Thursday, March 19, 2026
Thursday, March 19, 2026

Klive Special Article ಅತ್ತೆ-ಸೊಸೆ ಸ್ಪರ್ಧಿಗಳಲ್ಲ, ಸಂಸಾರದ ಸೌಹಾರ್ದ ಜೀವಿಗಳು

Date:

ಲೇ: ಶ್ವೇತಾ ಸುಧೀರ್ ಶೃಂಗೇರಿ.

Klive Special Article ಅತ್ತೆ–ಸೊಸೆ ಸಂಬಂಧವನ್ನು ನಮ್ಮ ಸಮಾಜದಲ್ಲಿ ಬಹುಸಾರಿ ಸಂಘರ್ಷದ ಕಣ್ಣಿನಿಂದಲೇ ನೋಡಲಾಗುತ್ತದೆ. “ಅತ್ತೆ–ಸೊಸೆ ಸೌಹಾರ್ದದಿಂದ ಇರುವುದು ಅಸಾಧ್ಯ” ಎಂಬ ಕಲ್ಪನೆ ಪೀಳಿಗೆಗಳಿಂದ ಹರಡಿಕೊಂಡು ಬಂದಿದೆ. ಆದರೆ ಈ ಕಲ್ಪನೆ ನಿಜಕ್ಕೂ ಅಷ್ಟು ಅಚಲವೇ? ಮಾನವ ಸಂಬಂಧಗಳ ಮೂಲ ಸ್ವರೂಪವನ್ನು ನೋಡಿದರೆ, ಅತ್ತೆ–ಸೊಸೆ ನಡುವಿನ ಅಸಮಾಧಾನ ಅನಿವಾರ್ಯವಲ್ಲ; ಅದು ತಪ್ಪು ಕಲ್ಪನೆಗಳು, ಅಹಂಕಾರ, ಮತ್ತು ಪರಸ್ಪರದ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದರಿಂದ ಮಾತ್ರ ಉಂಟಾಗುತ್ತದೆ.
ಅತ್ತೆ ಅಮ್ಮನಾದಾಗ, ಸೊಸೆಯೂ ಕೂಡಾ ಮಗಳು ಆಗ್ತಾಳೆ, ಅತ್ತೆಯಾದವರು ಅತ್ತೆಯ ಸ್ಥಾನವನ್ನು ತುಂಬುವ ಭರದಲ್ಲಿ ಅತ್ತೆಯಂತೆ ವರ್ತಿಸಿ ಸೊಸೆಯನ್ನು ದೂರೋದ್ರಲ್ಲಿ ಅರ್ಥ ಇಲ್ಲ ಅಲ್ಲವೇ?
ಅತ್ತೆಯ ದೃಷ್ಟಿಯಲ್ಲಿ, ಸೊಸೆ ತನ್ನ ಮನೆಗೆ ಹೊಸದಾಗಿ ಬಂದವಳು ಮಾತ್ರವಲ್ಲ; ತನ್ನ ಮಗನ ಜೀವನದಲ್ಲಿ ಹೊಸ ಸ್ಥಾನ ಪಡೆದವಳು. ವರ್ಷಗಳ ಕಾಲ ಮಗನನ್ನು ಸಾಕಿ ಬೆಳೆಸಿದ ಅತ್ತೆಗೆ, ಆ ಮಗನ ಮೇಲಿನ ಪ್ರೀತಿ ಮತ್ತು ಹಕ್ಕು ಸಹಜ. ಆದರೆ ಸೊಸೆ ಬಂದ ನಂತರ, ಆ ಹಕ್ಕು ಕಡಿಮೆಯಾಗುತ್ತಿದೆ ಎಂಬ ಭಾವನೆ ಅತ್ತೆಯ ಮನಸ್ಸಿನಲ್ಲಿ ಮೂಡಬಹುದು. ಇದರಿಂದ ಸೊಸೆಯನ್ನು “ಪ್ರತಿಬಂಧಿ”ಯಂತೆ ಕಾಣುವ ಪ್ರವೃತ್ತಿ ಉಂಟಾಗುತ್ತದೆ. ಇದು ಅತ್ತೆಯ ತಪ್ಪಲ್ಲ; ಬದಲಾವಣೆಯ ಭಯ ಮತ್ತು ಬಂಧನದ ಆಳವೇ ಅದರ ಮೂಲ. ಸೊಸೆಯ ಆಯ್ಕೆಯ ಉದ್ದೇಶವೇ ನನ್ನ ಮಗ ಚೆನ್ನಾಗಿ ಇರ್ಬೇಕು ಅನ್ನೋದು ಮನಸಲ್ಲಿ ಇರುವಾಗ, ಸೊಸೆ ಬಂದಮೇಲೆ ಮಗ ದೂರಾಗುತ್ತಾನೆ ಅನ್ನೋ ಭಯದ ಮನಸ್ಥಿತಿ ಏಕೆ ಬೇಕು?
