Wednesday, October 21, 2026
Wednesday, October 21, 2026

ಶಿವಮೊಗ್ಗ ದಸರಾ- ಮನ ಸೆಳೆದ “ಲೇಸರ್ ಶೋ”

Date:

ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಅತ್ಯಂತ ವೈಭವೋಪೇತವಾಗಿ ಜರುಗುತ್ತಿರುವ ‘ಶಿವಮೊಗ್ಗ ನಾಡಹಬ್ಬ ದಸರಾ – 2026’ ಮಹೋತ್ಸವದ ಅಂಗವಾಗಿ, ನಗರದಲ್ಲೇ ಇದೇ ಮೊಟ್ಟಮೊದಲ ಬಾರಿಗೆ ಶಿವಮೊಗ್ಗದ ಶ್ರೀಮಂತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ವಿನೂತನ ‘ಲೇಸರ್ ಶೋ’ (Laser Show) ಪ್ರದರ್ಶನವನ್ನು ಮಹಾನಗರ ಪಾಲಿಕೆಯ ಆವರಣದಲ್ಲಿ ನಿನ್ನೆ ಸಂಜೆ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.

ಬೆಳಕು ಮತ್ತು ಧ್ವನಿಯ ಅದ್ಭುತ ಸಂಯೋಜನೆಯಲ್ಲಿ ಮೂಡಿಬಂದ ಈ ಲೇಸರ್ ಶೋ ಪ್ರದರ್ಶನವು ಕೆಳದಿ ನಾಯಕರ ಆಳ್ವಿಕೆ, ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗುರುತುಗಳು, ಮಲೆನಾಡಿನ ಸಾಂಸ್ಕೃತಿಕ ಗರಿಮೆ ಹಾಗೂ ಆಧುನಿಕ ಶಿವಮೊಗ್ಗದ ವಿಕಾಸವನ್ನು ಅತ್ಯಂತ ರೋಮಾಂಚಕವಾಗಿ ಅನಾವರಣಗೊಳಿಸಿತು. ನಮ್ಮ ಭವ್ಯ ಇತಿಹಾಸವನ್ನು ಯುವಪೀಳಿಗೆಗೆ ಹಾಗೂ ನಾಗರಿಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಲುಪಿಸುತ್ತಿರುವ ಮಹಾನಗರ ಪಾಲಿಕೆಯ ಈ ವಿನೂತನ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...