Friday, June 20, 2025
Friday, June 20, 2025

DC Shivamogga ನಗರ ಪಾಲಿಕೆ ವ್ಯಾಪ್ತಿಗೆ ಗ್ರಾಮಾಂತರ ಪ್ರದೇಶಗಳ ಸೇರ್ಪಡಗೆ ಮುನ್ನ ಆಯಾ ಕ್ಷೇತ್ರದ ಶಾಸಕರು, ಜನ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ- ಗುರುದತ್ತ ಹೆಗಡೆ

Date:

DC Shivamogga ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಂಬಂಧ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೊಳಪಡುವ 09ಗ್ರಾಮ ಪಂಚಾಯಿತಿಗಳ 19ಹಳ್ಳಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸೇರ್ಪಡೆಗೊಳಿಸುವ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಕ್ಷೇತ್ರಗಳ ಶಾಸಕರು ಹಾಗೂ ಆಯಾ ಗ್ರಾಮ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ 15ದಿನಗಳೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಂಬಂಧ ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಆಡಳಿತ ಸುಧಾರಣಾ ಆಯೋಗವು ಬೆಳೆಯುತ್ತಿರುವ ನಗರ, ಪಟ್ಟಣ ಪ್ರದೇಶಗಳನ್ನು ಪಾಲಿಕೆ, ಪುರಸಭೆ, ಪಟ್ಟನ ಪಂಚಾಯಿತಿಗಳ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರ ಮೇರೆಗೆ ಸಭೆಯನ್ನು ಆಯೋಜಿಸಲಾಗಿತ್ತು ಎಂದರು. ಕಳೆದ 20ವರ್ಷಗಳಿಂದ ಸದರಿ ಮಹಾನಗರಪಾಲಿಕೆಯ ವ್ಯಾಪ್ತಿ ವಿಸ್ತರಿಸುವ ಕಾರ್ಯ ಆಗಿರುವುದಿಲ್ಲ. 1993ರಲ್ಲಿ ಪಾಲಿಕೆಯ ವ್ಯಾಪ್ತಿಯನ್ನು ಗುರುತಿಸುವ ಕಾರ್ಯ ನಡೆದಿತ್ತು. ಆದರೆ, ಇತ್ತೀಚಿನ ಒಂದು ದಶಕದಿಂದೀಚೆಗೆ ಕೃಷಿ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿರುವ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಿರುವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರವು ಮಾರ್ಗದರ್ಶನ ನೀಡಿತ್ತು. ಆ ನಿರ್ದೇಶನದ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ವತಿಯಿಂದ 09ಸಮಿತಿಗಳನ್ನು ರಚಿಸಿ, ಸಮೀಕ್ಷೆ ನಡೆಸಿ, ಈ ಸಮಿತಿಗಳು ನೀಡಿದ ವರದಿಯ ಆಧಾರದ ಮೇಲೆ ಪಾಲಿಕೆಯ ವಿಸ್ತರಿಸಬಹುದಾದ ವ್ಯಾಪ್ತಿಯನ್ನು ತಾತ್ಕಾಲಿಕವಾಗಿ ಗುರುತಿಸಿ, ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲಾಗಿತ್ತು.

ಅವರ ಮಾರ್ಗದರ್ಶನದಂತೆ ಇಂದು ಸಮಿತಿ ಸಭೆ ಸೇರಿ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ವ್ಯಾಪ್ತಿ ವಿಸ್ತರಣೆಯ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದವರು ತಿಳಿಸಿದರು. ಈಗಾಗಲೇ ಪಾಲಿಕೆ ವ್ಯಾಪ್ತಿಯನ್ನೂ ಮೀರಿ ಅನೇಕ ಬಡಾವಣೆಗಳು ಸೃಜನೆಗೊಂಡಿವೆ. ಇವುಗಳ ವ್ಯವಸ್ಥಿತ ನಿರ್ವಹಣೆ ಗ್ರಾಮ ಪಂಚಾಯಿತಿಗಳಿಂದ ಕಷ್ಟಸಾಧ್ಯ. ಅಲ್ಲದೇ ಅದಕ್ಕೆ ಪೂರಕವಾದ ಪರಿಕರಗಳು ಸಹ ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲದಿರುವುದು ಕಾರಣವಾಗಿದೆ. ಅಲ್ಲದೇ ಪ್ರದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡ ಸರ್ಕಾರದ ಭಾಗವಾಗಿದೆ ಎಂದವರು ನುಡಿದರು.

