Shivamogga Karnataka Sugama Sangeet Parishad ಕವಿತೆಗಳ ಮೂಲಕ ಕವಿಯು ಸದಾ ಜೀವಂತವಾಗಿರುತ್ತಾನೆ. ಕವಿಯ, ಸಾಹಿತಿಗಳ ಪುಸ್ತಕಗಳನ್ನು ಕೊಂಡು ಓದಿದರೆ ಅದರಿಂದ ಒಬ್ಬ ಲೇಖಕರನ್ನು ಮನೆಗೆ ಕರೆದೊಯ್ಯುವ ಹಾಗೆ ಆಗುತ್ತದೆ.
ಹೀಗಾಗಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಹೇಳಿದರು.
ಶಿವಮೊಗ್ಗದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಮತ್ತು ಇತರ ಸಂಘ ಸಂಸ್ಥೆಗಳು ಸಹಯೋಗದಲ್ಲಿ ಏರ್ಪಡಿಸಿದ್ದ “ಅಮ್ಮಾ ನಿನ್ನ ಎದೆಯಾಳದಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭಾವಗೀತೆಗಳು ಸಂಗೀತದ ಅರಮನೆಯ ಹೆಬ್ಬಾಗಿಲು ಎಂದು ತಿಳಿಸಿದರು.
ಶಿವಮೊಗ್ಗದ ಅಳಿಯನಾದ ನನಗೆ ಐವತ್ತು ವರ್ಷದ ನಂಟಿದೆ. ನನ್ನ ಮಕ್ಕಳು ಸಹ ಇಲ್ಲಿಯೇ ಓದಿದ್ದಾರೆ. ನನಗೆ ಇಲ್ಲಿ ತುಂಬಾ ಗೆಳೆಯರು ಇದ್ದಾರೆ. ಹೀಗಾಗಿ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಸ್ಥಳ ಎಂದು ಹೇಳಿದರು.
ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡು ಅನೇಕ ಭಾವನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಅಕಾಡೆಮಿ ಸದಸ್ಯರು ಲಕ್ಷ್ಮಣರಾಯರ ಗೀತೆಗಳನ್ನು ಹಾಡಿ ರಂಜಿಸಿದರು.
ವೇದಿಕೆಯಲ್ಲಿ ಜಿ.ವಿಜಯಕುಮಾರ್ ಮತ್ತು ಎಂ.ಎನ್.ಸುಂದರರಾಜ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿ.ಆರ್.ಲಕ್ಷ್ಮಣ ರಾವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಾದಲೀಲೆ, ಅರ್ಪಿತಾ, ನಾದಶ್ರೀ, ತರಂಗಿಣಿ, ಚಿರಂತನ ಸಂಗೀತ ಸಂಸ್ಥೆಯವರು ಕವಿಗಳಿಗೆ ಗೌರವ ಸಲ್ಲಿಸಿದರು.
Shivamogga Karnataka Sugama Sangeet Parishad ಶೋಭಾ ಸತೀಶ್, ಉಮಾ ದಿಲೀಪ್, ಜಯಶ್ರೀ ಶ್ರೀಧರ್, ಲತಾ ಕೆದಿಲಾಯ, ಲಲಿತಮ್ಮ, ಹೇಮಾ, ಮಂಜುನಾಥ್, ಮಥುರಾ ನಾಗರಾಜ್, ಸುಶೀಲಾ ಷಣ್ಮುಗಂ, ಧನ್ಪಾಲ್ ಸಿಂಗ್, ದಿನೇಶ್ ಜಿ. ಕೆ., ರಾಘವೇಂದ್ರ ಪ್ರಭು, ಸರೋಜಾ ಭುಜಂಗಪ್ಪ, ರಾಜಕುಮಾರ್, ಭುಜಂಗಪ್ಪ, ದಾಕ್ಷಾಯಣಿ, ಶೀಲಾ ಸುರೇಶ್, ವಸಂತ ವೇಣುಗೋಪಾಲ್, ವಿನೋದಾ ಕೃಷ್ಣಮೂರ್ತಿ, ಬಿಂದು ವಿಜಯಕುಮಾರ್ ಇನ್ನೂ ಅನೇಕರು ಉಪಸ್ಥಿತರಿದ್ದರು.
