Monday, September 21, 2026
Monday, September 21, 2026

ಮಾಜಿ ಸಿಎಂ ಸಿದ್ಧರಾಮಯ್ಯ ಜನ್ಮದಿನಾಚರಣೆ : ದೇವಾಲಯದಲ್ಲಿ ಈಡುಗಾಯಿ ಅರ್ಪಣೆ

Date:

ಕರ್ನಾಟಕ ರಾಜ್ಯದ ಜನಪ್ರಿಯ ನಿಕಟಪೂರ್ವ ಮುಖ್ಯಮಂತ್ರಿಗಳು ಸರ್ವ ಜನಾಂಗದ ನಾಯಕ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ನಗರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಶಿವಮೊಗ್ಗ ಜಿಲ್ಲೆ ಕರುನಾಡ ದೊರೆ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಮಹಾರುದ್ರಾಭಿಷೇಕ “ವಿಶೇಷ ಪೂಜೆ ಸಲ್ಲಿಸಿ- ಇಡುಗಾಯಿ ಸಮರ್ಪಣೆ ಮಾಡಿ ಆಚರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಕೆ ರಂಗನಾಥ್ ಅವರು, ಸಾಮಾಜಿಕ ನ್ಯಾಯವನ್ನೇ ಉಸಿರಾಗಿರಿಸಿಕೊಂಡಿರುವ ಸಮಾಜವಾದಿ ನೇತಾರ, ಭಾಗ್ಯಗಳ ಸರದಾರ, ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರ ಬದುಕುಗಳಿಗೆ ಹೊಸ ಭರವಸೆ ತುಂಬಿದ ಕರುನಾಡ ಭಾಗ್ಯವಿಧಾತ, ನಮ್ಮೆಲ್ಲರ ಮಾರ್ಗದರ್ಶಿಗಳು, ನಾಡಿನ ಅತ್ಯಂತ ಶ್ರೇಷ್ಠ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದ ಶ್ರೀ ಸಿದ್ದರಾಮಯ್ಯ ಅವರಿಗೆ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಹಾಗೂ ಕಾಶಿ ವಿಶ್ವನಾಥ ದೇವರ ಅನುಗ್ರಹ ಅವರ ಮೇಲೆ ಸದಾ ಇರಲಿ ಎಂದು ಹುಟ್ಟುಹಬ್ಬದ ಶುಭಾಶಯ ಕೋರಿದರು

ಈ ಸಂದರ್ಭದಲ್ಲಿ ಮಾಜಿ ಉಪ ಮಹಾಪೌರರಾದ ಎಚ್ ಪಾಲಾಕ್ಷಿ, ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್‌.ಪಿ. ಗಿರೀಶ್, ಬಿ ಲೋಕೇಶ್, ಟಿವಿ ರಂಜಿತ್ ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಸದಸ್ಯರಾದ ಎಮ್ ರಾಹುಲ್ ,ಎಸ್ ಕುಮಾರೇಶ್ ,ಬಸವರಾಜ್, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸುವರ್ಣ ನಾಗರಾಜ್ , ಸುಶೀಲ ಷಣ್ಮುಗಂ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಎಂ ರಾಕೇಶ್, ಕೆ ಎಲ್ ಪವನ್ , ಪುಷ್ಪಕ್ ಕುಮಾರ್, ಟಿ ಗುರುಪ್ರಸಾದ್, ರಾಹುಲ್ ಸಿಗೆಹಟ್ಟಿ, ರಾಜೇಶ್ ಮಂದಾರ, ಆರ್‌ ಎಂ ಓಂ, ಮಸ್ತಾನ್,ಕಲ್ಲೂರ್ ವೆಂಕಟೇಶ್ , ಶಮ್ಮು,ಸಂತೋಷ್ ಪುರಲೆ, ಗಿರೀಶ್ ಶಾಸ್ತ್ರಿ, ಕೇಬಲ್ ಲೋಕೇಶ್,ಸಂದೇಶ್ ,ಸಾವಂತ್, ಪುನೀಲ್, ಹಾಗೂ ಸಿದ್ದರಾಮಯ್ಯನ ಅಭಿಮಾನಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...