Friday, May 1, 2026
Friday, May 1, 2026

Chamber Of Commerce Shivamogga ತರೀಕೆರೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಸ್.ಶಂಕರನಾರಾಯಣರಿಗೆ ಸನ್ಮಾನ

Date:

Chamber Of Commerce Shivamogga ಸಾಹಿತಿ ಹಾಗೂ ಬೆಂಗಳೂರು ಆಕಾಶವಾಣಿ ಮುಖ್ಯಸ್ಥರಾದ ಡಾ. ಎ.ಎಸ್.ಶಂಕರ ನಾರಾಯಣ ರವರಿಗೆ ಈ ಬಾರಿ ತರೀಕೆರೆ ತಾಲೂಕಿನ 19 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಂ.ಎನ್.ಸುಂದರರಾಜ್ ರವರು ಮಾತನಾಡಿ, ಸನ್ಮಾನಿತರಿಗೆ ಈ ಗೌರವ ಸಿಕ್ಕಿರೋದು ತುಂಬಾ ಸಂತೋಷದ ವಿಷಯ. ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯವನ್ನು ನಾವೆಲ್ಲ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್.ಮನೋಹರ್ ಮೂಲತಃ ತರೀಕೆರೆಯವರೇ ಆದ ಶಂಕರ್ ನಾರಾಯಣ್ ತಮ್ಮ ಬರಹದ ಮೂಲಕ ಆಕಾಶವಾಣಿ ಸಂದರ್ಶನಗಳ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಶಂಕರ ನಾರಾಯಣ ಅವರ ಸಾಧನೆ ಸಾಕಷ್ಟು ಇದೆ. ಅವರ ಸಾಧನೆಗೆ ಸಿಕ್ಕ ಮನ್ನಣೆ ಇದು. ಅವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚು ಹೆಚ್ಚು ಆಗಲಿ ಎಂದು ಶುಭ ಹಾರೈಸಿದರು.

Chamber Of Commerce Shivamogga ಇದೇ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್.ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ ಆರ್ ಜೆ ಗಳಾದ ಗಣೇಶ್ ಕೆಂಚನಾಳ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್, ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ ಉಪಸ್ಥಿತರಿದ್ದರು.

ತರೀಕೆರೆ ತಾಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ದೊರೆತಿರುವುದು ಸೌಭಾಗ್ಯ. ತಮ್ಮ ಅಧಿಕಾರ ಅವಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಬೆಂಗಳೂರಿನ ಆಕಾಶವಾಣಿ ಮುಖ್ಯಸ್ಥರಾದ ಡಾ. ಎ.ಎಸ್.ಶಂಕರ ನಾರಾಯಣ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ,/ಬಿಸಿಎ ಪದವಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Kuvempu University ಕುವೆಂಪು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ...

Shivamogga District Police ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಡ್ರೋನ್ ಮೂಲಕ ಪತ್ತೆ. ಮೂವರ ಬಂಧನ.

Shivamogga District Police ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಕಾನೂನು ಬಾಹೀರ...