Monday, May 18, 2026
Monday, May 18, 2026

Klive Special Article ಪ್ರವಾಸಿ ವಿಶೇಷ , ಕಲ್ಲೇಶ್ವರ ದೇವಾಲಯ-ಹುಲಿಕಲ್ ಲೇ: ದಿಲೀಪ್ ನಾಡಿಗ್

Date:

Klive Special Article ತಾಂಡಗದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಕಲ್ಲಿನ ದೇವಾಲಯವೇ ಕಲ್ಲೇಶ್ವರ ದೇವಾಲಯ. ಹುಲಿಕಲ್‌ನಲ್ಲಿರುವ ಕಳ್ಳೇಶ್ವರ ದೇವಾಲಯದ ಬಗ್ಗೆ ನಮಗೆ ತಿಳಿದದ್ದು ತುಮಕೂರಿನ‌ ಹೊಯ್ಸಳ ದೇವಾಲಯದ ಕುರಿತು ಮ್ಯಾಪ್ ನೋಡಿದ ನಂತರವೇ. ಮ್ಯಾಪ್ ನಲ್ಲಿದ್ದ ರಸ್ತೆ ಅನುಸರಿಸಿ ಹೊರಟ ನಮಗೆ ಎದುರಾದದ್ದು ಒಂದು ಕಾಲುವೆ. ಆ ಕಾಲುವೆಯ ದಾರಿಯಲ್ಲಿ ಸಾಗಿ ಬಲಕ್ಕೆ ತಿರುಗಬೇಕಿತ್ತು. ಆದರೆ ಅಲ್ಲಿ ಮಳೆಬಿದ್ದ ಕಾರಣ ರಸ್ತೆಯು ಸಂಪೂರ್ಣ ಕೆಸರು ತುಂಬಿದ ಗುಂಡಿಗಳು ಎದುರಾಯಿತು. ಕಾಲುವೆಯ ಎರಡು ಬದಿಗಳಲ್ಲಿಯೂ ಎರಡು ಸಮಾಂತರ ವಾಹನ ಮಾರ್ಗಗಳು ಬಲಕ್ಕೆ ತಿರುಗುತ್ತಿದ್ದು ದೇವಾಲಯ ದೂರದಿಂದಲೇ ಕಾಣುತಿದ್ದರೂ ಅಲ್ಲಿಗೆ ತಲುಪುವುದು ದೊಡ್ಡ ಸಾಹಸವೇ ಸರಿ. ಕಾಡಿನ ಮಧ್ಯದಲ್ಲಿ ಮುಳ್ಳುಗಳಿಂದ ಮೈ ಕೈ ಗಾಯಮಾಡಿಕೊಂಡು, ಹಾವುಗಳನ್ನೇ ಎದುರು ಹಾಕಿಕೊಂಡು ಹೊರಡುವ ನಮಗೆ ಇದೊಂದು ಸಣ್ಣಸಂಗತಿಯಾಗಿತ್ತು. ವಿಪರ್ಯಾಸವೆಂದರೆ
ಸ್ಥಳೀಯರಿಗೂ ಸಹ ದೇವಾಲಯದ ಬಗ್ಗೆ ಸರಿಯಾದ ದಾರಿಯ ಬಗ್ಗೆ ಮಾಹಿತಿ ಇಲ್ಲದಿರುವುದು. ನಮ್ಮ ಆತ್ಮವಿಶ್ವಾಸವೇ ನಮಗೆ ದಾರಿ ತೋರಿದ್ದು ಬಲಭಾಗದ ದಾರಿಗಳಲ್ಲಿ ಒಂದನ್ನು ಆಯ್ದುಕೊಂಡು ಮುಂದುವರಿದ ನಂತರ ಸುಮಾರು 2 ಕಿಲೋಮೀಟರ್ ಪ್ರಯಾಣಿಸಿದರೂ ದೇವಾಲಯದ ಯಾವ ಗುರುತು ಕೂಡ ಕಾಣಿಸಲಿಲ್ಲ, ನಾವು ತಪ್ಪು ದಾರಿ ಹಿಡಿದು ಬಂದೆವೆಂಬ ಅನುಮಾನ ನಮಗೆ.

ಧೈರ್ಯ ಮಾಡಿ‌ ಕಾಲುವೆ ದಾರಿಯಲ್ಲಿ ಮುಂದೆ ಸಾಗಿದ ನಮಗೆ ಕಾಲುವೆಯನ್ನು ದಾಟುತಿದ್ದಂತೆ
ನಾವು ಅರಸಿಬಂದಿದ್ದ ಕಲ್ಲೇಶ್ವರ ದೇವಾಲಯ ಗೋಚರಿಸಿತು. ಖುಷಿಯಿಂದ ನೋಡಲು ಕಾರಿನಿಂದ ಇಳಿದ ನಮಗೆ ಎದುರಾದದ್ದು ಸುಮಾರು ಐದು ಅಡಿ ಜಲಾವೃತವಾಗಿರುವ ದೇವಾಲಯದ ಸಂಕೀರ್ಣ. ಪಾಲಿಗೆ ಬಂದಿದ್ದೇ ಪಂಚಾಮೃತವೆಂದುಕೊಂಡು.‌ದೇವಾಲಯದ ಎದುರುಭಾಗದಲ್ಲಿದ್ದ ಶಾಸನ ಹಾಗೂ ದೇವಾಲಯದ ಫೋಟೋಗಳನ್ನು ತೆಗೆದುಕೊಂಡು ತೃಪ್ತರಾಗಬೇಕಾಯಿತು. ಇಲ್ಲಿರುವ ಕಲ್ಲೇಶ್ವರನ ವೈಶಿಷ್ಟ್ಯ ವೆಂದರೆ ಈಶ್ವರನು ಮಯೂರಾಸನದಲ್ಲಿ ವಿರಾಜಮಾನನಾಗಿರುವುದು ಮತ್ತು ನೀಲಲೋಹಿತ(ನೀಲಿಬಣ್ಣದ ಲಿಂಗ)ನಾಗಿರುವುದು. ನೂರಾರು ಈಶ್ವರನ ಲಿಂಗವನ್ನು ನೋಡಿದ ನಮಗೆ ಈ ಲಿಂಗವು ಬಹಳ ವಿಶಿಷ್ಟ ವೆನಿಸಿತು.

