Thursday, October 8, 2026
Thursday, October 8, 2026

ಸೇವೆ ಮತ್ತು ದಾನ ನಮ್ಮನ್ನು ಸದಾ ಕಾಪಾಡುತ್ತವೆ : ಯೋಗಾಚಾರ್ಯ ಡಾ. ಸಿ.ವಿ ರುದ್ರಾರಾಧ್ಯ

Date:

ಸೇವೆ ಮತ್ತು ದಾನ ನಮ್ಮನ್ನು ಸದಾ ಕಾಪಾಡುವ ಮೌಲ್ಯಗಳಾಗಿವೆ ಎಂದು ಯೋಗಾಚಾರ್ಯ ಡಾ. ಸಿ.ವಿ ರುದ್ರಾರಾಧ್ಯ ಹೇಳಿದರು.

ಯೋಗವು ಉತ್ತಮ ಬದುಕನ್ನು ರೂಪಿಸುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನೀಡುತ್ತದೆ. ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಯೋಗವನ್ನು ನಿತ್ಯ ಜೀವನದ ಭಾಗವನ್ನಾಗಿ ಮಾಡಿಕೊಂಡರೆ ಅನೇಕ ಕಾಯಿಲೆಗಳಿಂದ ದೂರವಿರಬಹುದು ಎಂದು ಅವರು ಹೇಳಿದರು.

ನಗರದ ಶಿವಗಂಗಾ ಯೋಗ ಕೇಂದ್ರದ “ರಾಘವ ಶಾಖೆ” ಯಲ್ಲಿ ಆಯೋಜಿಸಿದ್ದ ಉಪಕಾರ ಸ್ಮರಣೆಯೊಂದಿಗೆ ಕೃತಜ್ಞತಾ ಸಭೆ ಹಾಗು ಪರಿಶೀಲನಾ ಸಭೆಯಲ್ಲಿ, ಕಟ್ಟಡದ ಶಾಶ್ವತ ನಿಧಿಗೆ ದೇಣಿಗೆ ನೀಡಿದ ಯೋಗಪಟುಗಳಿಗೆ ನೆನಪಿನ ಕಾಣಿಕೆ ನೀಡಿ ಅವರು ಮಾತನಾಡಿದರು.

ಯೋಗಾಭ್ಯಾಸದಿಂದ ಆರೋಗ್ಯದಲ್ಲಿ ಆಗುವ ಉತ್ತಮ ಪರಿಣಾಮಗಳಿಗೆ ತಮ್ಮ ಯೋಗ ಕೇಂದ್ರದ ಯೋಗಪಟುವೊಬ್ಬರು ಉದಾಹರಣೆಯಾಗಿದ್ದಾರೆ. ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿರುವುದರಿಂದ ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ಹೋಗುವ ಅಗತ್ಯವೇ ಬಂದಿಲ್ಲ. ಆಸ್ಪತ್ರೆ ಚಿಕಿತ್ಸೆಗೆ ಖರ್ಚಾಗಬಹುದಾಗಿದ್ದ ಹಣವನ್ನು ಕಟ್ಟಡದ ಶಾಶ್ವತ ನಿಧಿಗೆ ನೀಡುವ ಉದ್ದೇಶದಿಂದ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿರುವುದು ಸೇವಾ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಜಯ ಬಾಯರ್, ಎಚ್.ಕೆ. ಹರೀಶ್, ಜಿ.ಎಸ್. ಓಂಕಾರ್, ಕಾಟನ್ ಜಗದೀಶ್, ನರಸೋಜಿರಾವ್, ಜಿ. ವಿಜಯಕುಮಾರ್. ಸುಬ್ರಮಣಿ. ಆನಂದ್ ಶಶಿಧರ್ ಶ್ರೀನಿವಾಸ್. ಶಂಕರ್. ಶಿವಕುಮಾರ್. ಮಹೇಶ್. ಸುಜಾತಾ. ಶೈಲಜಾ ಮಾಲತಿ. ಅರುಣ್. ಗಾಯಿತ್ರಿ. ಉಷಾ. ಲತಾ. ಗಾಯಿತ್ರಿ ರಮೇಶ್
ವೀಣಾ. ಶೋಭಾ ಗೌರಿ. ಸೌಮ್ಯ. ವಸುಂದರಾ. ಸೇರಿದಂತೆ ಯೋಗ ಶಿಕ್ಷಕರು ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...