ಶಿವಮೊಗ್ಗ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 03 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಂಗಾಯಣ, ಶಿವಮೊಗ್ಗ ರೆಪರ್ಟರಿಗೆ 03 ಜನ ತಂತ್ರಜ್ಞರನ್ನು ನಿಯಾಮಾನುಸಾರ ನೇಮಕ ಮಾಡಿಕೊಳ್ಳಲಾಗುವುದು.(ಸಂಗೀತ/ಧ್ವನಿ-ಬೆಳಕು/ರಂಗಸಜ್ಜಿಕೆ-ವಸ್ತ್ರವಿಭಾಗ) ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು. ತಂತ್ರಜ್ಞರಿಗೆ ಕನಿಷ್ಠ ಕನ್ನಡ ಭಾಷೆಯ ಓದುವ, ಬರೆಯುವ, ಗ್ರಹಿಸುವ ಸಾಮರ್ಥ್ಯವಿರಬೇಕು.
ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆ ಮತ್ತು ರಂಗಶಿಕ್ಷಣದ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು. ಈ ನೇಮಕ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ. ತಂತ್ರಜ್ಞರಿಗೆ ಸಂಚಿತ ವೇತನ ಕ್ರೋಢಿಕೃತವಾಗಿ ಮಾಸಿಕ ರೂ.25,000/-ಗಳನ್ನು ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳು ಇರುವುದಿಲ್ಲ. ಊಟ, ವಸತಿ ವ್ಯವಸ್ಥೆಯನ್ನು ತಂತ್ರಜ್ಞರೇ ಮಾಡಿಕೊಳ್ಳಬೇಕು.
ತಂತ್ರಜ್ಞರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅವರ ನೇಮಕವನ್ನು ಯಾವುದೇ ಸಂದರ್ಭದಲ್ಲಿ ರದ್ದುಗೊಳಿಸುವ ಅಧಿಕಾರ ರಂಗಸಮಾಜಕ್ಕೆ ಇರುತ್ತದೆ. ತಂತ್ರಜ್ಞರ ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ. ತಂತ್ರಜ್ಞರಿಗೆ ವಯಸ್ಸಿನ ವಯೋಮಿತಿ ಇರುವುದಿಲ್ಲ.
ಕಲಾವಿದರ ನೇಮಕದ ನಿಬಂಧನೆಗಳು:-
ರಂಗಾಯಣ, ಶಿವಮೊಗ್ಗದ ರೆಪರ್ಟರಿಗೆ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುವುದು. 12 ಜನ ಕಲಾವಿದರಲ್ಲಿ ಕನಿಷ್ಠ 04 ಮಹಿಳೆಯರಿಗಾಗಿ ಮೀಸಲಾಗಿದೆ. ಹಾಗೂ 04 ಪರಿಶಿಷ್ಟ ಜಾತಿ/ವರ್ಗದ ಕಲಾವಿದರಿಗೆ ಮೀಸಲಿಡಲಾಗಿದೆ.
ಈ ನೇಮಕಗಳಲ್ಲಿ ಕನಿಷ್ಠ 50% ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಕಲಾವಿದರು ರೆಪರ್ಟರಿಯ ಭಾಗವಾಗಿದ್ದು, ರಂಗಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ಈ ನೇಮಕ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ.
ಕಲಾವಿದರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅವರ ನೇಮಕವನ್ನು ಯಾವುದೇ ಸಂದರ್ಭದಲ್ಲಿ ರದ್ದುಗೊಳಿಸುವ ಅಧಿಕಾರ ರಂಗಸಮಾಜಕ್ಕೆ ಇರುತ್ತದೆ. ಆಯ್ಕೆಯಾದ ಕಲಾವಿದರಿಗೆ ಮೊದಲನೇ ವರ್ಷ ಮಾಸಿಕ ರೂ.18,000/-,ಈಗಾಗಲೇ ರಂಗಾಯಣಗಳಲ್ಲಿ ಕಲಾವಿದರಾಗಿ ಕಾರ್ಯನಿರ್ವಹಿಸಿರುವವರಿಗೆ ಮಾಸಿಕ ರೂ.20,000/-ಗಳನ್ನು ಸಂಚಿತ ವೇತನವಾಗಿ ನಿಯಮಾನುಸಾರ ನೀಡಲಾಗುವುದು.
