Saturday, October 10, 2026
Saturday, October 10, 2026

Shiralakoppa Lions Club ಗ್ರಾಮಾಂತರ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಲಿ- ಯೋಗಿರಾಜ್

Date:

Shiralakoppa Lions Club ಶಿರಾಳಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಗ್ರಾಮಾಂತರ ಶಾಲೆಗಳಲ್ಲಿ ಶಾಶ್ವತ ಸೇವಾ ಯೋಜನೆ ಅಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಶಾಲಾ ಮಕ್ಕಳಿಗೆ ರೈನ್ ಕೋಟ್ ವಿತರಣೆ ಕಾರ್ಯಕ್ರಮವನ್ನು ಸಮೀಪದ ತಾಳಗುಂದ ಮತ್ತು ಬಸವನಂದಿಹಳ್ಳಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಯೋಗಿರಾಜ್ ಮಾತನಾಡುತ್ತಾ, ನಾವು ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲು ಎರಡು ಕಾರಣ. ಒಂದು ಸರ್ಕಾರಿ ಗ್ರಾಮಾಂತರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವುದು ಮತ್ತು ಎರಡನೇ ಕಾರಣ ಮಕ್ಕಳಲ್ಲಿ ಸೇವಾ ಮನೋಭಾವದ ಬೀಜಾಂಕುರವಾಗಲಿ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಪ್ರೇರಣೆಯಾಗಲಿ ಎಂಬುದು. ನಮ್ಮ ಈ ಚಿಕ್ಕ ಚಿಕ್ಕ ಸೇವೆಗಳು ಮುಂದಿನ ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಬದಲಾವಣೆ ತರುವುದು ಎಂಬುದು ನಮ್ಮ ನಂಬಿಕೆ ಎನ್ನುತ್ತಾ ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯದರ್ಶಿ ರೇಣುಕಯ್ಯ, ಖಜಾಂಚಿ ಮೋಹನ್, ಸದಸ್ಯರಾದ ಗಿರೀಶ್, ಶಿವಕುಮಾರ್, ಸುರೇಶ್, ಶಾಲಾ ಸಿಬ್ಬಂದಿ, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಒಟ್ಟು 240 ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ ಮಾಡಲಾಯಿತು.

Shiralakoppa Lions Club ಈ ಕಾರ್ಯಕ್ರಮ ವಿದ್ಯಾರ್ಥಿಗಳು ಸಂಭ್ರಮ, ಸಂತೋಷದಿಂದ ಸ್ವೀಕರಿಸಿ, ತೊಟ್ಟು ಕೊಡುಗೆ ನೀಡಿದ ಕ್ಲಬ್ ಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...