Sunday, November 1, 2026
Sunday, November 1, 2026

Kuvempu University ಮೇಘನಾ ಪುನೀತ್ ಲಾಡ್‌ಗೆ ಡಾಕ್ಟರೇಟ್ ಪ್ರದಾನ

Date:

Kuvempu University ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಜಿ. ಜೆ. ಸತೀಶರವರ ಮಾರ್ಗದರ್ಶನದಲ್ಲಿ “ISOLATION PURIFICATION BIOCHEMICAL CHARACTERIZATION AND BIOLOGICAL ACTIVITIES OF LECTIN FROM SCADOXUS MULTIFLORUS BULBS” ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರ ವಿಷಯದಲ್ಲಿ ಮೇಘನಾ ಪುನೀತ್ ಲಾಡ್ ಇವರಿಗೆ ಪಿ.ಎಚ್.ಡಿ ಪದವಿ ನೀಡಿದೆ. ಸ್ಕ್ಯಾಡೋಕ್ಸಸ್ ಮಲ್ಟಿಫ್ಲೋರಸ್ (SCADOXUS MULTIFLOURS) ಸಸ್ಯದಿಂದ ದೊರೆಯುವ ಲೆಕ್ಟಿನ್‌ಗಳು ಜೀವಾಣುನಾಶಕ, ಕ್ಯಾನ್ಸರ್ ವಿರೋಧಿ ಹಾಗೂ ರೋಗ ನಿರೋಧಕ ಸಂಬಂಧಿತ ಜೈವಿಕ ಕ್ರಿಯಾಶೀಲತೆಗಳನ್ನು ಹೊಂದಿರುವುದರಿಂದ ಈ ಅಧ್ಯಯನ ಮಹತ್ವದ್ದಾಗಿದೆ. ಹೊಸ ಸಸ್ಯ ಪ್ರೋಟೀನ್‌ಗಳನ್ನು ಗುರುತಿಸುವ ಮೂಲಕ ಔಷಧ ಅಭಿವೃದ್ಧಿ ಮತ್ತು ರೋಗ ನಿರ್ಣಯ ಅಧ್ಯಯನಗಳಿಗೆ ಇದು ಜೈವರಾಸಾಯನಿಕ ಹಾಗೂ ಜೈವ ವೈದ್ಯಕೀಯ ಸಂಶೋಧನೆಗೆ ಮಹತ್ವದ ಕೊಡುಗೆ ನೀಡುತ್ತದೆ. ಮೇಘನಾ ಪುನೀತ್ ಲಾಡ್‌ರವರು ಪ್ರಸ್ತುತ ಮೈಸೂರಿನ ಎಂ.ಎಂ.ಕೆ ಮತ್ತು ಎಸ್.ಡಿ.ಎಂ. ಕಾಲೇಜಿನಲ್ಲಿ ಮುಖ್ಯಸ್ಥರು ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

—

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...

Kannada Rajyotsava ಕನ್ನಡ ರಾಜ್ಯೋತ್ಸವ – ನಮ್ಮ ಹೆಮ್ಮೆಯ ಹಬ್ಬ

Kannada Rajyotsava ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ರಾಜ್ಯೋತ್ಸವವು ಹೆಮ್ಮೆ, ಸ್ವಾಭಿಮಾನ ಮತ್ತು...

Kuvempu University ಕುವೆಂಪು ವಿವಿ ಸಂಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ

Kuvempu University ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ...