Wednesday, July 16, 2025
Wednesday, July 16, 2025

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Date:

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಉದ್ಯಾನವನಗಳಲ್ಲಿ ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಸೇರಿದಂತೆ ಸುಂದರ ನಗರ ನಿರ್ಮಾಣಕ್ಕೆ ಸೂಡಾ ಪ್ರಯತ್ನ ಪಡುತ್ತಿದ್ದು ನಗರದ ನಾಗರೀಕರು ಸಹ ಕೈಜೋಡಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಕೋರಿದರು.
ಗುರುವಾರ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನವನದಲ್ಲಿ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಮಲೆನಾಡು ಬಯಲು ಸೀಮೆಯಾಗುತ್ತಿದೆ. ಹಸಿರು ಕಡಿಮೆಯಾಗುತ್ತಿದೆ. ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ-ಸುಂದರವಾಗಿಟ್ಟುಕೊಳ್ಳಬೇಕು. ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇತ್ತೀಚಿನ ವಾತಾವರಣ, ಜೀವನಶೈಲಿ, ಆಹಾರ ಪದ್ದತಿಯಿಂದ ಅನೇಕ ಸಮಸ್ಯೆಗಳು ಎದುರುಗಾಗುತ್ತಿದ್ದು, ಸಾರ್ವಜನಿಕರು ಉತ್ತಮ ಪರಿಸರದಲ್ಲಿ ವಾಯುವಿಹಾರ, ವ್ಯಾಯಾಮ, ಜಿಮ್ ಮಾಡಲು ಉದ್ಯಾನವನಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಸೂಡಾ ವತಿಯಿಂದ ಈಗಾಗಲೇ 33 ಪಾರ್ಕುಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು ಪಾರ್ಕ್ಗಳಲ್ಲಿ ವಾಕಿಂಗ್ ಪಾಥ್, ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 45 ಪಾರ್ಕ್ಗಳನ್ನು ಅಭಿವೃದ್ದಿ ಪಡಿಸಲಾಗುವುದು. ಹಾಗೂ ಪ್ರಸ್ತುತ 17 ಕೆರೆಗಳ ಅಭಿವೃದ್ದಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಗೋಪಿಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನವನಕ್ಕೆ ರೂ.20 ಲಕ್ಷ ಮೊತ್ತದಲ್ಲಿ ಉದ್ಯಾನವನ ಪ್ರದೇಶವನ್ನು ಸ್ವಚ್ಚಗೊಳಿಸಿ ಸಮತಟ್ಟು ಮಾಡುವುದು, ಉದ್ಯಾನವನದ ಪ್ರದೇಶಕ್ಕೆ ಫೌಂಡೇಶನ್ ಸಹಿತ ಕಾಂಕ್ರಿಟ್ ಪಿಲ್ಲರ್‌ನೊಂದಿಗೆ ಚೈನ್ ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ ಮಾಡಲಾಗುವುದು.
Shimoga-Bhadravati Urban Development Authority ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಇ-ಬ್ಲಾಕ್ ಉದ್ಯಾನವನದಲ್ಲಿ ರೂ.20 ಲಕ್ಷ ಮೊತ್ತದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 11 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಸಂಪ್ ನಿರ್ಮಾಣ, ಉದ್ಯಾನವನದಲ್ಲಿ ಫೆನ್ಸಿಂಗ್ ದುರಸ್ತಿಪಡಿಸಲಾಗುವುದು ಎಂದರು.
ನಗರದ ಗೋಪಾಳ ಬಡಾವಣೆ ಡಿ ಮತ್ತು ಇ-ಬ್ಲಾಕ್‌ಗಳ ಉದ್ಯಾನವನದಲ್ಲಿ ರೂ.25 ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 09 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಫೆನ್ಸಿಂಗ್ ದುರಸ್ತಿ, ಹಾಗೂ ಹಾಲಿ ಇರುವ ಪಾಥ್‌ವೇನ ಆಯ್ದ ಭಾಗದಲ್ಲಿ ದುರಸ್ತಿಪಡಿಸುವುದು, ಉದ್ಯಾನವನದಲ್ಲಿ 07 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ನಗರದ ಪಂಪಾ ನಗರದಲ್ಲಿರುವ ಮಲೆನಾಡು ಸೊಸೈಟಿ ಪಕ್ಕದ ಉದ್ಯಾನವನದ ಅಭಿವೃದ್ದಿ ಮತ್ತು ಗಾಡಿಕೊಪ್ಪ ಪೊಲೀಸ್ ಲೇಔಟ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಅಳವಡಿಕೆಗೆ ರೂ.25 ಲಕ್ಷ ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣದಲ್ಲಿ ವ್ಯಾಯಾಮ ಸಾಮಗ್ರಿ ಅಳವಡಿಕೆ, ಸುಮಾರು 100 ಮೀ ಪಾಥ್‌ವೇ ನಿರ್ಮಾಣ ಹಾಗೂ 03 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ಈ ವೇಳೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಬಡಾವಣೆಗಳ ನಿವಾಸಿಗಳು, ಎಇಇ ಬಸವರಾಜ್, ಇಂಜಿನಿಯರ್ ದಿನೇಶ್ ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...