Nivedan Nempe ಅಡಿಕೆ ಹಾಳೆಯ ಅಮೇರಿಕಾ ಕ್ಯಾತೆಗೆ ಸಿಕ್ತು ಪರಿಹಾರ ದೊರೆತಿದ್ದು, ಶಿವಮೊಗ್ಗದ ಯುವ ಉದ್ಯಮಿ ಹಾಗೂ ಸಂಶೋಧನಾಕಾರನಿಂದ ಹೊಸ ಆವಿಷ್ಕಾರ ನಡೆದಿದೆ.
ಶಿವಮೊಗ್ಗ ಯುವಕನ ಹೊಸ ಸಂಶೋಧನೆಯಿಂದ ಅಡಿಕೆ ಹಾಳೆಯನ್ನು ಅಮೆರಿಕಕ್ಕೂ ಸೇರಿದಂತೆ ಹಲವು ದೇಶಗಳಿಗೆ ಇನ್ಮುಂದೆ ಕಳುಹಿಸಬಹುದಾಗಿದೆ.
ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂದು ಅಮೇರಿಕಾ ಹಾಗೂ ಇತರೆ ರಾಷ್ಟ್ರಗಳು ಆಮದು ನಿಲ್ಲಿಸಿದ್ದವು. ಅಡಿಕೆ ಬ್ಯಾನ್ ನಿಂದ ಭಾರತಕ್ಕೆ ವಾರ್ಷಿಕ ನಾಲ್ಕು ಸಾವಿರ ಕೋಟಿ ರೂ. ನಷ್ಟ ಉಂಟಾಗಿತ್ತು.
ಹಾಳೆ ತಟ್ಟೆ ಮೇಲ್ಮೈಗೆ ಫುಡ್ ಗ್ರೇಡ್ ಪೇಪರ್ ಬಳಸಿ ಶಿವಮೊಗ್ಗದ ಯುವಕ ಅರೆಕಾ ಟೀ ಸಂಶೋಧಕ ನಿವೇದನ್ ನಿಂಪೆ ಪರಿಹಾರ ಹುಡುಕಿದ್ದಾರೆ.
ನಿವೇದನ್ ನೆಂಪೆಯ ಹೊಸ ಈ ಆವಿಷ್ಕಾರ ಅಡಿಕೆ ಹಾಳೆ ತಯಾರಿಕರಲ್ಲಿ ಹೊಸ ಸಂಚಲನ ಮೂಡಿಸಿದೆ.
ಅಡಿಕೆ ಹಾಳೆ ಮಾರಾಟದ ಜೊತೆಗೆ ಪ್ಲಾಸ್ಟಿಕ್ ಬಳಕೆಗೂ ಪರ್ಯಾಯ ಮಾರ್ಗ ಕಂಡು ಹಿಡಿಯಲಾಗಿದೆ.
ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿ ಆಹಾರ ಪಾರ್ಸೆಲ್ ಗೆ ಕಡಿವಾಣ ಹಾಕಲು ಹೊಸ ಮಾರ್ಗ ಇದಾಗಿದ್ದು,
ಎರಡು ಮೂರು ಗಂಟೆಗಳವರೆಗೂ ಆಹಾರಗಳನ್ನು ಭದ್ರವಾಗಿ ಹಿಡಿಯುವ ಪೇಪರ್ ಕಂಡು ಹಿಡಿಯಲಾಗಿದೆ.
300 ಡಿಗ್ರಿ ಸೆಲ್ಸಿಯಸ್ ಬಿಸಿ ಆಹಾರ ಪದಾರ್ಥ ಹಾಕಿದರೂ ಫುಡ್ ಗ್ರೇಡ್ ಪೇಪರ್ ಹಾಳಾಗುವುದಿಲ್ಲ ಎನ್ನಲಾಗಿದೆ.
ಮಗಚಿ ಬಿದ್ದ ಅಡಿಕೆ ಹಾಳೆ ತಟ್ಟೆ ಉದ್ಯಮಕ್ಕೆ ಹೊಸ ಸ್ಪೂರ್ತಿಯಾಗಿ ಫುಡ್ ಗ್ರೇಡ್ ಪೇಪರ್ ಮಾರ್ಪಟ್ಟಿದೆ.
Nivedan Nempe ಪರಿಸರಸ್ನೇಹಿ ಪೇಪರ್ ನಿಂದಾಗಿ ಅಡಿಕೆ ಹಾಳೆ ತಟ್ಟೆ ತಯಾರಿಕೆ ಹಾಗೂ ಹೋಟೆಲ್ ಉದ್ಯಮಕ್ಕೂ ನೆರವಾಗಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಂಬಂಧ ಮಧ್ಯ ಪ್ರವೇಶಿಸಬೇಕೆಂದು ಸಂಶೋಧಕ ನಿವೇದನ್ ನಿಂಪೆಯವರು ಕೋರಿದ್ದಾರೆ.