್ಲಿ ಆಕಸ್ಮಿಕವಾಗಿ ನಡೆದ ಅವಘಡದ ಕುರಿತು, ಸರ್ಕಾರವು ಸಂಪೂರ್ಣ ವರದಿ ಪಡೆದು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಮಹಾನಗರಪಾಲಿಕೆ ಪರಿಷತಗ ಸಭಾಂಗಣದಲ್ಲು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ದಸರಾ ಉತ್ಸವವು ಅತ್ಯಂತ ಸಂಭ್ರಮ ಹಾಗೂ ಅದ್ದೂರಿಯಾಗೇ ನಡೆದಿದೆ. ಆದರೆ ಅಂತಿಮ ದಿನವಾದ ಅಕ್ಟೋಬರ್ 21ರಂದು ಅಂಬಾರಿ ಹೊತ್ತ ‘ಸೋಮಣ್ಣ’ ಆನೆಯು ಗಾಬರಿಗೊಂಡು ಓಡಿದ ಕಾರಣ ಅಂಬಾರಿ ಬಿದ್ದು ಅವಘಡ ಸಂಭವಿಸಿದೆ ಎಂದು ವಿವರಿಸಿದರು.
ಯಾವುದೇ ಪ್ರಾಣಹಾನಿಯಿಲ್ಲ – ಎಚ್ಚೆತ್ತುಕೊಳ್ಳುವ ಸಂದರ್ಭ: ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಮಾನವ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಇದು ನಮಗೆ ಗಂಭೀರವಾಗಿ ಎಚ್ಚೆತ್ತುಕೊಳ್ಳುವ ಸಂದರ್ಭವನ್ನು ಸೃಷ್ಟಿಸಿದೆ ಎಂದು ಸಚಿವರು ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಅರಣ್ಯದಿಂದ ಆನೆಗಳನ್ನು ಕರೆತಂದು ತರಬೇತಿ ನೀಡಿ ಅಂಬಾರಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯೂ ಯಶಸ್ವಿಯಾಗಿ ತರಬೇತಿ ನೀಡಲಾಗಿತ್ತು. ಸರ್ಕಾರದ ಅಧಿಕೃತ ಅನುಮತಿ ಪಡೆದು, ಅರಣ್ಯ ಇಲಾಖೆಯ ನಿಯಮಾನುಸಾರ ಆನೆಗಳ ಆಯ್ಕೆ ಮತ್ತು ತರಬೇತಿ ನೀಡಲಾಗಿದೆ.
ಒಮ್ಮತದ ನಿರ್ಧಾರ: ಅಧಿಕಾರಿಗಳ ಸಂಪೂರ್ಣ ಒಮ್ಮತ, ಮಾಹಿತಿ ಹಾಗೂ ಆತ್ಮವಿಶ್ವಾಸದಿಂದಲೇ ‘ಸೋಮಣ್ಣ’ ಆನೆಯೇ ಅಂಬಾರಿ ಹೊರಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತೇ ಹೊರತು ಕೊನೆಯ ಕ್ಷಣದ ನಿರ್ಧಾರವಲ್ಲ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ತರಬೇತಿ ನೀಡಲಾಗಿತ್ತು. ಸೋಮಣ್ಣ ಆನೆಗೆ ಅಂಬಾರಿ ಹೊರುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೇ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಅಂಬಾರಿ ಸಾಗಿಸುವ ಪ್ರಕ್ರಿಯೆಯಲ್ಲಿ ಡಿಸಿಎಫ್, ಡಿಸಿ, ಎಸ್‌ಪಿ, ಸಿಇಓ, ಎಡಿಸಿ, ಶಾಸಕರು ಹಾಗೂ ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಸಮಿತಿಯವರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉತ್ತಮ ತಂಡದ ಕೆಲಸ ಇಲ್ಲಿ ನಡೆದಿದೆ. ಮುಖ್ಯಮಂತ್ರಿಗಳು ಸಹ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಅವಘಡದ ವೇಳೆ ದೇವಿಯ ವಿಗ್ರಹ ಹಾಗೂ ಆಭರಣಗಳಿಗೆ ಯಾವುದೇ ನಷ್ಟ ಸಂಭವಿಸಿಲ್ಲ. ಇತರೆ ಸಣ್ಣಪುಟ್ಟ ನಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು.
ಮುಂದಿನ ಎಚ್ಚರಿಕೆ: ಲಭ್ಯವಿರುವ ಎಲ್ಲ ಸಾಕ್ಷ್ಯಾಧಾರಗಳಿಂದ ಆನೆ ಗಾಬರಿಯಾಗಿ ಈ ಅವಘಡ ಸಂಭವಿಸಿದೆ ಎಂಬುದು ತಿಳಿದುಬಂದಿದೆ. ಇನ್ನು ಮುಂದೆ ಅಂಬಾರಿ ಹೊರುವ ವಿಚಾರದಲ್ಲಿ ಮತ್ತಷ್ಟು ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಬೇಕು ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ಈ ಘಟನೆ ನಮಗೆ ನೀಡಿದೆ ಎಂದು ಸಚಿವರು ತಿಳಿಸಿದರು. ಸರ್ಕಾರಕ್ಕೆ ಈ ಕುರಿತು ನೆನ್ನೆ ವರದಿಯನ್ನು ಸಲ್ಲಿಸಲಾಗಿದೆ ಎಂದರು
ಈ ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಅಧ್ಯಕ್ಷ ಚಂದ್ರಭೂಪಾಲ್, ಎಸ್‌ಪಿ ನಿಖಿಲ್ ಬಿ., ಜಿ.ಪಂ. ಸಿಇಓ ರಿಷಿ ಆನಂದ್, ಸಿಸಿಎಫ್ ಹನುಮಂತಪ್ಪ, ಎಡಿಸಿ ಅಭಿಷೇಕ್ ವಿ., ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಹಾಗೂ ಇತರೆ ಮುಖಂಡರು ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. College Sagara ಸಾಗರದ ಎಲ್ ಬಿ ಕಾಲೇಜಿನಲ್ಲಿ ರಕ್ತದಾನ ಮತ್ತು ನೇತ್ರ,ಆರೋಗ್ಯ ತಪಾಸಣ ಶಿಬಿರ

L.B. College Sagara ಸಾಗರದ ಎಲ್.ಬಿ. ಕಾಲೇಜಿನಲ್ಲಿ ರಕ್ತದಾನ, ನೇತ್ರ ತಪಾಸಣೆ...

S. N. Channabasappa ಕಿತ್ತೂರು ರಾಣಿ ಚೆನ್ನಮ್ಮನ ಸ್ವಾಭಿಮಾನ,ಶೌರ್ಯಗಳು ನಿತ್ಯ ಪ್ರೇರಣದಾಯಕ- ಶಾಸಕ ಚನ್ನಬಸಪ್ಪ

S. N. Channabasappa "ಮಾತೃಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಕೆಚ್ಚೆದೆಯಿಂದ...

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...