ಆಗಸ್ಟ್ ಒಂದು ಮತ್ತು ಎರಡನೇಯ ತಾರೀಕು ಎಂದರೆ ಬರುವ ಶನಿವಾರ ಮತ್ತು ಭಾನುವಾರದಂದು, ಶ್ರೀವಿಜಯ ಕಲಾನಿಕೇತನ ಟ್ರಸ್ಟ್ (ರಿ) ವತಿಯಿಂದ ಕಲಾ ಸಂಭ್ರಮ – ೨೦೨೬ ನಡೆಯಲಿದೆ. ಮೊದಲ ದಿನ, ಕಾಳಿದಾಸ ಕವಿಯ ಸಾಹಿತ್ಯ, ಎಸ್ ವಿ ಪರಮೇಶ್ವರ ಭಟ್ಟ ಅವರ ಅನುವಾದ ಮತ್ತು ವಿ. ಜಿ ಎಸ್ ನಟೇಶ್ ಅವರ ಕನ್ನಡ ಸಾಹಿತ್ಯ ಒಳಗೊಂಡ “ಕವಿಕುಲಗುರು ನಮನ” ನೃತ್ಯ ಕಾರ್ಯಕ್ರಮ ಡಾ|| ಕೆ.ಎಸ್. ಚೈತ್ರಾ ಮತ್ತು ಡಾ|| ಕೆ.ಎಸ್. ಶುಭ್ರತಾ ಅವರಿಂದ ಮತ್ತು ಎರಡನೇಯ ದಿನ, ಡಾ ಕೆ ಎಸ್ ಶುಭ್ರತಾ ಅವರ ವಿದ್ಯಾರ್ಥಿನಿಯರಿಂದ ನೃತ್ಯ ಸಂಭ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪೇಸ್ ಪಿಯು ಕಾಲೇಜಿನಲ್ಲಿ ಸಂಸ್ಕÈತ ಉಪನ್ಯಾಸಕರಾದ ಡಾ ಮೈತ್ರೇಯಿ ಆದಿತ್ಯ, ಸಹೃದಯಿಗಳಾದ ಶ್ರೀಮತಿ ಶಾರದಾ ಶಂಕರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗದ ಸಹಾಯಕ ನಿರ್ದೇಶಕರಾದ ಶ್ರೀ ಹೆಚ್.ಉಮೇಶ್ ಆಗಮಿಸುವರು. ಶ್ರೀವಿಜಯದ ಅಧ್ಯಕ್ಷರಾದ ಡಾ|| ಕೆ.ಆರ್. ಶ್ರೀಧರ್, ಅಧ್ಯಕ್ಷತೆ ವಹಿಸುವರು. ಸಂಜೆ ಆರಕ್ಕೆ, ರಾಜೇಂದ್ರ ನಗರದ ಪವಿತ್ರಾಂಗಣದಲ್ಲಿ ನಡೆಯಲಿರುವ ಈ ಕರ್ಯಕ್ರಮಕ್ಕೆ, ಕಲಾಭಿಮಾನಿಗಳು ಆಗಮಿಸುವಂತೆ ಶ್ರೀವಿಜಯದ ಕಲಾನಿರ್ದೇಶಕಿ, ಡಾ ಕೆ ಎಸ್ ಪವಿತ್ರ ಕೋರಿದ್ದಾರೆ.
ಆಗಸ್ಟ್ 1 & 2 . ಶ್ರೀವಿಜಯ ಕಲಾನಿಕೇತನ ಟ್ರಸ್ಟ್ ನಿಂದ “ಕಲಾ ಸಂಭ್ರಮ- 2026”.
Date:
