Friday, September 11, 2026
Friday, September 11, 2026

ಮಕ್ಕಳು ಮತ್ತು ಯುವಜನರಿಗೆ ಸೂಕ್ತ ಲೈಂಗಿಕ ಶಿಕ್ಷಣ ,ವೈಜ್ಞಾನಿಕ ಬೋಧನಾಕ್ರಿಯೆ ಮೂಲಕ ಜಾಗೃತಿವುಂಟುಮಾಡಬೇಕು- ಡಾ.ಸುಮಂಗಳಾ ಪಿ.ಕುಚಿನಾಡ

Date:

ಸಮಗ್ರ ಲೈಂಗಿಕ ಶಿಕ್ಷಣ ಲೈಂಗಿಕತೆಯ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಭಾಗಗಳ ಬಗ್ಗೆ ಪಠ್ಯಕ್ರಮ ಆಧಾರಿತ ಬೋಧನಾ ಪ್ರಕ್ರಿಯೆಯಾಗಿದೆ ವೈಜ್ಞಾನಿಕವಾಗಿ ನಿಖರವಾದ ವಿಧಾನವಾಗಿದ್ದು, ಇದು ಮಕ್ಕಳು ಮತ್ತು ಯುವಜನರಿಗೆ ಲೈಂಗಿಕತೆಯ ಅರಿವಿನ, ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಅಂಶಗಳ ಬಗ್ಗೆ ಸಾಂಸ್ಕೃತಿಕವಾಗಿ-ಸಂಬಂಧಿತ ಮತ್ತು ವಯಸ್ಸಿಗೆ ಸೂಕ್ತವಾದ ಸಂತಾನೋತ್ಪತ್ತಿ ಶರೀರಶಾಸ್ತ್ರ, ಹದಿಹರೆಯದಲ್ಲಿ ಮಾನಸಿಕ ಅಂಶಗಳು, ಮುಟ್ಟು, ಗರ್ಭಧಾರಣೆ, ಸೋಂಕುಗಳು, ಗರ್ಭನಿರೋಧಕ, ಸಂಬಂಧಕ್ಕೆ ಸಿದ್ಧತೆ ಕಲಿಸುತ್ತದೆ.ಇದು ಯುವಜನರಿಗೆ ನಿಖರವಾದ ಜ್ಞಾನವನ್ನು ಪಡೆಯಲು, ಗೌರವಾನ್ವಿತ ಸಂಬಂಧಗಳನ್ನು ನಿರ್ಮಿಸಲು ಮತ್ತು ಅವರ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನೆಸ್ಕೋ ನಂತಹ ಪ್ರಮುಖ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಬೆಂಬಲಿಸುತ್ತವೆ. ಎಂದು ವಿಶ್ರಾಂತ ಡಿ.ಡಿ.ಪಿ.ಐ ರಾಜ್ಯ ಅಧ್ಯಕ್ಷರು,ರಾಜ್ಯ ಮಡಿಲು ಮಹಿಳಾ ಸೇವಾ ಸಂಘ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ನ. ಡಾ ಸುಮಂಗಳಾ ಪಿ ಕುಚಿನಾಡ ರವರು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಶಿವಮೊಗ್ಗ ಶಾಖೆ ಹಾಗೂ ಶ್ರೀನಿಧಿ ಎಜುಕೇಶನ್ ಸೊಸೈಟಿ (ರಿ) ಶಿವಮೊಗ್ಗ ಇವರ ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆಯ ಇಂಟ್ರಾಕ್ಟ್ ಕ್ಲಬ್ ನ ಸಹಯೋಗದಲ್ಲಿ ರಾಜೇಂದ್ರ ನಗರ, 100 ಅಡಿ ರಸ್ತೆ, ಲಕ್ಷ್ಮಿ ಟಾಕೀಸ್ ಹತ್ತಿರ, ಶಿವಮೊಗ್ಗದ ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆಯ ಶಾಲೆಯಲ್ಲಿ ನಡೆದ ಹದಿ ಹರೆಯದ ಯುವಕ ಯುವತಿಯರಿಗಾಗಿ ಸಮಗ್ರ ಅರೋಗ್ಯ – ಲೈಂಗಿಕ ಶಿಕ್ಷಣ (ಸಿಎಸ್ಇ) ಮಾಹಿತಿ ವಿಶೇಷ ಕಾರ್ಯಕ್ರಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು

ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಡಿ ಕೆ ಶೇಷಗಿರಿ ಯವರು ಸಮಗ್ರ ಅರೋಗ್ಯ – ಲೈಂಗಿಕ ಶಿಕ್ಷಣವು ಪ್ರೌಢ ಶಾಲಾ ಮಕ್ಕಳು ಮತ್ತು ಹದಿಹರೆಯದವರು ಉತ್ತಮ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು, ಸಂವಹನ ಮಾಡಲು ,ಅವರ ಸ್ವಂತ ಆರೋಗ್ಯ ಮತ್ತು ತಮ್ಮ ದೇಹ, ಸಂಬಂಧಗಳು ,ಲೈಂಗಿಕ ಆರೋಗ್ಯದ ಬಗ್ಗೆ ನಿಖರವಾದ ಸಮಗ್ರ ಮಾಹಿತಿಯನ್ನು ಪಡೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು

ಹದಿ ಹರೆಯದ ಯುವಕ ಯುವತಿಯರಿಗಾಗಿ ಅವರ ದೇಹಗಳು, ಆರೋಗ್ಯ, ಸಂಬಂಧಗಳು ಮತ್ತು ಹಕ್ಕುಗಳ ಬಗ್ಗೆ ವಯಸ್ಸಿಗೆ ಸೂಕ್ತವಾದ, ವೈಜ್ಞಾನಿಕವಾಗಿ ನಿಖರವಾದ ಮತ್ತು ಸಾಂಸ್ಕೃತಿಕವಾಗಿ ಪ್ರಸ್ತುತವಾದ ಮಾಹಿತಿಯನ್ನು ಒದಗಿಸುವ ಮೂಲಕ ಜ್ಞಾನ ಮತ್ತು ತಿಳುವಳಿಕೆಯನ್ನು ಸುಧಾರಿಸುವುದು ಮತ್ತು ತಪ್ಪು ಕಲ್ಪನೆಗಳನ್ನು ಸರಿಪಡಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಉಪಸ್ಥಿತರಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಉಪಾಧ್ಯಕ್ಷರಾದ ಜಿ ವಿಜಯ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು

ನಂತರ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿಯಾದ ಆರ್ ಮನೋಹರ ರವರು ವಿದ್ಯಾರ್ಥಿಗಳು ತಮ್ಮ ಜೀವನದ ಬಹುಪಾಲು ಸಮಯವನ್ನು ಶಿಕ್ಷಣ ಸಂಸ್ಥೆಗಳಲ್ಲಿಯೇ ಕಳೆಯುತ್ತಾರೆ ಆದ್ದರಿಂದ ಶಾಲಾ ಕ್ಯಾಂಪಸ್ ಗಳಲ್ಲಿಯೇ ಹದಿಹರೆಯದ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಅಗತ್ಯ ನೆರವು ಒದಗಿಸಬೇಕಾಗಿದೆ ಇದೇ ಉದ್ದೇಶದಿಂದ ಶಾಲೆಯಲ್ಲಿ ವಿಷಯ ಪರಿಣಿತ ತಜ್ಞರನ್ನು ಯೋಜಿಸಿ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ವೃತ್ತಿಪರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು

ಈ ಸಂದಭದಲ್ಲಿ ವಿಷಯ ತಜ್ಞರು ಶಾಲೆಯ ಹೈಸ್ಕೂಲ್ ಹದಿ ಹರೆಯದ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಲೈಂಗಿಕ ಸಮಗ್ರ ಶಿಕ್ಷಣದ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧಿಕಾರಿ ತೇಜಸ್ವಿನಿ ಎಂ., ಕಾರ್ಯಕ್ರಮ ಸಂಯೋಜಕ ಸತೀಶ್ ಎನ್ ಹೆಚ್, ಶಾಲೆಯ ಆಡಳಿತಾಧಿಕಾರಿ ಟಿ ಪಿ ನಾಗರಾಜ್, ಹಾಗೂ ವಿದ್ಯಾರ್ಥಿ ಸಂಘ ಮತ್ತು ಇಂಟ್ರಾಕ್ಟ್ ಕ್ಲಬ್ ನ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಶಾಲಾ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...