ಗೋಮಾತೆಯ ಪೂಜೆಯಿಂದ ಸಕಲ ಇಷ್ಟಾರ್ಥಗಳು ಸಿದ್ಧಿ ಗೋಮಾತೆಯಲ್ಲಿ 33 ಕೋಟಿ ದೇವತೆಗಳು ವಾಸ ಮಾಡುತ್ತವೆ ಎಂದು ಪುರಾಣ ಕಾಲದಿಂದಲೂ ಮಾಹಿತಿ ಇದೆ ಗೋವು ನಮ್ಮ ಧರ್ಮದ ಸಂಕೇತ ಸನಾತನ ಕಾಲದಿಂದಲೂ ಗೋ ಪೂಜೆಯನ್ನು ಎಲ್ಲಾ ಶುಭ ಕಾರ್ಯಗಳಲ್ಲಿ ಮಾಡುತ್ತಾ ಬಂದಿದ್ದಾರೆ. ಗೋವಿನ ಇತಿಹಾಸ ತುಂಬಾ ವಿಸ್ತಾರವಾಗಿದೆ ಗೋಪೂಜೆಯಿಂದ ಮನಃಶಾಂತಿ ಲಭಿಸುತ್ತದೆ. ಎಂದು ದೈವಜ್ಞ ಪ್ರತಿಭಾರಂಗ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ರಾಯ್ಕರ್ ನುಡಿದರು. ದೈವಜ್ಞ ಪ್ರತಿಭಾರಂಗ ಶಿವಮೊಗ್ಗ ಸಂಸ್ಥೆಗೆ 25 ನೇ ವರ್ಷಕ್ಕೆ ಪಾದರ್ಪಣೆ ಮಾಡಿದ ಸಂದರ್ಭದಲ್ಲಿ ಹುಣಸೂಡಿನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ತಮ್ಮ ಕುಟುಂಬ ಹಾಗೂ ಪರಿವಾರ ಮತ್ತು ಎಲ್ಲಾ ನಿರ್ದೇಶಕರು ಪದಾಧಿಕಾರಿಗಳೊಂದಿಗೆ ಆಗಮಿಸಿ ಗೋಪೂಜೆ ನೆರವೇರಿಸಿ ಗೋಶಾಲೆಗೆ ದೇಣಿಗೆ ನೀಡಿ ಗೋಮಾತೆಯ ಕೃಪೆಗೆ ಪಾತ್ರರಾದರು. ಶ್ರೀ ಜ್ಞಾನೇಶ್ವರಿ ಗೋಶಾಲೆ ಅಧ್ಯಕ್ಷರಾದ ಚಂದ್ರಹಾಸ್ ರಾಯ್ಕರ್ ರವರು ದೇಣಿಗೆ ಸ್ವೀಕರಿಸಿ ಮಾತನಾಡಿ ನಮ್ಮ ಗೋಶಾಲೆ ಇಂದು ಬಹಳ ಉತ್ತಮ ಮಟ್ಟದಲ್ಲಿ ನಡೆಯುತ್ತಿದೆ ಸಾರ್ವಜನಿಕರು ಹಾಗೂ ಗೋಮಾತೆಯ ಭಕ್ತರು ದೇಣಿಗೆ ನೀಡುವುದರ ಮುಖಾಂತರ ಇಲ್ಲಿ ಕಾರ್ಯಕ್ರಮಗಳು ತುಂಬಾ ಸುಗಮವಾಗಿ ನೆರವೇರುತ್ತವೆ ಸಾರ್ವಜನಿಕರು ಒಮ್ಮೆ ನಮ್ಮ ಘೋಶಾಲೆಗೆ ಭೇಟಿ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜನಾರ್ಧನ್ ಶೇಟ್. ಕಾರ್ಯದರ್ಶಿ ಪ್ರಶಾಂತ ರಾಯ್ಕರ್. ದೇವಿದಾಸ್ ಶೇಟ್. ವಿ ಸುಧಾಕರ್. ರಾಘವೇಂದ್ರ ಕೆ. ಮತ್ತು ಪ್ರತಿಭಾರಂಗದ ಮಾಜಿ ಅಧ್ಯಕ್ಷರಾದ ಸತೀಶ್ ಶೇಟ್. ಸಂತೋಷ್ ಜಿ. ಅಶೋಕ್ ರಾಯ್ಕರ್. ರಾಘವೇಂದ್ರ. ಪಾಂಡುರಂಗ ಶೇಟ್ ಉಪಸ್ಥಿತರಿದ್ದರು
ಗೋಮಾತೆಯ ಪೂಜೆಯಿಂದ ಸಕಲ ಇಷ್ಟಾರ್ಥಗಳು ಸಿದ್ದಿ
Date: