ಕೊಲೆ ಆರೋಪಿಗಳಿಗೆ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.
2020 ರ ಜನವರಿ 15 ರಂದು ಕೊಲೆಯಾಗಿದ್ದ ಪ್ರಕಾಶ್ ಬಾಬು ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ನಿ ಫ್ಲೋರಾ ನ್ಯಾನ್ಸಿ ಹಾಗೂ ಆಕೆಯ ಪ್ರಿಯಕರ ರಾಜಶೇಖರಯ್ಯ ಅವರನ್ನು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಬಂದಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶ ಇಂದಿರಾ ಮೈಲ ಸ್ವಾಮಿ ಚೆಟ್ಟಿಯಾರ್ ಅವರು ಗಲ್ಲು ಶಿಕ್ಷೆ ಜೊತೆಗೆ 14 ಲಕ್ಷ ದಂಡ ವಿಧಿಸಿದ್ದಾರೆ.