ಇತರೆ ಯಾವುದೇ ಭತ್ಯೆಗಳನ್ನು ನೀಡುವುದಿಲ್ಲ.ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲಾವಿದರೇ ಮಾಡಿಕೊಳ್ಳಬೇಕು. ರಂಗಾಯಣಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿರುವವರು ದೃಢೀಕರಣ ಪತ್ರವನ್ನು ಆಯಾ ರಂಗಾಯಣಗಳಿಂದ ಪಡೆದು ಸಲ್ಲಿಸಬೇಕು.
ದಿನಾಂಕ:07-08-2026 ಕ್ಕೆ ಕಲಾವಿದರ ವಯಸ್ಸು ಕನಿಷ್ಠ 18 ವರ್ಷಗಳಿಂದ ಗರಿಷ್ಠ 32 ವರ್ಷ ಮೀರಿರಬಾರದು. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 05 ವರ್ಷ ಸಡಿಲಿಸಬಹುದು. ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದು.
ಕಲಾವಿದರ ಆಯ್ಕೆಯನ್ನು ಸಂದರ್ಶನದ ಮೂಲಕ ಪಾರದರ್ಶಕವಾಗಿ ಆಯಾ ರಂಗಾಯಣಗಳ ಅಧ್ಯಕ್ಷತೆಯಲ್ಲಿ ರಚಿಸುವ ಉಪಸಮಿತಿಯು ಮಾಡುತ್ತದೆ. ಆಯ್ಕೆಯಾದ ಕಲಾವಿದರು ರಂಗಾಯಣ, ಶಿವಮೊಗ್ಗದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.
ತರಬೇತಿಯ ಅವಧಿಯಲ್ಲಿ ಯಾವುದೇ ಕಲಾವಿದರ ನಡವಳಿಕೆ ಅನಪೇಕ್ಷಿತವೆಂದು ಕಂಡು ಬಂದಲ್ಲಿ ಅಂತಹ ಕಲಾವಿದರನ್ನು ತಕ್ಷಣದಲ್ಲಿ ತೆಗೆದು ಹಾಕುವ ಅಧಿಕಾರ ರಂಗಸಮಾಜಕ್ಕೆ ಇರುತ್ತದೆ.
ಮೇಲ್ಕಂಡ ತಂತ್ರಜ್ಞರು ಹಾಗೂ ಕಲಾವಿದರು ಆಯಾ ರಂಗಾಯಣದ ನಿರ್ದೇಶಕರ ಹಾಗೂ ಆಡಳಿತಾಧಿಕಾರಿಯವರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.
ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನಲೆಯಲ್ಲಿ ಸಂಚಿತ ವೇತನದ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವು ಸರ್ಕಾರದ ಖಾಯಂ ಹುದ್ದೆಗಳಾಗಿರುವುದಿಲ್ಲ. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ಮೇಲ್ಕಂಡ ಷರತ್ತುಗಳಲ್ಲದೆ ಇತರೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಆಯ್ಕೆ ಸಮಿತಿಗಿರುತ್ತದೆ.
ಆಸಕ್ತ ಕಲಾವಿದ, ತಂತ್ರಜ್ಞರು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ:20-08-2026, ಸಂಜೆ 5.30 ಗಂಟೆಯೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಹೆಲಿಪ್ಯಾಡ್ ಹಿಂಭಾಗ, ಶಿವಮೊಗ್ಗ-577201 ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸ: admn.rangayanashivamogga@gmail.com ಮೂಲಕ ಅಥವಾ ಗೂಗಲ್ ಫಾರಂನ್ನು ಫೇಸ್‌ಬುಕ್ (Shivamogga Rangayana) ಅಥವಾ ವೆಬ್‌ಸೈಟಿನಿಂದ (rangayanashivamogga.karnataka.gov.in/) ಮೂಲಕ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ಮೂಲಕವೂ ಅರ್ಜಿಯನ್ನು ಸಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08182-256353 ಅಥವಾ ಮೊಬೈಲ್ ಸಂಖ್ಯೆ:7975229166 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ರಂಗಾಯಣದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ
