ಅಕ್ಟೋಬರ್ 19ರ ಸೋಮವಾರದಂದು ಶ್ರೀಮತಿ ಸೀತಾ ಮತ್ತು ಶ್ರೀ ಬಸಂತ ನಾಯಕ್ ಕುಟುಂಬದವರ ವತಿಯಿಂದ ರೇಣುಕಾ ದೇವಿಯ ವಿಶೇಷ ಅಲಂಕಾರ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀಮತಿ ಡಾ. ಸುಜಾತ ಮತ್ತು ಡಾ. ಬಾಲಸುಬ್ರಮಣ್ಯ ಕುಟುಂಬದವರ ವತಿಯಿಂದ ಶ್ರೀ ದುರ್ಗಾ ಮಹಾಲಕ್ಷ್ಮಿ ಹೋಮವನ್ನು ನೆರವೇರಿಸಲಾಯಿತು.
ಇನ್ನು ಅಕ್ಟೋಬರ್ 20ರ ಮಂಗಳವಾರದಂದು ಶ್ರೀಮತಿ ಸುಜಾತ ಮತ್ತು ಶ್ರೀ ಗೋವಿಂದರಾಯ ನಾಯಕ್ ಅವರ ವತಿಯಿಂದ ದೇವಿಗೆ ಮಹಾಕಾಳಿ ಅಲಂಕಾರ ಮಾಡಲಾಗುತ್ತದೆ. ಶ್ರೀಮತಿ ಡಾ. ಕಾವ್ಯ ಮತ್ತು ಡಾ. ಅಕ್ರಮಯ್ಯ ಕುಟುಂಬದವರ ವತಿಯಿಂದ ಬನಶಂಕರಿ ಹೋಮವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 7 ಗಂಟೆಯಿಂದ ವಿದುಷಿ ಸಿರಿಕಟ್ಟೆ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ರಮೇಶ್ ದಳವಾಯಿ ಮತ್ತು ಶ್ರೀಮತಿ ವಿನೋದ ಅವರ ವತಿಯಿಂದ ಉಯ್ಯಾಲೆ ಸೇವೆಯನ್ನು ಏರ್ಪಡಿಸಲಾಗಿದೆ.
ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