2011ರ ಜನಗಣತಿಯಂತೆ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಟ 3ಲಕ್ಷ ಜನಸಂಖ್ಯೆ ಇತ್ತು. ಒಂದು ಅಂದಾಜಿನ ಪ್ರಕಾರ 2021ರ ಹೊತ್ತಿಗೆ 4.22ಲಕ್ಷ ಜನಸಂಖ್ಯೆ ಹಾಗೂ ಪಾಲಿಕೆ ಪ್ರದೇಶದ ವ್ಯಾಪ್ತಿಯಿಂದ ಕನಿಷ್ಟ 35000ಜನಸಂಖ್ಯೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದ ಅವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಪರ-ವಿರೋಧದ ಅಭಿಪ್ರಾಯಗಳನ್ನು ಆಧರಿಸಿ, ಮುಂದಿನ 15ದಿನಗಳೊಳಗಾಗಿ ಮತ್ತೊಮ್ಮೆ ಸಭೆ ಕರೆದು ಅಂತಿಮ ಹಂತದ ಸಮಾಲೋಚನೆಯ ನಂತರ ಗಡಿ ಪ್ರದೇಶದ ನಕ್ಷೆಯನ್ನು ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


DC Shivamogga ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ,

ಆರ್.ಮೋಹನ್‌ಕುಮಾರ್‌ಸೇರಿದಂತೆ ಎಲ್ಲಾ ಸಂಬಂಧಿತ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಾಲಿಕೆಯ ಅಧಿಕಾರಿ-ಸಿಬ್ಬಂಧಿಗಳು ಮತ್ತಿತರರು ಉಪಸ್ಥಿತರಿದ್ದರು. ಈ ಪಾಲಿಕೆಯ ವ್ಯಾಪ್ತಿ ವಿಸ್ತರಣೆಯಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿಗಳ ವ್ಯವಸ್ಥಿತ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಬೀದಿದೀಪ ಅಳವಡಿಕೆ, ಆಸ್ತಿ ತೆರಿಗೆ ವಸೂಲಾತಿ, ನೀರಿನ ತೆರಿಗೆ ವಸೂಲಾತಿ, ಮಾರುಕಟ್ಟೆ ಸ್ಥಳಗಳು, ಅಗ್ನಿಶಾಮಕ ದಳಗಳು, ರಸ್ತೆಗಳು, ಸೇತುವೆಗಳು, ಘನತ್ಯಾಜ್ಯ ವಿಲೇವಾರಿ, ಉದ್ಯಾನವನಗಳು, ಶಿಕ್ಷಣ, ಜನನ-ಮರಣ ದಾಖಲೆಗಳ ನಿರ್ವಹಣೆ, ಮಳಿಗೆಗಳ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಗಿ ಶುಲ್ಕ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಪ್ರಸ್ತುತ ಮಹಾನಗರಪಾಲಿಕೆ ಆಯುಕ್ತರ ಮೂಲಕ ಸ್ಥಳೀಯ 35ವಾರ್ಡುಗಳ ಆಡಳಿತವನ್ನು ನಿರ್ವಹಿಸಲಾಗುತ್ತಿದೆ.


ಪ್ರಸ್ತುತ ಅಬ್ಬಲಗೆರೆ, ಕೋಟೆಗಂಗೂರು, ಮುದ್ದಿನಕೊಪ್ಪ, ಮೇಲಿನಹನಸವಾಡಿ, ಗೋಂದಿಚಟ್ನಳ್ಳಿ, ನಿಧಿಗೆ, ಮಾಚೇನಹಳ್ಳಿ, ಸಂತೇಕಡೂರು, ಪುರದಾಳು, ಗುಡ್ಡದಅರೆಕೆರೆ, ತ್ಯಾವರೆಕೊಪ್ಪ. ಅಗಸವಳ್ಳಿ ಮುಂತಾದ ಗ್ರಾಮ ಪಂಚಾಯಿತಿಗಳ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಗ್ರಾಮಗಳು ಸೇರ್ಪಡೆಗೊಳ್ಳುವ ಸಂಭವವಿದೆ. ಅಂತಿಮ ಸಮಾಲೋಚನಾ ಸಭೆಯ ನಂತರ ವ್ಯಾಪ್ತಿಯ ಅಂತಿಮ ನಕ್ಷೆ ಸಿದ್ಧಗೊಳ್ಳಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...