ಶಿವಮೊಗ್ಗ ನಗರದ ಎ.ಎಂ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಅಂಬಾಭವಾನಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಲಾಕೃತಿಯನ್ನು ನಿರ್ಮಿಸಿರುವ ಭದ್ರಾವತಿಯ ವಿಷ್ಣು ಆರ್ಟ್ಸ್ನ ವಿಷ್ಣುಗೆ ನಮ್ಮ ಮಲೆನಾಡು ತಮಿಳ್ ಯುವ ಸಂಘದ ವತಿಯಿಂದ ಗೌರವ ಹಾಗೂ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಸಂಘದ ಮುಖಂಡರುಗಳು ಮಾತನಾಡಿ, ಒಂದು ಮೂರ್ತಿಯನ್ನು ನಿರ್ಮಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಅದರ ಹಿಂದೆ ಅಪಾರವಾದ ಕಲೆ, ಶ್ರಮ, ಸಮಯ, ಕಲ್ಪನೆ ಮತ್ತು ಭಕ್ತಿಯು ಬೇಕಾಗುತ್ತದೆ. ಆ ಎಲ್ಲಾ ಗುಣಗಳನ್ನು ವಿಷ್ಣು ಹೊಂದಿದ್ದಾರೆ. ಹಾಗಾಗಿಯೇ ಇಂತಹ ಅದ್ಭುತವಾಗಿ ಕಲಾಕೃತಿ ಮೂಡಿ ಬಂದಿದೆ. ಇಡೀ ಜಿಲ್ಲೆಯೇ ಮೆಚ್ಚುವಂತೆ ಕಲಾಕೃತಿಯನ್ನು ನಿರ್ಮಿಸಿರುವ ವಿಷ್ಣು ನಮ್ಮ ತಮಿಳು ಸಮಾಜದವರಾಗಿರುವುದು ನಮಗೆ ಹೆಮ್ಮೆಯ ವಿಷಯ. ನಮ್ಮ ಸಮಾಜದ ಪ್ರತಿಭಾವಂತರು ತಮ್ಮ ಕಲೆ ಮತ್ತು ಪ್ರತಿಭೆಯ ಮೂಲಕ ಶಿವಮೊಗ್ಗದಂತಹ ನಗರದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ. ವಿಷ್ಣು ಅವರಂತಹ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಂಬಲಿಸುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಸಮಾಜದ ಯುವ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು, ಅವರ ಕಲೆ ಇಡೀ ರಾಜ್ಯ ಮತ್ತು ದೇಶಕ್ಕೆ ಪರಿಚಯವಾಗಬೇಕು ಎಂಬುದು ನಮ್ಮ ಆಶಯ. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಅದ್ಭುತವಾದ ಕಲಾಕೃತಿಗಳನ್ನು ನಿರ್ಮಿಸಿ, ತಮ್ಮ ಕುಟುಂಬಕ್ಕೆ, ನಮ್ಮ ಸಮಾಜಕ್ಕೆ ಹಾಗೂ ನಮ್ಮ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ತರುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂದೀಪ್ ಸುಂದರರಾಜ್ ಉಪಾಧ್ಯಕ್ಷರಾದ ಶಶಿ ಕುಮಾರ್ ಪ್ರಧಾನ ಕಾರ್ಯದರ್ಶಿ ರಮೇಶ್ ಸಿ ಸಂಘಟನಾ ಕಾರ್ಯದರ್ಶಿ ಎಸ್ ಕುಮರೇಶ್ ಖಜಾಂಚಿ ಶಬರಿಷ್ ಹಾಗೂ ಸಮಾಜದ ಹಿರಿಯರಾದ ಎ ಶಿವಕುಮಾರ್,ಮಂಜುನಾಥ್, ಮಣಿ ಮತ್ತು ಪದಾಧಿಕಾರಿಗಳಾದ ಸಂತೋಷ್, ರಮೇಶ್ ,ನವೀನ್ ,ಭರತ್ ,ರಾಜೇಶ್ ,ವಿನಯ್ ,ಶಿವರಾಜ್ ,ಗೋಪಿನಾಥ್ , ಅಜಿತ್ ,ಪ್ರವೀಣ್ ಇತರರು ಇದ್ದರು.
ಅಂಬಾ ಭವಾನಿ–ಛತ್ರಪತಿ ಶಿವಾಜಿ ಕಲಾಕೃತಿ ನಿರ್ಮಿಸಿದ ವಿಷ್ಣುಗೆ ಮಲೆನಾಡು ತಮಿಳ್ ಯುವ ಸಂಘದಿಂದ ಗೌರವ
Date:
