Tuesday, October 20, 2026
Tuesday, October 20, 2026

ಪ್ರಗತಿಪರ ರೈತ/ ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಅರ್ಹರಿಂದ ಅರ್ಜಿ ಆಹ್ವಾನ

Date:

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರತಿ ವರ್ಷದಂತೆ ಈ ವರ್ಷವೂ ಪ್ರಗತಿಪರ ರೈತ/ರೈತ ಮಹಿಳೆ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕಾ ಮೇಳ-2026 ರಲ್ಲಿ ನೀಡಿ ಸನ್ಮಾನಿಸಲು ತೀರ್ಮಾನಿಸಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಯ ಆರು ಜಿಲ್ಲೆಗಳಾದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಪ್ರಗತಿಪರ ರೈತ/ರೈತ ಮಹಿಳೆಯರು ಅರ್ಜಿ ಆಹ್ವಾನಿಲಾಗಿದೆ.

ಅರ್ಜಿಸಲ್ಲಿಸಿದ ರೈತ/ರೈತ ಮಹಿಳೆಯರಲ್ಲಿ ಪ್ರತಿಜಿಲ್ಲೆಯಿಂದ ಒಬ್ಬ ರೈತ ಮತ್ತು ಒಬ್ಬ ರೈತಮಹಿಳೆಯನ್ನು ಆಯ್ಕೆಮಾಡಿ, ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು, ಈ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಪ್ರದಾನ ಮಾಡಲಾಗುವುದು.

ಆಸಕ್ತ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ಕೃಷಿ ವಿಜ್ಞಾನಕೇಂದ್ರಗಳು ಅಥವಾ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಅರ್ಜಿ ಪಡೆಯಬಹುದು ಅಥವಾ https://www.uahs.edu.in/ ನಲ್ಲಿ ಲಭ್ಯವಿರುವ ಅರ್ಜಿ ತೆಗೆದುಕೊಂಡು ಭರ್ತಿಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ:10/09/2026 ರ ಒಳಗೆ ತಲುಪುವಂತೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆಗಳಾದ ಶಿವಮೊಗ್ಗ- 94808 38976, ದಾವಣಗೆರೆ 94808 38209, ಚಿಕ್ಕಮಗಳೂರು 94808 38203, ಉಡುಪಿ 94808 38202, ಚಿತ್ರದುರ್ಗ 94808 38201, ದಕ್ಷಿಣಕನ್ನಡ 87947 06468 ಗಳನ್ನು ಸಂಪರ್ಕಿಸುವಂತೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...