Thursday, September 10, 2026
Thursday, September 10, 2026

ಓದಿನ ಜೊತೆ ಪಠ್ಯೇತರ ಚಟುವಟಿಕೆ ಇರಲಿ. ಟೀವಿ,ಮೊಬೈಲ್ ಗೀಳಿನಿಂದ ದೂರ ಇರಿ- ಡಾ.ಆರ್.ಪ್ರತಿಭಾ

Date:

“ಭಾರತದ ಮಾಜಿ ಪ್ರಧಾನಿಗಳಾದ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರು ಕಾಲೇಜಿನ ಶಂಕು ಸ್ಥಾಪನೆ ಮಾಡಿದ್ದು, ಅವರ ಪ್ರೇರಣೆಯಿಂದ ನೀವುಗಳು ಜೀವನ ನಡೆಸಬೇಕು.

ಗಾಂದೀಜಿ ಹಾಗೂ ಇತರೆ ಸ್ವತಂತ್ರ ಹೋರಾಟಗಾರರ ಪುಸ್ತಕಗಳನ್ನು ಓದಬೇಕು. ಈ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿದ್ದ ಕವಿಶ್ರೇ಼ಷ್ಠ ಗೋಪಾಲಕೃಷ್ಣ ಅಡಿಗರು ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಚಂದ್ರಶೇಖರ ಕಂಬಾರ ಮತ್ತು ಜಿ.ಕೆ. ಗೋವಿಂದ ರಾವ್‌ ಇಂತಹ ಶ್ರೇಷ್ಠ ಉಪನ್ಯಾಸಕರು ಈ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವುದು ಕೂಡಾ ನಿಮಗೆ ಪ್ರೇರಣೆಯಾಗಲಿ.

ಈ ಕಾಲೇಜಿನಲ್ಲಿ ಉತ್ತಮ ಪರಿಸರ ಮತ್ತು ವಾತಾವರಣ ಇದೆ. ಗ್ರಂಥಾಲಯವೂ ಕೂಡಾ ಉತ್ತಮ ಪುಸ್ತಕಗಳನ್ನು ಹೊಂದಿದ್ದು, ಅದನ್ನೂ ಕೂಡಾ ತಾವು ಉಪಯೋಗಿಸಿಕೊಳ್ಳಬೇಕು. ನಿಮ್ಮ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಟಿ.ವಿ., ಮೊಬೈಲ್‌ ಇವುಗಳಿಂದ ನೀವು ದೂರ ಇರಿ. ಉತ್ತಮವಾದ ಹವ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ.

ಈಗಿನಿಂದಲೇ ನಿಮ್ಮ ಮುಂದಿನ ಗುರಿಯನ್ನು ಇಟ್ಟುಕೊಂಡು ಸತತ ಪರಿಶ್ರಮಪಡಿ. ಇದರಿಂದ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಉತ್ತಮ ಆರ್ಥಿಕತೆ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ಹೆಸರು, ಪದವಿ, ಪುರಸ್ಕಾರವನ್ನು ಪಡೆದುಕೊಂಡು ದೇಶದ ಆಸ್ತಿಯಾಗಿರಿ” ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನಡೆಸುತ್ತಿರುವ ಲಾಲ್‌ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ. ಸೊಲಬಣ್ಣ ಶೆಟ್ಟಿ ಮಹಾವಿದ್ಯಾಲಯದ ಪ್ರಥಮ ವಷದ ಪದವಿ ವಿದ್ಯಾರಂಭ ಕಾಯಕ್ರಮವನ್ನು ಉಧ್ಘಾಟಿಸಿ ಸಾಗರದ ತಹಶೀಲ್ದಾರ್‌ರಾದ ಡಾ. ಪ್ರತೀಭಾ ಆರ್.‌ ಇವರು ಮಾತನಾಡಿದರು.

ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ಡಾ. ಪ್ರತೀಭಾ ಆರ್.‌ ಇವರನ್ನು ಗೌರವಿಸಲಾಯಿತು.
ಕಾಯಕ್ರಮದ ಮೊದಲು ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಇವರು ಎಲ್ಲರನ್ನೂ ಸ್ವಾಗತಿಸಿ ಉದ್ಘಾಟಕ ಪರಿಚಯವನ್ನು ಮಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಹೆಚ್.‌ ಎಂ. ಶಿವಕುಮಾರ್‌ ಇವರು ಕಾಲೇಜು ನಡೆದು ಬಂದ ದಾರಿ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯದ ಬಗ್ಗೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಆರ್.‌ ಜಯಂತ್‌ ಇವರು ವಹಿಸಿದ್ದರು.

ಕೊನೆಯಲ್ಲಿ ಡಾ. ಹರ್ಷ ವಿಮನ್‌, ಕ್ರೀಡಾ ಮತ್ತು ಸಾಂಸೃತಿಕ ವೇದಿಕೆ ಸಂಚಾಲಕರು ಇವರು ವಂದಿಸಿದರು.

ಕಾಯಕ್ರಮದಲ್ಲಿ ಪ್ರತಿಷ್ಠಾನದ ಕೋಶಾಧ್ಯಕ್ಷರಾದ ಕೆ. ವೆಂಕಟೇಶ್‌, ಕವಲಕೋಡು, ದೈಹಿಕ ಶಿಕ್ಷಣ ನಿರ್ದೇಶಕರಾದ ಭರತ್‌ ರಾಜ್‌ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...