Klive Special Article ಇಂದು “ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರತಿವರ್ಷವೂ ತಂದೆಯ ದಿನ,ತಾಯಿಯ ದಿನ,ಸ್ನೇಹಿತರ ದಿನ, ಆಚರಿಸುವಂತೆ ಮನುಷ್ಯರ ದೇಹದಲ್ಲಿರುವ ಮುಖ್ಯವಾದ ಅಂಗ ಹೃದಯದ ದಿನವನ್ನೂ ಆಚರಿಸಲಾಗುತ್ತಿದೆ.
ಈ ಅಂಗಕ್ಕೆ ಬಹು ಮುಖ್ಯವಾಗಿ ಶ್ರೀಹರಿಯ ಅನುಗ್ರಹ
ಮತ್ತು ಶ್ರೀವಾಯುದೇವರ ಅನುಗ್ರಹ ಬೇಕು.
ಹೃದಯದ ತಪಾಸಣೆಯನ್ನು ನುರಿತ ,ಅನುಭವಿ ಹೃದಯ
ತಜ್ಞರು ಮಾಡಿ ಆರೋಗ್ಯದ ಬಗ್ಗೆ ಸೂಕ್ತ ಸಲಹೆ ನೀಡುವರು.
ವೈದ್ಯರುಗಳೂ ತಮ್ಮ ಕರ್ತವ್ಯವನ್ನು ಮಾಡಿ ಸೂಕ್ತ ಚಿಕಿತ್ಸೆಗಳನ್ನು ನೀಡಿದ ನಂತರ “ನೀವೇನೂ ಹೆದರುವುದು ಬೇಡ,ದೇವರಿದ್ದಾನೆ”ಎಂದು ಹೇಳುವುದನ್ನು ಕೇಳಿದ್ದೇವೆ.
ಅಂದರೆ ಎಲ್ಲಾ ವೈದ್ಯರಿಗೂ ಮೇಲೊಬ್ಬ ಭವರೋಗ ವೈದ್ಯನಿದ್ದಾನೆ ಎಂಬುದು ತಿಳಿದು ಬರುತ್ತದೆ..
ಉಡುಪಿಯ ಫಲಿಮಾರು ಮಠಾಧೀಶರಾದ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು ತಮ್ಮಒಂದು
ಹರಿಕಥಾಮೃತಸಾರಕ್ಕೆ ಸಂಬಂಧಪಟ್ಟ ಉಪನ್ಯಾಸದಲ್ಲಿ
ಅವರು ಹೇಳಿದ್ದು ಹರಿಕಥಾಮೃತಸಾರದ “ಶ್ವಾಸಸಂಧಿ”ಯನ್ನು ಪಾರಾಯಣ ಮಾಡಿದರೆ ನಾರಾಯಣ ಹೃದಯಾಲಯಕ್ಕೆ ಹೋಗದಂತೆ “ನಾರಾಯಣ”ದೇವರು
ತಡೆಯುತ್ತಾನೆ ಎಂದು.ನಿಜಕ್ಕೂ ಶ್ರೀಗಳವರು ಹೇಳಿದ ಮಾತು ಸತ್ಯವೆನಿಸಿದೆ.ಆದರೆ ದೃಢ ನಂಬಿಕೆ ಬೇಕು.
ಮತ್ತೆ ಮನುಷ್ಯರ ದೇಹದ ನಿತ್ಯ ವ್ಯಾಪಾರದಲ್ಲಿ ಶ್ರೀಹರಿಯ
ಆದೇಶದಂತೆ ಶ್ರೀವಾಯುದೇವರು ನಡೆಸುವರು.
ವಾಯುದೇವರು ದೇಹದಿಂದ ಹೊರನಡೆದರೆಂದರೆ ಹರಿಯೂ ಹೋಗಿಬಿಡುವನು,ಅಲ್ಲಿಗೆ ಇಹಲೋಕದ ವ್ಯಾಪಾರ ಮುಗಿದಂತಾಗುತ್ತದೆ.
ಪರಲೋಕದಲ್ಲಿ ಇಲ್ಲಿ ಅವರು ಮಾಡಿದ ಪಾಪ-ಪುಣ್ಯದ ಕೆಲಸಗಳಿಂದ ಯಾವ ಲೋಕ ಸೇರುವರೆಂಬುದನ್ನು ಅಲ್ಲಿಯ
ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮನುಷ್ಯ ನಗುನಗುತ್ತಾ ಇದ್ದರೆ,ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.ಎಷ್ಟು ಪ್ರೀತಿ,ಸ್ನೇಹ ಭಾವನೆಗಳನ್ನು ತುಂಬಿಕೊಳ್ಳುತ್ತೇವೆಯೋ ಹೃದಯದ ಆರೋಗ್ಯವೂ ಅಷ್ಟೇ
ಚೆನ್ನಾಗಿರುತ್ತದೆ.
ಹಿತಮಿತವಾದ ಆಹಾರ,ನಿತ್ಯ ಕರ್ಮಾನುಷ್ಠಾನ,ಯೋಗ,ಧ್ಯಾನ,ಸ್ತೋತ್ರಗಳ ಪಾರಾಯಣ,
ಎಷ್ಟು ಸಾಧ್ಯವೋ ಅಷ್ಟು ನಡಿಗೆ ಮಾಡುವುದು,ಇವೆಲ್ಲವೂ ಹೃದಯದ ಆರೋಗ್ಯವನ್ನು ಕಾಪಾಡಬಲ್ಲವು.ಆದಷ್ಟೂ ಮಾನಸಿಕ ಒತ್ತಡವನ್ನು ದೂರಮಾಡಿಕೊಳ್ಳಬೇಕು.ಸತ್ ಚಿಂತನೆ,ಸಜ್ಜನರ ಸಹವಾಸ,ಇವೆಲ್ಲವೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಬಲ್ಲವು..
“ಚಿಂತೆ ಮಾಡುವುದನ್ನು ಬಿಟ್ಟು ಭಗವಂತನ ಚಿಂತನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ.ರಾಮನಾಮ ಸ್ಮರಣೆ,ಕೃಷ್ಣನಾಮ ಸ್ಮರಣೆ
ಒಳ್ಳೆಯ ಫಲವನ್ನು ಕೊಡುತ್ತವೆ.
ಎಲ್ಲರಿಗೂ ಶ್ರೀಹರಿಯು ಈ ವಿಶ್ವಹೃದಯದಿನದಂದು ಆಯುರಾರೋಗ್ಯವನ್ನುಅನುಗ್ರಹಿಸಲಿ ಎಂದು ಪ್ರಾರ್ಥನೆ.
ಎಲ್ಲರಿಗೂ ಶುಭವಾಗಲಿ.
ವಿಶ್ವ ಹೃದಯ ದಿನ-ಅಧ್ಯಾತ್ಮಿಕ ಸ್ಪರ್ಶ.ಲೇ: ಎನ್.ಜಯಭೀಮ ಜೊಯ್ಸ್
Date:
