Wednesday, September 9, 2026
Wednesday, September 9, 2026

ಚರ್ಮ ಕುಶಲಕರ್ಮಿಗಳಿಗೆ ಪಾದರಕ್ಷಾ ತಯಾರಿಕಾ ಸ್ಪರ್ಧೆ

Date:

ಶಿವಮೊಗ್ಗ ಜಿಲ್ಲೆಯ ಡಾ|| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ನೈಜ ಚರ್ಮ ಕುಶಲಕರ್ಮಿಗಳಿಗೆ ಕರಕುಶಲೆಯ ಕೌಶಲ್ಯ ಹಾಗೂ ಪಾದರಕ್ಷೆಗಳ ತಯಾರಿಕೆಯ ನೈಪುಣ್ಯ ಮತ್ತು ತಾಂತ್ರಿಕ ಕೌಶಲ್ಯವನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಸ್ಥಳದಲ್ಲೇ ಪಾದರಕ್ಷಾ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿಗೆ ಸೇರಿದ ಆರುಂಧತಿಯಾರ್, ಚಮ್ಮದಿಯಾ, ಚಮಾರ್, ಚಂಬಾರ್, ಚಮಗಾರ್, ದಕ್ಕಲ್, ದಕ್ಕಲ್ವಾರ್, ದಕ್ಕಲಿಗ, ಮಾದರ್, ಮಾದಿಗ್, ಮಾದಿಗ, ಮಿನಿಮಾದಿಗ್, ಜಾಂಬುವುಲು, ಹರಳಯ್ಯ, ಮಾಚಿಗಾರ್, ಮೋಚಿಗಾರ್, ಮೋಚಿ, ಮುಚಿ, ತೆಲುಗು ಮೋಚಿ, ಕಮಾಟಿ, ಮೋಚಿ, ರೋಹಿದಾಸ್, ಧೋರ್, ಕಕ್ಕಯ್ಯ, ಕಂಕಯ್ಯ, ಸಮಗಾರ, ಸಮಗಾರ್ ಚರ್ಮ ಕುಶಲಕಮಿಗಳು/ಕುಟುಂಬದವರಾಗಿದ್ದು, 18 ರಿಂದ 35 ವರ್ಷದೊಳಗಿನವರಾಗಿರಬೇಕು. ಅವಶ್ಯವಿರುವ ಕಚ್ಚಾವಸ್ತು ಹಾಗೂ ಟೂಲ್ಸ್ ಗಳನ್ನು ಸ್ವತಃ ತರಬೇಕು. ಪುರುಷ/ಮಹಿಳೆಯ ಒಂದು ಜೊತೆ ಪಾದರಕ್ಷೆಗಳನ್ನುಮಾತ್ರ ತಯಾರಿಸುವುದು. ಕೊಲ್ಹಾಪುರಿ ಮಾದರಿಯ ಪಾದರಕ್ಷೆಗಳನ್ನು ಪರಿಗಣಿಸುವುದಿಲ್ಲ.
ಸ್ಪರ್ಧೆಯು ಜೂ. 06 ರಂದು ಬೆಳಗ್ಗೆ 11.00 ರಿಂದ ಸಂಜೆ 5.00ರವರೆಗೆ ಕರ್ನಾಟಕ ಇನ್ಸ್ವಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ, ಉಲ್ಲಾಳ ಉಪನಗರ, ಕೆಂಗೇರಿ, ಬೆಂಗಳೂರು ಇಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ ರೂ. 50000/-, ದ್ವಿತೀಯ ಬಹುಮಾನ ರೂ. 30000/-, ತೃತೀಯ ಬಹುಮಾನ ರೂ. 20000/- ಹಾಗೂ 2 ಸಮಾಧಾನಕರ ಬಹುಮಾನ ರೂ. 10000/- ಗಳಾಗಿರುತ್ತದೆ.
ಆಸಕ್ತರು ಅರ್ಜಿಯನ್ನು https://lidkar.com ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಜಾತಿ ಮತ್ತು ವೃತ್ತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ನಿಗಮದಿಂದ ತರಬೇತಿ ಪಡೆದ ದಾಖಲೆ/ ಇ-ಶ್ರಮ ಕಾರ್ಡ್ ಗಳನ್ನು ಲಗತ್ತಿಸಿ ಡಾ|| ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿ., ಡಾ|| ಜಗಜೀವನರಾಂ ಲಿಡಕರ್ ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ ಏರಿಯಾ, ವಸಂತನಗರ, ಬೆಂಗಳೂರು 560052 ಇಲ್ಲಿಗೆ ಅಂಚೆ ಮೂಲಕ ಮೇ 30 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಲಿಡಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9141304210 ನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...