Saturday, October 24, 2026
Saturday, October 24, 2026

ಸೊರಬದಲ್ಲಿ ದಸರಾ ಉತ್ಸವವನ್ನ ಎಲ್ಲರೂ ಸೇರಿ ಪಕ್ಷಾತೀತವಾಗಿ ಆಚರಿಸಿದ್ದೇವೆ- ಜಂಟಿ ಹೇಳಿಕೆ

Date:

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಪ್ರಾಂಗಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಹಮ್ಮಿಕೊಂಡ ಸಾರ್ವಜನಿಕ ದಸರಾ ಉತ್ಸವ ಅತ್ಯಂತ ಯಶಸ್ವಿಯಾಗಿ ಮತ್ತು ದಸರಾ ಉತ್ಸವದ ಬನ್ನಿ ಮುಡಿಯುವ ಕಾರ್ಯಕ್ರಮವು ಸಹ ವಿಜೃಂಭಣೆಯಾಗಿ ಜರುಗಿತು ಎಂದು ಸಮಿತಿಯ ಅಧ್ಯಕ್ಷ ಜಿ. ಪ್ರಶಾಂತ್ ಮೇಸ್ತಿç ಹಾಗೂ ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಸರ್ವ ಸಮುದಾಯದವರ ಸಹಕಾರದೊಂದಿಗೆ ದಸರಾ ಉತ್ಸವ ಆಚರಿಸಲಾಯಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ಎಸ್. ಮಧುಬಂಗಾರಪ್ಪ ಅವರ ಸಹಕಾರದಿಂದ ಪ್ರತಿ ವರ್ಷಕ್ಕಿಂತ ಈ ಬಾರಿ ಉತ್ಸವಕ್ಕೆ ಮೆರಗು ಬಂದಿತು. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆಯ ಮೇರೆಗೆ ಪ್ರೋತ್ಸಾಹ ನೀಡುವ ಜೊತೆಗೆ ವೇದಿಕೆಯ ಅವಕಾಶವನ್ನು ಕಲ್ಪಿಸಲಾಯಿತು. ಸರ್ವ ಸಮುದಾಯಗಳ ಭಜನಾ ಮಂಡಳಿಯವರು ನಿತ್ಯ ಭಜನಾ ಸೇವೆ ಸಲ್ಲಿಸಿದರೆ, ದಸರಾ ಉತ್ಸವ ಉತ್ಸವ ಮಹಿಳಾ ಸಮಿತಿಯವರು ಲಲಿತ ಸಹಸ್ರನಾಮ ಪಠಣವನ್ನು ಮಾಡಿದರು ಎಂದಿದ್ದಾರೆ.
ದಸರಾ ಉತ್ಸವದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಲಾಗಿತ್ತು. ಪ್ರಚಾರ ಸಮಿತಿ, ವೇದಿಕೆ ಅಲಂಕಾರ ಸಮಿತಿ, ಪಟ್ಟಣ ಅಲಂಕಾರ ಸಮಿತಿ, ದಸರಾ ಮೆರವಣಿಗೆ ಉಸ್ತುವಾರಿ ಸಮಿತಿ, ಪೆಂಡಾಲ್ ಸಮಿತಿ, ಪತ್ರಿಕಾ ಪ್ರಚಾರ ಸಮಿತಿ, ದಾಸೋಹ ಸಮಿತಿ, ಮಹಿಳಾ ಸಮಿತಿ ಹೀಗೆ ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಎಲ್ಲಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶ್ರೀ ದುರ್ಗಾ ದೇವಿಯ ಮೂರ್ತಿಯನ್ನು ಕಲಾವಿದ ಕೆ.ಎನ್. ರಾಘವೇಂದ್ರ ಅವರು ಕಲಾತ್ಮಕವಾಗಿ ನಿರ್ಮಿಸಿದ್ದರು. ಉಳಿದಂತೆ ಸಾರ್ವಜನಿಕರು ಸಹ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹ ನೀಡಿದ್ದಾರೆ ಎಂದಿದ್ದಾರೆ.
ಸ್ಥಳೀಯವಾಗಿ ಎಲೆ ಮರೆಯ ಕಾಯಿಯಂತೆ ಇದ್ದವರಿಗೆ ಒಂದಡೆ ವೇದಿಕೆ ಅವಕಾಶ ಮತ್ತೊಂದಡೆ ಸಾಧನೆ ಮಾಡಿದವರಿಗೆ ‘ದಸರಾ ಉತ್ಸವ ಸಾಧಕ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಪತ್ರಿಕೋದ್ಯಮ ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ ಕ್ಷೇತ್ರ ಹೀಗೆ ವಿವಿಧ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವಿಸುವ ಕೆಲಸವನ್ನು ಸಮಿತಿಯಿಂದ ಮಾಡಲಾಯಿತು. ವಿಶೇಷವಾಗಿ ಮಹಿಳಾ ದಸರಾ ಮತ್ತು ಮಕ್ಕಳ ದಸರಾ ಆಚರಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಗುರುಗಳಿಂದ ಆಶೀರ್ವಚನ, ಜ್ಞಾನ ವಂತರಿAದ ಉಪನ್ಯಾಸಗಳು ಜರುಗಿದವು. ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಸಿ, ಉತ್ತಮವಾಗಿ ಕವಿತೆಗಳನ್ನು ವಾಚನ ಮಾಡಿದವರಿಗೆ ಬಹುಮಾನ ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಸಿ, ಉತ್ತಮವಾಗಿ ರಂಗೋಲಿ ಬಿಡಿಸಿದವರಿಗೆ ಪುರಸ್ಕಾರವನ್ನು ನೀಡುವ ಕೆಲಸನ್ನು ಮಾಡಲಾಯಿತು. ಮಹಿಳೆಯರಿಂದ ಮಹಿಳೆಯರಿಗಾಗಿ ದಾಂಡಿಯ ನೃತ್ಯವನ್ನು ನಡೆಸಲಾಯಿತು. ಮುಂದಿನ ದಿನಗಳಲ್ಲಿ ಕೃಷಿಕರಿಗಾಗಿ ‘ರೈತ ದಸರಾ’, ಆರೋಗ್ಯದ ದೃಷ್ಟಿಯಿಂದ ‘ವೈದ್ಯ ದಸರಾ’ ಹೀಗೆ ವೈವಿಧ್ಯಮಯವಾಗಿ ದಸರಾ ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವು ಅಚ್ಚುಕಟ್ಟಾಗಿ, ಜಿಲ್ಲೆಯಲ್ಲಿಯೇ ಮಾದರಿಯಾಗಿ ನಡೆಯಲು ಕಾರಣೀಕರ್ತರಾದ ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಅವರಿಗೆ ಮೊದಲನೇದಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ. ಕಾರ್ಯಕ್ರಮಗಳಿಗೆ ಪ್ರಯೋಜಕತ್ವ ನೀಡಿದ ದಾನಿಗಳಿಗೆ, ಕಲಾವಿದರಿಗೆ, ಸಾಧಕರಿಗೆ ಮತ್ತು ಪ್ರಚಾರ ನೀಡಿದ ಮಾಧ್ಯಮದವರಿಗೆ, ಕಾರ್ಯಕ್ರಮಕ್ಕೆ ಕೈ ಜೋಡಿಸಿದ ಎಲ್ಲಾ ಇಲಾಖೆಯರಿಗೆ ಧನ್ಯವಾದಗಳು. ತನು, ಮನ, ಧನದೊಂದಿಗೆ ಸಹಕಾರ ನೀಡಿದ ಸಾರ್ವಜನಿಕರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. College Sagara ಸಾಗರದ ಎಲ್ ಬಿ ಕಾಲೇಜಿನಲ್ಲಿ ರಕ್ತದಾನ ಮತ್ತು ನೇತ್ರ,ಆರೋಗ್ಯ ತಪಾಸಣ ಶಿಬಿರ

L.B. College Sagara ಸಾಗರದ ಎಲ್.ಬಿ. ಕಾಲೇಜಿನಲ್ಲಿ ರಕ್ತದಾನ, ನೇತ್ರ ತಪಾಸಣೆ...

S. N. Channabasappa ಕಿತ್ತೂರು ರಾಣಿ ಚೆನ್ನಮ್ಮನ ಸ್ವಾಭಿಮಾನ,ಶೌರ್ಯಗಳು ನಿತ್ಯ ಪ್ರೇರಣದಾಯಕ- ಶಾಸಕ ಚನ್ನಬಸಪ್ಪ

S. N. Channabasappa "ಮಾತೃಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಕೆಚ್ಚೆದೆಯಿಂದ...

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...