Friday, October 9, 2026
Friday, October 9, 2026

“ಶಾಸಕರುಗಳಿಗೆ ಯಾವುದೇ ತೊಂದರೆಯಾದಂತೆ ಗಮನಹರಿಸಿ” ಉಪಸಭಾಪತಿ ಡಾ. ಉಮಾಶ್ರೀ ಶಾಸಕರ ಭವನದ ಅಧಿಕಾರಿಗಳಿಗೆ ಸೂಚನೆ

Date:

ಶಾಸಕರ ಭವನದಲ್ಲಿ ವಾಸ್ತವ್ಯವಿರುವ ಶಾಸಕರುಗಳ ಶಾಂತಿ ಮತ್ತು ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗಬಾರದು; ವೈದ್ಯಕೀಯ ಸೇವೆ ಇನ್ನಿತರ ಸೌಲಭ್ಯಗಳ ಬಗ್ಗೆ ಗಮನಹರಿಸುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಗಳು ಹಾಗೂ ಪರಿಷತ್ತಿನ ವಸತಿ ಸಮಿತಿಯ ಅಧ್ಯಕ್ಷರಾದ ಡಾ. ಉಮಾಶ್ರೀ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಸತಿ ಸಮಿತಿಯ ಸಭೆ ನಡೆಸಿದ ಬಳಿಕ ಸಮಿತಿಯ ಸದಸ್ಯರೊಂದಿಗೆ ಶಾಸಕರ ಭವನಕ್ಕೆ ದಿಢೀರ್ ಭೇಟಿ ಮಾಡಿದ ಉಪಸಭಾಪತಿಗಳು, ಶಾಸಕರ ಭವನದ ಕೊಠಡಿಗಳು, ಕಾರಿಡಾರ್ಗಳು ಹಾಗೂ ಆವರಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರು, ವಿದ್ಯುತ್ ಮತ್ತು ಪೀಠೋಪಕರಣಗಳ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದು ಹೇಳಿದರು.

ಮಹಿಳಾ ಶಾಸಕರಿಗೆ ಪ್ರತ್ಯೇಕ ಹೆಲ್ತ್ ಕ್ಲಬ್

ಮೊದಲಿಗೆ ಶಾಸಕರ ಭವನದ ಹೆಲ್ತ್ ಕ್ಲಬ್ ಗೆ ಭೇಟಿ ನೀಡಿ, ಶಾಸಕರುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು; ಅಗತ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಸಾಧ್ಯವಾದರೆ ಮಹಿಳಾ ಶಾಸಕರಿಗೆ ಪ್ರತ್ಯೇಕವಾದ ಹೆಲ್ತ ಕ್ಲಬ್ ತೆರೆಯಬೇಕು ಎಂದು ಸಲಹೆ ನೀಡಿದರು.

ವಾಚಾಲಯಕ್ಕೆ ಶಾಸಕರು ಹೆಚ್ಚು ಬರುವಂತೆ ಮಾಡಬೇಕು. ಗ್ರಂಥಾಲಯದಲ್ಲಿ ಶಾಸಕರಿಗೆ ಶೌಚಾಲಯ ಕೊಠಡಿ ನಿರ್ಮಿಸಬೇಕು. ಪಂಚಕರ್ಮ ಚಿಕಿತ್ಸಾ ಕೇಂದ್ರವನ್ನು ಮತ್ತಷ್ಟು ಸುಸರ್ಜಿತಗೊಳಿಸಬೇಕು. ಶಾಸಕರ ಚಿಕಿತ್ಸಾಲಯ ಕೇಂದ್ರದಲ್ಲಿ ಉತ್ತಮ ಸೇವೆ ನೀಡಬೇಕೆಂದು ಉಪಸಭಾಪತಿಗಳು ಸೂಚಿಸಿದರು.

ನೈರ್ಮಲ್ಯಕ್ಕೆ ಒತ್ತು ನೀಡಿ

ಶಾಸಕರ ಭವನದಲ್ಲಿರುವ ಕೊಠಡಿಗಳು, ಸಮ್ಮೇಳನ ಸಭಾಂಗಣಗಳು ಹಾಗೂ ಅಲ್ಲಿ ಒದಗಿಸಲಾಗುತ್ತಿರುವ ಮೂಲಸೌಕರ್ಯ ಮತ್ತು ನೈರ್ಮಲ್ಯದ ಸ್ಥಿತಿಗತಿಗಳನ್ನು ಅವರು ಹತ್ತಿರದಿಂದ ಪರಿಶೀಲಿಸಿದರು.

ಪ್ರತ್ಯೇಕ ಶೌಚಾಲಯ ನಿರ್ಮಿಸಿ

ನಂತರ ಶಾಸಕರ ಭವನದ ಹೊರಾಂಗಣ ಪರಿಶೀಲಿಸಿ, ಚಿಲುಮೆ, ಉದ್ಯಾನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಹೇಳಿದರು. ಸಮೃದ್ಧಿ ಹೋಟೆಲ್ ಗೂ ತೆರಳಿ, ಅಡುಗೆ ಮನೆ, ದಾಸ್ತಾನು ಕೊಠಡಿ ಪರಿಶೀಲಿಸಿದರು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಗಮನಹರಿಸಬೇಕು ಉಪಸಭಾಪತಿಗಳು ಹೇಳಿದರು.

ಶಾಸಕರ ಭವನದಲ್ಲಿ ಸಚಿವಾಲಯದ ಸಿಬ್ಬಂದಿ, ವೈದ್ಯಕೀಯ ಘಟಕ ಹಾಗೂ ಭದ್ರತಾ ಸಿಬ್ಬಂದಿ ಸದಾ ಕರ್ತವ್ಯಕ್ಕೆ ಸನ್ನದ್ಧರಾಗಿರಬೇಕು ಎಂದು ವೇಳೆ ಉಪಸಭಾಪತಿ ಡಾ. ಉಮಾಶ್ರೀ ಅವರು ಸಂಬಂಧಪಟ್ಟ ಅಧಿಕಾರಿಗಳು ಆದೇಶ ನೀಡಿದರು.

ಈ ವೇಳೆ ಪರಿಷತ್ತಿನ ವಸತಿ ಸಮಿತಿಯ ಸದಸ್ಯ ಬಿ.ಜಿ. ಪಾಟೀಲ್ ಅವರು, ಶಾಸಕರ ಭವನದ ಕ್ಷೇತ್ರಾಧಿಕಾರಿ ಸಿ.ಟಿ. ರೂಪ ಇನ್ನಿತರ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...