Sri Harakere Kalikamba Devasthana ಗಾಂಧಿ ಬಜಾರ್ ನ ಶ್ರೀ ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿಯಿಂದ ನ. ೨೬ರ ನಾಳೆ ಕಡೆಯ ಕಾರ್ತಿಕ ದೀಪೋತ್ಸವದ ನಿಮಿತ್ತ ಶ್ರೀ ಕಾಳಿಕಾಂಬ ದೇವಿಗೆ ವಿಶೆಷ ಪೂಜಾ ಅಲಂಕಾರ ಹಾಗೂ ಸಂಜೆ ೬ಗಂಟೆಗೆ ದೇವಿಯ ಸನ್ನಿಧಿಯಲ್ಲಿ ದೀಪಗಳನ್ನು ಎಲ್ಲಾ ಭಕ್ತಾದಿ ಗಳಿಂದ ಬೆಳಗಿಸುವ ದೀಪೋತ್ಸವ ವನ್ನು ಹಮ್ಮಿಕೊಳ್ಳಲಾಗಿದೆ.
Sri Harakere Kalikamba Devasthana ದೀಪೋತ್ಸವ ನಂತರ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರುತ್ತದೆ. ಸಮಸ್ತ ಸಮಾಜ ಬಾಂಧವರು ದೀಪೋತ್ಸವ ದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಲು ಸಮಿತಿಯ ಅಧ್ಯಕ್ಷ ಎಂ. ಶ್ರೀನಿವಾಸ ಮೂತಿ, ಪ್ರಧಾನ ಕಾರ್ಯದರ್ಶಿ ಕೆ. ಮೌನೇಶ್ವ ರಾಚಾರ್ ಮತ್ತು ಖಜಾಂಚಿ ಎಸ್. ಜಗನ್ನಾಥ ಅವರು ಕೋರಿದ್ದಾರೆ
