Tuesday, October 6, 2026
Tuesday, October 6, 2026

ಭದ್ರಾ ಕಾಡಾ ಪ್ರಾಧಿಕಾರದಿಂದ 80ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣ ವಿತರಣೆ: ರೈತರಿಗೆ ಆಧುನಿಕ ಕೃಷಿಗೆ ಒತ್ತು

Date:

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ ಈ ಕಛೇರಿಯಲ್ಲಿ ದಿನಾಂಕ 05.10.2026 ರಂದು ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ. ಅಂಶುಮಂತ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಗತಿಪರ ರೈತರು, ಕೃಷಿಕರು ಹಾಗೂ ಕೃಷಿ ತಜ್ಞರುಗಳೊಂದಿಗೆ ಭದ್ರಾ ಕಾಡಾ ಪ್ರಾಧಿಕಾರದ ಉದ್ದೇಶ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಭದ್ರಕಾಡಾ ಪ್ರಾಧಿಕಾರವು ಸಾಧಿಸಿರುವ ಪ್ರಗತಿಯ ಕುರಿತು ಸಮಾಲೋಚನೆ ಮತ್ತು ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು .
ಮಾನ್ಯ ಅಧ್ಯಕ್ಷರು ಮಾತನಾಡುತ್ತಾ – ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.ರೈ ತರು ಬಹು ಬೆಳೆ ಮಾದರಿಯನ್ನು ಅನುಸರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು, ರೈತರು ವಿವಿಧ ಮಾದರಿಯ ಬೆಳೆಯನ್ನು ಬೆಳೆದು ಕೊಯ್ಲಿನ ಬಳಿಕದ ತಂತ್ರಜ್ಞಾನಗಳನ್ನು ಬಳಸಿ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು. ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳಬೇಕು ಇದಕ್ಕೆ ನೀರು ಬಳಕೆದಾರರ ಸಹಕಾರ ಸಂಘಗಳು ಹೊಸ ಚಿಂತನೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ವಿವಿಧ ರೀತಿಯಲ್ಲಿ ಅಭಿವೃದ್ಧಿಗಳನ್ನು ಸಾಧಿಸಿ ಆರ್ಥಿಕವಾಗಿ ಸಬಲರಾಗಿ ಮುನ್ನಡೆಯಬೇಕು ಎಂದು ತಿಳಿಸಿದರು.
ಕಾಡಾ ಪ್ರಾಧಿಕಾರದ ತರಬೇತಿ ಹಾಗೂ ಸಾಧಿಸಿದ ಪ್ರಗತಿ ಯಂತ್ರೋಪಕರಣಗಳ ವಿತರಣೆ ಮತ್ತಿತರ ಕಾರ್ಯ ಚಟುವಟಿಕೆಗಳ ಕುರಿತು ಶ್ರೀ. ಶ್ರೀನಿವಾಸ ಚಿಂತಾಲ್ ವಿ ಭೂ ಅಭಿವೃದ್ದಿ ಅಧಿಕಾರಿ (ಕೃಷಿ), ಹಾಗೂ ಶ್ರೀ. ನಾಗೇಂದ್ರ ವೈ ಸಹಾಯಕ ಕೃಷಿ ನಿರ್ದೇಶಕರು. ರವರು ವಿವರಿಸಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ವಿಜಯನಗರ, ಜಿಲ್ಲೆಗಳ ಅರ್ಹ ಸಂಘಗಳಿಗೆ 80 ಕ್ಕು ಹೆಚ್ಚು ಕೃಷಿ ಯಂತ್ರೋಪಕರಣಗಳನ್ನು ಕಾಡಾ ಪ್ರಾಧಿಕಾರದಿಂದ ಮಾನ್ಯ ಅಧ್ಯಕ್ಷರು ಡಾ ಕೆ.ಪಿ. ಅಂಶುಮಂತ್ ರವರು ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ.ಸತೀಶ್ ಆರ್, ಆಡಳಿತಾಧಿಕಾರಿಗಳು, ಶ್ರೀ.ಪ್ರಶಾಂತ್ ಕೆ ಭೂ ಅಭಿವೃದ್ದಿ ಅಧಿಕಾರಿ(ತಾಂತ್ರಿಕ) ಹಾಗೂ ಉಪಆಡಳಿತಾಧಿಕಾರಿಗಳು, ಶ್ರೀಮತಿ ವಾಣಿ ಟಿ. ಎಂ. ತಾಂತ್ರಿಕ ಸಹಾಯಕ ವ್ಯವಸ್ಥಾಪಕರು ಆತ್ಮ ಯೋಜನೆ ಕೃಷಿ ಇಲಾಖೆ ಶಿವಮೊಗ್ಗ. ಶ್ರೀ.ಜಿ.ಎಸ್.ಪಟೇಲ್ ಕಾರ್ಯಪಾಲಕ ಇಂಜಿನಿಯರ್, ಶಿವಮೊಗ್ಗ ಹಾಗೂ ಶ್ರೀ.ದೇವರಾಜ್ ವಿ. ಕಾರ್ಯಪಾಲಕ ಇಂಜಿನಿಯರ್, ರಾಣೇಬೆನ್ನೂರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಅಚ್ಚುಕಟ್ಟು ಭಾಗದ ರೈತರು ರವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...