Klive Special Article ಇನ್ನೊಂದು ಕಡೆ, ಸೊಸೆಯ ಮನಸ್ಸಿನಲ್ಲಿ ಬೇರೆ ಚಿಂತನೆ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿಗಳು—ಇವೆಲ್ಲದರ ನಡುವೆ ಗಂಡನ ಪ್ರೀತಿ ತನ್ನದಾಗಿರಬೇಕು ಎಂಬ ಭಾವನೆ ಸಹಜ. ಅತ್ತೆ ಗಂಡನ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದಾಳೆ ಎಂಬ ಅನುಮಾನ ಸೊಸೆಗೆ ಮೂಡಬಹುದು. ಇದರಿಂದ ಅತ್ತೆ ತನ್ನ ಗಂಡನನ್ನು ತನ್ನಿಂದ ದೂರ ಮಾಡುತ್ತಿದ್ದಾಳೆ ಎಂಬ ಭಾವನೆ ಬಲವಾಗುತ್ತದೆ. ಈ ಮನಸ್ಥಿತಿಗಿಂತ ಮಗನಿಗೆ ಅಮ್ಮನು ಕೂಡಾ ಮುಖ್ಯ ಅನ್ನೋದನ್ನ ಅರ್ಥ ಮಾಡ್ಕೊಂಡು ಬಿಟ್ರೆ ಜೀವನ ಸ್ವರ್ಗಕ್ಕೆ ಸಮ ಅಲ್ವೇ?
ಆದರೆ ನಿಜವಾಗಿ ನೋಡಿದರೆ, ಈ ಇಬ್ಬರ ನಡುವೆ ಸ್ಪರ್ಧೆ ಇರಬೇಕಾದ ಅಗತ್ಯವೇ ಇಲ್ಲ. ಅತ್ತೆ ತನ್ನ ಮಗನನ್ನು ಮಗುತನದಿಂದಲೇ ಸಾಕಿ ಬೆಳೆಸಿದವಳು; ಅವಳ ಪಾತ್ರ ಅತ್ಯಂತ ಮಹತ್ವದದು. ಆದರೆ ಮದುವೆಯ ನಂತರ, ಆ ಜವಾಬ್ದಾರಿಯ ಒಂದು ಭಾಗವನ್ನು ಸೊಸೆಗೆ ಹಸ್ತಾಂತರಿಸುವುದು ಸಹಜ. ಇದು ಕಳೆದುಕೊಳ್ಳುವಿಕೆ ಅಲ್ಲ—ಹೊಸ ಸಂಬಂಧಕ್ಕೆ ಅವಕಾಶ ನೀಡುವಿಕೆ, ಜವಾಬ್ದಾರಿಯನ್ನ ಸೊಸೆಗೆ ನೀಡಿ ನಿರ್ವಹಣೆ ಮಾಡೋ ಕಲೆಯನ್ನು ಕಲಿಸುವ ಪರಿ, ವಯಸ್ಸು ಆಗ್ತಾ ಹೋದ ಹಾಗೆ ಜವಾಬ್ದಾರಿ ಮಕ್ಕಳಿಗೆ ನೀಡುತ್ತಾ ವೃದ್ಧಾಪ್ಯಕ್ಕೆ ಸಾಗೋದು ಜಗದ ನಿಯಮ ಕೂಡಾ, ಅದೇ ರೀತಿ, ಸೊಸೆಯೂ ಅತ್ತೆಯನ್ನು ಕೇವಲ “ಗಂಡನ ತಾಯಿ”ಯಾಗಿ ನೋಡದೆ, ತಾಯಿಯ ಸ್ಥಾನದಲ್ಲಿ ಕಾಣುವ ಮನೋಭಾವ ಬೆಳೆಸಿದರೆ, ಸಂಬಂಧದಲ್ಲಿ ಮೃದುತ್ವ ಹೆಚ್ಚುತ್ತದೆ.
ಸೌಹಾರ್ದದ ಮೂಲ ಪರಸ್ಪರ ಗೌರವ. ಅತ್ತೆ ಸೊಸೆಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು; ಸೊಸೆ ಅತ್ತೆಯ ಜೀವನದಲ್ಲಿ ಬದಲಾವಣೆಗಳು ಸಹಜವೆಂದು ಒಪ್ಪಿಕೊಳ್ಳಬೇಕು. ಮಾತಿನ ಮೃದುತ್ವ, ಪರಸ್ಪರದ ಭಾವನೆಗಳಿಗೆ ಗೌರವ, ಮತ್ತು ಸ್ವಲ್ಪ ಸಹನೆ—ಇವು ಇದ್ದರೆ ಅತ್ತೆ–ಸೊಸೆ ಸಂಬಂಧ ಕಠಿಣವಾಗಬೇಕಾದ ಅಗತ್ಯವೇ ಇಲ್ಲ.
ಅಂತಿಮವಾಗಿ, ಅತ್ತೆ–ಸೊಸೆ ಸಂಬಂಧವು ಸ್ಪರ್ಧೆಯಲ್ಲ; ಅದು ಎರಡು ಮಹಿಳೆಯರ ನಡುವೆ ನಿರ್ಮಾಣವಾಗುವ ಹೊಸ ಬಂಧ. ಈ ಬಂಧವನ್ನು ಪ್ರೀತಿ, ಗೌರವ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಿಂದ ಪೋಷಿಸಿದರೆ, ಸೌಹಾರ್ದದಿಂದ ಬದುಕುವುದು ಅಸಾಧ್ಯವಲ್ಲ—ಅದು ಸುಲಭವಾಗಿ ಸಾಧ್ಯವಾಗುವ ಸುಂದರ ವಾಸ್ತವ.
ಶ್ವೇತಾ ಸುಧೀರ್ ಶೃಂಗೇರಿ
ಜಿನೀವಾ, ಸ್ವಿಟ್ಜರ್ಲ್ಯಾಂಡ್ ಇಂದ,

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...