Klive Special Article ದೇವಾಲಯವನ್ನು ಇತ್ತೀಚೆಗೆ ಪುನರ್‌ನಿರ್ಮಾಣ ಮಾಡಲಾಗಿದೆ. ಆದರೆ ವಿಷಾದಕರವಾಗಿ, ಅದರ ಸುತ್ತಮುತ್ತ ಯಾವುದೇ ನಿರ್ವಹಣೆಯ ಗುರುತು ಕಾಣಿಸಲಿಲ್ಲ — ದೇವಾಲಯದ ಸುತ್ತ ನೀರು ನಿಂತಿರುವುದು ಅದರ ಸಾಕ್ಷಿ. ದೇವಾಲಯ ಬಾಗಿಲು ಮುಚ್ಚಲ್ಪಟ್ಟಿದ್ದರೂ, ಜಾಲರಿಯ ಬಾಗಿಲಿನಿಂದ ನಾವು ಒಳಗೆ ನೋಡಿದಾಗ ಭಗವಾನ್ ಶಿವ ಮತ್ತು ಅವರ ವಾಹನ ನಂದಿಯ ಒಂದು ನೋಟ ಕಾಣಿಸಿತು.

ದೇವಾಲಯದ ವಾಸ್ತು ವಿನ್ಯಾಸವು ತಂಡಗದ ಚೆನ್ನಕೇಶವ ದೇವಾಲಯದಂತೆಯೇ ಇದೆ. ಈ ದೇವಾಲಯವನ್ನು ಹೊಯ್ಸಳರು ನಿರ್ಮಿಸಿದ್ದರು — ಅವರು ಸುಂದರ ಮತ್ತು ಸೂಕ್ಷ್ಮ ಶಿಲ್ಪಕಲೆಗೆ ನಾಂದಿಹಾಡಿದವರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಆಶ್ಚರ್ಯಕರವಾಗಿ, ಹುಲಿಕಲ್‌ನ ಕಲ್ಲೇಶ್ವರ ದೇವಾಲಯವು ಇತರ ಹೊಯ್ಸಳ ದೇವಾಲಯಗಳಿಗಿಂತ ಸರಳ ಹಾಗೂ ಅಲಂಕಾರ ರಹಿತವಾಗಿದೆ.
ಹೊಯ್ಸಳರ ಪ್ರಸಿದ್ಧ ಅರಸು ಬಿಟ್ಟಿಗ, ರಾಮಾನುಜಾಚಾರ್ಯರಿಂದ ದೀಕ್ಷೆ ಪಡೆದು ವಿಷ್ಣುವರ್ಧನನೆನಿಸಿದ. (ಆಡಳಿತ: ಸು 1110-1142). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳು. ಇವಳು ಶಿವಮೊಗ್ಗೆ ಬಳ್ಳಿಗಾವಿಯವಳು. ಇವಳ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತವಾಗಿ ಮೂಡಿಬಂದವು.

ವಿಷ್ಣುವರ್ಧನನು ಹೊಯ್ಸಳ ಸಾಮ್ರಾಜ್ಯದ ರಾಜ ಎರೆಯಂಗನ ಎರಡನೇ ಮಗನಾಗಿದ್ದು, ವಿನಯಾದಿತ್ಯನ ಮೊಮ್ಮಗನಾಗಿರುತ್ತಾನೆ.ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದವಳು. ಈತನಿಗೆ ಮೂರು ಜನ ಗಂಡು ಮಕ್ಕಳು (ಕುಮಾರಬಲ್ಲಾಳ,ಒಂದನೇಯ ನರಸಿಂಹ, ವಿಜಯನಾರಾಯಣ) ಮತ್ತು ಒಂದು ಹೆಣ್ಣು (ಏಚಲದೇವಿ) ಮಗಳಿದ್ದಳು. ನಮ್ಮ ಪರಂಪರೆ, ಶ್ರೇಷ್ಠ ಪರಂಪರೆ. ನಮ್ಮ ಶಿಲ್ಪಿ ಗಳು ಅಮರಶಿಲ್ಪಿಗಳು. ನಮ್ಮ ಕರ್ನಾಟಕ ಶ್ರೇಷ್ಠ ಕರ್ನಾಟಕ.

ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ(ನೋಂ), ಶಿವಮೊಗ್ಗ.
6361114316.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜಾವಳ್ಳಿ ಬಳಿ ಭೀಕರ ಅಪಘಾತ: ಸಹ ಪ್ರಾಧ್ಯಾಪಕ ಸ್ಥಳದಲ್ಲೇ ದುರ್ಮರಣ.

Breaking News ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾವಳ್ಳಿ ಸಮೀಪ ಇಟ್ಟಿಗೆ...