Friday, September 11, 2026
Friday, September 11, 2026

ಗೋಪಾಳ ಶ್ರೀನಾಗಸುಬ್ರಹ್ಮಣ್ಯ ದೇವರಿಗೆ ಪಂಚಮಿ ವಿಶೇಷ ಪೂಜೆ. ಆಶ್ಲೇಷ ಬಲಿ

Date:

ನಗರದ ಹೊರವಲಯದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಇರುವ ಪ್ರಸಿದ್ಧ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ಅನಂತನ ಆರಾಧನೆ ಹಾಗೂ ಅಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ. ಹಾಲಿಟ್ಟು ಸೇವೆ.ವೇದ ಪಾರಾಯಣ ಮಾಡುವುದರ ಜೊತೆಗೆ ನಾಗನಿಗೆ ಎರಡು ಸಾವಿರ ಲೀಟರ್ ಹಾಲು ಹಾಗೂ ಏಳುನೂರು ಎಳನೀರಿನ ಅಭಿಷೇಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಾಗ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ಮಾತನಾಡುತ್ತಾ ನಾಗನ ದರ್ಶನ ಹಾಗೂ ಪೂಜೆಯಿಂದ ಸಕಲವು ಪ್ರಾಪ್ತಿಯಾಗುತ್ತದೆ ಹಾಗೂ ನಾಗದೋಷಗಳು ಪರಿಹಾರವಾಗುತ್ತದೆ ಹಾಗಾಗಿ ನಾಗ ದೇವರನ್ನ ಪ್ರತಿನಿತ್ಯ ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ನಾಗ ದೇವರಿಗೆ ಸಾವಿರಾರು ವರ್ಷದ ಇತಿಹಾಸವಿದೆ ಹಾಗಾಗಿ ಪ್ರತಿ ವರ್ಷ ನಮ್ಮ ದೇವಸ್ಥಾನದಲ್ಲಿ ನಮ್ಮ ಸಮಿತಿಯ ಸಹಕಾರದಿಂದ ಭಕ್ತರಿಗಾಗಿ ವಿಶೇಷ ಪೂಜೆಗಳನ್ನು ನೆರವೇರಿಸುವುದರ ಜೊತೆಗೆ ಅನ್ನಸಂಪರ್ಪಣೆಯನ್ನು ಕೂಡ ಹಮ್ಮಿಕೊಂಡಿರುತ್ತೇವೆ ಈ ವರ್ಷ ತುಂಬಾ ವಿಶೇಷ 7,000ಕ್ಕೂ ಹೆಚ್ಚು ಭಕ್ತರು ಈ ವಿಶೇಷ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡು ನಾಗಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪ. ಹಾಗೂ ಗೌರವ ನಿರ್ದೇಶಕರುಗಳು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್, ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ಮತ್ತು ವಸಂತ ಭಟ್ಟರು. ಪ್ರಸನ್ನ ಭಟ್ಟರು. ಗಣೇಶ್ ಭಟ್, ಚೇತನ್ ಭಟ್, ಪ್ರಬಂದ ಭಟ್, ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಕ್ತರು ಉಪಸ್ಥಿತರಿದ್ದರು ಪ್ರತಿನಿತ್ಯ ಭಜನೆ ಭಕ್ತಿಗೀತೆಗಳೊಂದಿಗೆ ಅನಂತನ ಆರಾಧನೆ ನೆರವೇರಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...