Tuesday, August 25, 2026
Tuesday, August 25, 2026

S.N.Chennabasappa ಶಿವಮೊಗ್ಗ ದಸರಾ- 2025 ಆಚರಣೆ. ಶಾಸಕ ಚೆನ್ನಿ & ಪಾಲಿಕೆ ಆಯುಕ್ತರ ಪೂರ್ವಸಿದ್ಧತಾ ಸಭೆ

Date:

S.N.Chennabasappa ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ, ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲಿಕೆಯ ಆಯುಕ್ತರಾದ ಮಾನ್ಯ ಮಾಯಣ್ಣ ಗೌಡ ಅವರೊಂದಿಗೆ “ಶಿವಮೊಗ್ಗ ದಸರಾ – 2025” ಕುರಿತು ಸಭೆ ನಡೆಸಿ, ದಸರಾ ಉತ್ಸವವನ್ನು ಯಶಸ್ವಿಯಾಗಿ, ಸಾಂಸ್ಕೃತಿಕ ವೈಭವದಿಂದ ಹಾಗೂ ಸಾರ್ವಜನಿಕರ ಹೆಚ್ಚಿನ ಭಾಗವಹಿಸಿಕೊಡುವ ರೀತಿಯಲ್ಲಿ ಆಯೋಜಿಸುವ ಕುರಿತು ಅನೇಕ ವಿಷಯಗಳನ್ನು ಚರ್ಚಿಸಿದರು.

ಈ ಸಂದರ್ಭದಲ್ಲಿ:

  1. ಹತ್ತು ದಿನಗಳ ಕಾಲ ನಡೆಯಲಿರುವ ಶಿವಮೊಗ್ಗ ದಸರಾ ಉತ್ಸವಕ್ಕಾಗಿ ಸಮಗ್ರ ಸಿದ್ಧತೆಗಳನ್ನು ತಕ್ಷಣದಿಂದ ಆರಂಭಿಸಲು ಸೂಚಿಸಿದರು.
  2. ಉತ್ಸವದ ಸುಗಮ ನಿರ್ವಹಣೆಗೆ ತಾತ್ಕಾಲಿಕ ಸಮಿತಿ ರಚಿಸುವ ನಿರ್ಧಾರ ಕೈಗೊಂಡರು.
  3. ಉತ್ಸವದ ವಿವಿಧ ತಯಾರಿಗಳನ್ನು ನೋಡಿಕೊಳ್ಳಲು ಒಟ್ಟು 14 ಸಮಿತಿಗಳನ್ನು ರಚಿಸಲು ನಿರ್ದೇಶನ ನೀಡಿದರು.
  4. ಅಂಬಾರಿ ಉತ್ಸವ ಕಾರ್ಯಕ್ರಮಕ್ಕಾಗಿ ಅಗತ್ಯ ತಯಾರಿಗಳನ್ನು ಸಮಯಕ್ಕೆ ಮುನ್ನ ಪೂರ್ಣಗೊಳಿಸಲು ಸೂಚಿಸಿದರು.
  5. ಜಂಬೂಸವಾರಿ ಕಾರ್ಯಕ್ರಮಕ್ಕೆ ಆನೆಗಳ ಅನುಮತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
  6. ಉತ್ಸವಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರದಿಂದ ತರುವ ಕುರಿತು ಸಮಾಲೋಚನೆ ನಡೆಸಿದರು.
  7. ಸಾರ್ವಜನಿಕರ ಹೆಚ್ಚಿನ ಪಾಲ್ಗೊಳ್ಳುವಿಕೆ, ಪ್ರವಾಸಿಗರ ಆಕರ್ಷಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯತೆ ಮತ್ತು ಭದ್ರತಾ ಕ್ರಮಗಳಿಗೆ ವಿಶೇಷ ಗಮನ ಹರಿಸುವಂತೆ ತಿಳಿಸಿದರು.
  8. ಉತ್ಸವದ ಹತ್ತು ದಿನಗಳ ಅವಧಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಕಲಾ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಮನ್ವಯದೊಂದಿಗೆ, ಎಲ್ಲ ವರ್ಗದ ಜನರಿಗೆ ಆಕರ್ಷಕ ಅನುಭವ ಒದಗಿಸಲು ತೀರ್ಮಾನಿಸಲಾಯಿತು.
  9. ಕಾರ್ಯಕ್ರಮಗಳು ನಡೆಯುವ ಸ್ಥಳಗಳಾದ ಅಂಬೇಡ್ಕರ್ ಭವನ, ಕುವೆಂಪು ರಂಗಮಂದಿರ ಹಾಗೂ ಹಳೆ ಜೈಲು ಆವರಣವನ್ನು ಮುಂಚಿತವಾಗಿ ಕಾಯ್ದಿರಿಸಿ, ದಸರಾ ಉತ್ಸವಕ್ಕೆ ಸಂಪೂರ್ಣವಾಗಿ ಮೀಸಲಿಡುವಂತೆ ಸೂಚಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...