2026-27ನೇ ಸಾಲಿನ ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಂಭವವಿದೆ. ಇದರ ಮುನ್ನೆಚ್ಚರಿಕೆ ಕ್ರಮವಾಗಿ, ಜಿಲ್ಲೆಯ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಉಚಿತವಾಗಿ ವಿವಿಧ ತಳಿಯ ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ, ಜಾನುವಾರು ಹೊಂದಿರುವ ಹಾಗೂ ನೀರಾವರಿ ಜಮೀನು ಹೊಂದಿರುವ ಆಸಕ್ತ ರೈತರಿಗೆ ಆದ್ಯತೆ ಮೇರೆಗೆ ಈ ಮೇವಿನ ಕಿರುಪೊಟ್ಟಣಗಳನ್ನು ವಿತರಿಸಲಾಗುತ್ತದೆ. ಈ ಯೋಜನೆ ಸೌಲಭ್ಯವನ್ನು ಪಶುವೈದ್ಯಕೀಯ ಸಂಸ್ಥೆಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ನಿಯಮಾನುಸಾರ ನೀಡಲಾಗುವುದು.
ಆಸಕ್ತ ರೈತರು ಉಚಿತ ಮೇವಿನ ಬೀಜ ಪಡೆಯಲು ಆಧಾರ್ ಕಾರ್ಡ್, ಫ್ರೂಟ್ ಐಡಿ,
ಜಮೀನಿನ ಪಹಣಿ ಪ್ರತಿಯೊಂದಿಗೆ ಒಂದು ವಾರದ ಒಳಗಾಗಿ ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ:
ಹೆಚ್ಚುವರಿ ಮೇವು ಹೊಂದಿರುವ ರೈತರ ಗಮನಕ್ಕೆ:
ಒಂದು ವೇಳೆ ರೈತರ ಬಳಿ ತಮ್ಮ ಜಾನುವಾರುಗಳಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚುವರಿ ಮೇವು ಲಭ್ಯವಿದ್ದರೆ, ಅಂತಹ ರೈತರು ತಮ್ಮ ಬಳಿ ಇರುವ ಹೆಚ್ಚಿನ ಮೇವಿನ ಪ್ರಮಾಣ, ದರ, ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಉಚಿತ ಮೇವಿನ ಬೀಜದ ಪೊಟ್ಟಣ ಪಡೆಯಲು ರೈತರಿಂದ ಅರ್ಜಿ ಆಹ್ವಾನ
Date:
