Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು ಕಲಕಿ, ಹರಿದು ಹೋಗುವಂತೆ
ಮಾಡುವ ಕ್ರಾಂತಿಕಾರರು ಜನ್ಮ ತಾಳುವುದು ಸಂಸ್ಕೃತಿಗಳ ಸಮತೋಲನ
ಉಳಿಸಿಕೊಳ್ಳಲು ಅಗತ್ಯ.
ಜೈನ ಧರ್ಮದ ಸಂಸ್ಥಾಪಕನೆಂದು ಹೇಳಲಾಗುವ ಅಹಿಂಸೆಯ ಪ್ರತಿಪಾದಕ ಮಹಾವೀರನದ್ದು
ಜನಸಂಸ್ಕೃತಿಗಳ ಹರಿಯುವಿಕೆಗೆ ದೊಡ್ಡ ಕೊಡುಗೆ.
ಆದರೆ, ಇಂಥ ಇತಿಹಾಸ ಪುರುಷರು, ಸಂಸ್ಕೃತಿಗಳ ಚೈತನ್ಯಗಳು
ತಮ್ಮ ತತ್ತ್ವಗಳಿಗೇ ವಿರುದ್ಧವಾಗಿ ಧಾರ್ಮಿಕ ವ್ಯಕ್ತಿಗಳಾಗಿ, ಶಿಲಾಮೂರ್ತಿಗಳಾಗಿ ಗುಡಿ ಗೋಪುರಗಳೊಳಗೆ ಬಂಧಿತರಾಗುವುದು ನಮ್ಮದೇ ನೆಲದ ವೈಚಿತ್ರ್ಯಗಳಲ್ಲೊಂದು.
ಮಹಾವೀರ ಹುಟ್ಟಿ, 2600 ವರ್ಷಗಳಿಗೂ ಮೇಲಾಯಿತು ಎನ್ನುತ್ತಾರೆ
ಇತಿಹಾಸಜ್ಞರು, ತೀರ್ಥಂಕರ ಮಹಾವೀರನ ಜಯಂತ್ಯೋ ತ್ವದ ಮಾರ್ಚ್ 30 ರಂದು ಆಚರಿಸಲಾಗುತ್ತಿದೆ.
ನಮಗೆ ಅಧಿಕೃತವಾಗಿ ಲಭ್ಯವಾಗುವ ಮಾಹಿತಿಯ ಪ್ರಕಾರ ಜೈನಧರ್ಮದ ಸ್ಥಾಪಕ
ನೆಂದು ಹೇಳಲಾಗುವ ವರ್ಧಮಾನ ಮಹಾವೀರ ಜನ್ಮ ತಳೆದು ಇಂದಿಗೆ 2600 ವರ್ಷಗಳಿಗೂ ಮಿಕ್ಕಿದೆ.
ಕ್ರಿ.ಪೂ. 599ರಲ್ಲಿ ಬಿಹಾರದ ವಿದೇಹದ ರಾಜಧಾನಿ ವೈಶಾಲಿಯ ಕುಂಡಪುರದಲ್ಲಿ ಮಹಾವೀರ
ಜನಿಸಿದರು. ತಂದೆ ಸಿದ್ದಾರ್ಥ, ತ್ರಿಶಾಲ ದೇವಿ ಅರಮನೆಯಲ್ಲಿ
ಸಕಲ ಸುಖೋಪ ಭೋಗಗಳು, ಮತ್ತೊಂದಡೆ ಹೆತ್ತವರ ಪ್ರೀತಿಯ ಹಾರೈಕೆ, ಮಹಾವೀರನಿಗೆ ಇವೆಲ್ಲ ಬೇಕಾಗಿರಲಿಲ್ಲ.
ತನ್ನ ಸುತ್ತಲಿನ ಸಮಾಜದ ಅತ್ಯಂತ ಕೆಳಸ್ತರದ ಜನರ ನೋವು,
ಆಕ್ರಂದನ, ಒಡಿಗೊಳಿಗಾಗಿ ಬಡವರ ಹಾಹಾಕಾರ, ರೋಗ ರುಜಿನಗಳು, ಆರಮನೆ, ಒಡ್ಡೋಲಗ, ಧನಕನಕಕ್ಕಿಂತ ಮಿಗಿಲಹುದು ಮತ್ತೊಂದಿದೆ ಎಂಬ ಜಿಜ್ಞಾಸೆ ಅವರನ್ನು ತೀವ್ರ ವಾಗಿ ಬಾಧಿಸಿತು.

ಮಹಾವೀರ ಬೋದಿಸಿದ ತತ್ವಗಳು, ಅಂದಿನ ಆಡುಭಾಷೆಯಾದ ಅರ್ಥಮಾನದಿಯಲ್ಲಿತ್ತು. ಎಲ್ಲಾ ವರ್ಗದ
ಜನರನ್ನು ಒಡಗೂಡಿಸಿ, ‘ಸಮವಸರಣ ಸಭೆಯನ್ನು ರಚಿಸಿದ, ಮಹಾವೀರ ಮಹಾನ್
ದಾರ್ಶನಿಕನೂ ಹೌದು. ಹೊಸದೇನನ್ನೋ ಬೋಧಿಸುವಾಗ ಬರುವ ತೊಂದರೆಗಳು
ಮಹಾವೀರನಂಥ ಮಹಾನುಭಾವನನ್ನೂ ಬಿಟ್ಟಿರಲಿಲ್ಲ, ಅದಲ್ಲವನ್ನೂ ಮೀರಿ ಬೆಳೆದು
ನಿಂತ ಮಹಾವೀರನ ಜೀವನವೇ ದರ್ಶನ, ಹೆತ್ತವರ ಪ್ರೀತಿಯಿಂದ ವಂಚಿತ
ಸಮಾಜದಿಂದ ತಿರಸ್ಕೃತಳಾದ ಮಹಿಳೆಯೋರ್ದಳಿಗೆ ಸಮವಸರಣ ಸಭೆಯಲ್ಲಿ ವಿಶೇಷ
ಪ್ರಾತಿನಿಧ್ಯ ನೀಡಿದ್ದು, ನಿಸರ್ಗದಲ್ಲಿರುವ ಗಿಡಮರ ಬಳ್ಳಿಗಳ ಮಹತ್ತ್ವವನ್ನು ಎತ್ತಿ
ಹೇಳಿದು, ಬದುಕಿಗೆ ಅವಶ್ಯವಿದ್ದಷ್ಟೇ ಸಂಪಾದಿಸುವಂತೆ ಮನವೊಲಿಸಿದ್ದು, ನಾಲಿಗೆ
ಚಪಲಕ್ಕೆ ಪ್ರಾಣಿಹಿಂಸೆ ಮಾಡದಂತೆ ಬುದ್ಧಿ ಹೇಳಿದ್ದು…
ಮೊದಲಾದ ಮಹಾವೀರನ ಕಾರ್ಯಗಳು ಬದುಕನ್ನು ಹಸನುಗೊಳಿಸಲು ಹಸಿಕೊಂಡಿದ್ದರು, ಇದ್ಯಾವದೇ ಧರ್ಮದ
ಮನುಷ್ಯರಿಗೆ ಮೂಲಭೂತವಾಗಿ ಇರಬೇಕಾದ ಒಳ್ಳೆಯ ದರ್ಶನ, ಒಳ್ಳೆಯ ಜ್ಞಾನ ಮತ್ತು ಒಳ್ಳೆಯ ನಡವಳಿಕೆ ಕುರಿತು ಬೋಧಿಸಿದ ಮಹಾವೀರ, ತಾನೂ ಬದುಕಿ, ಇತರರನ್ನು ಬದುಕಲು ಬಿಡುವುದೇ ಧರ್ಮ ಎಂದು ಹೇಳಿದರು.
Klive Special Article ಬೋಧನೆಗಳು ಕಾಲ ಕ್ರಮೇಣ ಧರ್ಮವೊಂದರ ಉಗಮಕ್ಕೆ ಕಾರಣವಾಯಿತು, ಅದೇ
ಜೈನಧರ್ಮ.
ಶಾಂತಿಪ್ರಿಯರೂ, ಸಾಹಿತ್ಯ-ಕಲೆಗಳ ಆರಾಧಕರ, ಬಂದಿರುವ ಜೈನ
ಧರ್ಮೀಯರಿಂದ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೂ ಅಪಾರ ಕೊಡುಗೆ ದೊರಕಿದೆ.
ತಮಿಳಿನ ಮಹಾಕಾವ್ಯವಾದ ತಿರುಕ್ಕುರುಳ್, ಸಂಸ್ಕೃತದ ಅಮರಕೋಶ ಮತ್ತು
ಯಶಸ್ತಿಲಕ ಚಂದ್ರ, ಹತ್ತನೇ ಶತಮಾನದಿಂದ ಮರೆಯುತ್ತಿರುವ ಪಂಪ-ರನ್ನ-ಜನ್ನ,
‘ಬೃಹತ್ಕಥೆ’ ಬರೆದ ಹರಿಷೇಣ, ‘ಅಭಿಜ್ಞಾನಮಾಲಾ’ ಬರೆದ ಹಾಲಾಯುಧ,
‘ಲಕ್ಷ್ಮೀನಾಮಮಾಲಾ’ ಬರೆದ ಧನಪಾಲ ಮತ್ತಿತರರು, ತಮಿಳಿನ ಇಲಿಯಡ್ ಮತ್ತು
ಒಬ್ಬ ಎಂದೇ ಹೇಳಲಾಗುತ್ತಿರುವ ‘ಜೀವಕ ಚಿಂತಾಮಣಿ’, ‘ತತ್ವಾರ್ಥ ಸಾರ,
ಪಂಚಾಸ್ತಿಕಾಯ’ ಮೊದಲಾದ ಕೃತಿಗಳು ಸಾಹಿತ್ಯದ ಹಿರಿಮೆಯೂ ಹೌದು,
ಜನಾಂಗದ ಹಿರಿಮೆಯೂ ಹೌದು, ಪ್ರತಿವರ್ಷ ಸಾಹಿತ್ಯಕ್ಕಾಗಿ ನೀಡಲಾಗುತ್ತಿರುವ
ಪ್ರತಿಷ್ಠಿತ “ಜ್ಞಾನಪೀಠ ಪ್ರಶಸ್ತಿ”ಯನ್ನು ಸ್ಥಾಪಿಸಿದವರು ಶಾಂತಿ ಪ್ರಸಾದ್ ಜೈನ್. ಭಗವಾನ್ ಮಹಾವೀರ ಬೋಧಿಸಿದ ಧರ್ಮದ ತಿರುಳುಗಳು, ರಾಜಸ್ಥಾನದ
ಉದಯಗಿರಿ, ಖಂಡು, ಉಂತಗಿರಿ, ರಾಜು, ಪಾವಾಪುರಿ, ತಾಲಿಕ್,
ಮೌಂಟ್ ಅಬುವಿನಲ್ಲಿ ರುವ ದಿಬ್ಬಾರ ಜೈನ ಬಸದಿ, ಬಿಹಾರದ ಸಮ್ಮೇದ ಶಿಖರ
ಅಜಂತ ಮತ್ತು ಎಲ್ಲೋರದಲ್ಲಿರುವ ನೂರಾರು ಕಲಾತ್ಮಕವಾದ ಬಸದಿ ಮತ್ತು
ಗುಹಾಂತರ ದೇವಾಲಯಗಳು, ಕರ್ನಾಟಕದ ಶ್ರವಣ ಬೆಳಗೊಳ, ಕಾರ್ಕಳ,
ಬೇಲೂರು, ಧರ್ಮಗಳ ಆಗ್ರಾದ ಶೋಣಾದಿನ ಗೊಮ್ಮಟನ ವಿಗ್ರಹಗಳು
ಕಲೆ, ಉಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಜೈನ
ನಿಂತಿದ್ದರೂ, ಜೈನರು ಇಂದಿಗೂ ಅಲ್ಪಸಂಖ್ಯಾತರು.ದೇವರನ್ನು ಮನುಷ್ಯರತ್ತ ತಂದ
ಸಂಸ್ಕೃತಿ ದೇಶದ ಉಳಿದ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿ ಬೆಳೆಸಿದ
ಕೀರ್ತಿಯೂ ಜೈನರಿಗೆ ಸಂಸ್ಕೃತಿಗಳ
ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಜೈನರು ಇಂದಿಗೂ ಅಲ್ಪಸಂಖ್ಯಾತರು. ದೇವರನ್ನು ಮನುಷ್ಯರತ್ತ ತಂದ
ಸಂಸ್ಕೃತಿ ದೇಶದ ಉಳಿದ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿ, ಬೆಳೆದ
ಕೀರ್ತಿಯೂ ಜೈನರಿಗೆ ಸಲ್ಲಬೇಕು.
