Sunday, August 2, 2026
Sunday, August 2, 2026

Karnataka Rajyotsava 2025 ಕರ್ನಾಟಕದ ಸಾಧಕರ ಸಾಧನೆಯನ್ನ ಸ್ಮರಿಸಿ ಭದ್ರಾವತಿ ವಿಐಎಸ್ಎಲ್ ನಲ್ಲಿ ಸಂಭ್ರಮದ ರಾಜ್ಯೋತ್ಸವ.

Date:

Karnataka Rajyotsava 2025 ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನವೆಂಬರ್ ೧, ೨೦೨೫ ರಂದು ಕರ್ನಾಟಕ ರಾಜ್ಯೋತ್ಸವವನ್ನು ಕಂಪನಿಯ ಆವರಣದೊಳಗಿರುವ ಫ್ಯಾಕ್ಟರಿ ಮೀಟಿಂಗ್ ಹಾಲ್‌ನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕ (ವರ್ಕ್ಸ್) ಶ್ರೀ ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಶ್ರೀ ಎಲ್. ಪ್ರವೀಣ್ ಕುಮಾರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀ ಜೆ. ಜಗದೀಶ್, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಆರ್. ಹರೀಶ್‌ರವರು ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Karnataka Rajyotsava 2025 ಈ ಸಂದರ್ಭದಲ್ಲಿ ಕನಾಟಕ ರಾಜ್ಯ ಮತ್ತು ಸಾಧಕರ ಸಾಧನೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಯಿತು. ಕನ್ನಡ ನಾಡು ನುಡಿಯ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ, ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ನೆರೆದ ಸಭೀಕರನ್ನುದ್ದೇಶಿ ಮಾತನಾಡಿ, ಕನ್ನಡ ನಾಡು, ನುಡಿ ಸಂಸ್ಕೃತಿಯಬಗ್ಗೆ ಪ್ರಶಂಸಿಸಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಳಗೆ ತಿಳಿಸಿದ ಕಲಾವಿದರು ವಿವಿಧ ಪ್ರಾಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಭೀಕರ ಮನಸೂರೆಗೊಂಡರು.

ಕಲಾವಿದರು
ಸಾAಸ್ಕೃತಿಕ ಕಾರ್ಯಕ್ರಮಗಳು
ಮಂಜುಶ್ರೀ & ತ್ರಿವೇಣಿ
ಡಿ.ಎಸ್. ಕರ್ಕಿ ರಚಿಸಿರುವ – ಹಚ್ಚೇವು ಕನ್ನಡದ ದೀಪ
ಮಂಜುಶ್ರೀ
ನಾಡಗೀತೆ ನೂರರ ಸಂಭ್ರಮ
ಮAಜುಶ್ರೀ, ಪ್ರೇಮಾಭಾಯಿ,
ಅಮಿತ & ತ್ರಿವೇಣಿ
ರಾಷ್ಟçಕವಿ ಕುವೆಂಪು ವಿರಚಿತ – ನಾಡಗೀತೆ
ಕುಸುಮ, ರಮ್ಯ, ಅಮೃತ, ಪ್ರೇಮಾಭಾಯಿ & ರಕ್ಷಿತ
ಕನ್ನಡ ಭಾಷೆಯ ಕುರಿತಾದ – ಕಿರು ನಾಟಕ
ತ್ರಿವೇಣಿ
ಹೆಚ್.ಎಸ್. ವೆಂಕಟೇಶ್‌ಮೂರ್ತಿ ರಚಿಸಿರುವ ‘ಹೇಗೆ ನಿನ್ನ ಹುಡುಕಲಿ’
ಕೆ. ಲಕ್ಷö್ಮಣ
ಡಾ| ಕೆ.ಎಸ್.ನಿಸಾರ್ ಅಹಮದ್ ರಚಿತ – ಜೋಗದ ಸಿರಿ ಬೆಳಕಿನಲ್ಲಿ
ಚಂದ್ರಾವತಿ
ನುಡಿ ನಮನ- ಹೆಚ್.ಎಸ್. ವೆಂಕಟೇಶ್‌ಮೂರ್ತಿ ಮತ್ತು ಎಸ್.ಎಲ್.ಬೈರಪ್ಪ
ರಮ್ಯ & ರಕ್ಷಿತ
ಕನ್ನಡ, ಕನ್ನಡ, ಕನ್ನಡವೆನ್ನುಲಿ ಕನ್ನಡ ನಾಡಿನ ಓ ಕಂದ
ಯೋಗೇಶ್ವರಿ
ಕನ್ನಡ ನಾಡು ಚಂದ, ಕನ್ನಡ ಭಾಷೆ ಅಂದ
ಜಗದೀಶ್ ಬಡಿಗೇರ್
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಡಾ|| ಸುಷ್ಮಾ, ಅಪರ್ಣ
ನಾಗರತ್ನ ಡಿ.ಆರ್, ದಿವ್ಯಾ

  • ನಾಟಕ – ಕನ್ನಡ ಭಾಷೆ ಬೆಳವಣಿಗೆ, ಮೈಸೂರು ಸಂಸ್ಥಾನದ ಕೊಡುಗೆ ರಾಜ್ಯೋತ್ಸವದ ಆಚರಣೆ
    ವಸಂತ್ ಬಿ.ಎಸ್
    ಕರುನಾಡ ತಾಯಿ ಸದಾ ಚಿನ್ಮಯಿ
    ದೀಪಕ್
    ಅಂದವೋ ಅಂದವು ಕನ್ನಡ ನಾಡು
    ಫ್ರಾನ್ಸಿಸ್. ಎ.ಜೆ
    ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ
    ನಿಶಿತ್ ಮೌರ್ಯ
    ಏನಾಗಲಿ ಮುಂದೆ ಸಾಗು ನೀ
    ಶೋಭ ಕೆ.ಎಸ್
    ರಸಪ್ರಶ್ನೆ ಕಾರ್ಯಕ್ರಮ
    ಮಂಜುನಾಥ.ಆರ್
    ಕಾರ್ಯಕ್ರಮದ ನಿರೂಪಣೆ

ಈ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಶ್ರೀ ಮುತ್ತಣ್ಣ ಸುಬ್ಬರಾವ್, ಮಹಾಪ್ರಬಂಧಕರು (ಪರಿಸರ ನಿರ್ವಹಣಾ ಇಲಾಖೆ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಖ), ಶ್ರೀ ರಘುನಾಥ್ ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್), ವಿಐಎಸ್‌ಎಲ್ ಕಾರ್ಮಿಕ ಸಂಘದ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾದಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನು ವಿಐಎಸ್‌ಎಲ್‌ನ ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...