DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ ಜಿಲ್ಲೆಗಳಾದ ತುಮಕೂರು ,ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸಲು ಕಾಮಗಾರಿಗಳು ನಡೆಯುತ್ತಿದ್ದು ಇಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ರವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೈರಗೊಂಡಲು ಜಲಾಶಯ ನಿರ್ಮಾಣದ ಕಾಮಗಾರಿಗಳನ್ನು ಹಾಗೂ ದೊಡ್ಡಬಳ್ಳಾಪುರದ ಆಲಪನಹಳ್ಳಿಯ ಮೂಲಕ ಕೋಲಾರಕ್ಕೆ ನೀರನ್ನು ಲಿಪ್ಟ್ ಮಾಡುವ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
DK Shivakumar ಈ ಸಂದರ್ಭದಲ್ಲಿ ಶಾಸಕರಾದ ದೀರಜ್ ಮುನಿರಾಜು,ಮಾಜಿ ಶಾಸಕ ವೆಂಕಟರಮಣಯ್ಯ, ಜಲನಿಗಮದ ನಿರ್ದೇಶಕರಾದ ಚನ್ನಚಿತ್ತಯ್ಯ,ಹಾಗೂ ಹಿರಿಯ ಅಭಿಯಂತ್ರರರು ಉಪಸ್ಥಿತರಿದ್ದರು.