Sri Adichunchanagiri Shikshana Trust ವೃತ್ತಿಗೆ ಗೌರವ ಕೊಡಿ, ಯಾವ ವ್ಯಕ್ತಿ ವೃತ್ತಿಗೆ ಗೌರವ ಕೊಡುತ್ತಾನೋ ಆ ವ್ಯಕ್ತಿಯ ಬದುಕು ಹಸನಾಗುವುದು, ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜೊತೆ ಉತ್ತಮ ಒಡನಾಟದಿಂದ ಎಂದು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿಯವರು ಹೇಳಿದರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ, ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಬಿಜಿಎಸ್ ಸಭಾ ಭವನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಮೂರು ದಿನಗಳವರಗೆ ನಡೆದ ಕಾರ್ಯಗಾರದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿಕ್ಷಕರು ಮಕ್ಕಳಿಗೆ ಬೇಕು-ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಪುನಶ್ಚೇತನ ಕಾರ್ಯಕ್ರಮಗಳು ಶಿಕ್ಷಕರಿಗೆ ಮೂರು ದಿನಗಳಿಂದ ನಡೆಯುತ್ತಿದ್ದು, ಶಿಕ್ಷಕರು ವರ್ಷಪೂರ್ತಿ ಶೈಕ್ಷಣಿಕ ಜೀವನದಲ್ಲಿ ಮಕ್ಕಳ ಜೊತೆ ತೊಡಗಿಸಿಕೊಂಡಿರುತ್ತೀರಿ, ಬೇಸಿಗೆ ರಜೆ ಬಂದಿರುವುದರಿಂದ ಬಹಳ ಸಂತೋಷದಿಂದ ಕುಟುಂಬವರ್ಗದವರ ಜೊತೆಗೆ ಸಮಯವನ್ನು ಕಳೆಯುತ್ತಿರುತ್ತೀರಿ, ಶಾಲೆ ಆರಂಭವಾಗುತ್ತಿದ್ದು, ಶಿಕ್ಷಕರಾದ ನೀವು ಮಕ್ಕಳೇ ಸರ್ವಸ್ವ, ವೃತ್ತಿ ಜೀವನ ಶಿಕ್ಷಕರಿಗೆ ವ್ರತ ಇದ್ದ ಹಾಗೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
Sri Adichunchanagiri Shikshana Trust ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮನೋಶಾಸ್ತ್ರಜ್ಞ ಡಾ. ಅರವಿಂದ್ ಮಾತನಾಡುತ್ತಾ, ಶಿಕ್ಷಕರು ತರಗತಿಯಲ್ಲಿ ಮಕ್ಕಳ ಮೊದಲ ಸಮಸ್ಯೆಯನ್ನು ಅರಿತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಈ ರೀತಿ ಮಾಡಿದಾಗ ಮಕ್ಕಳ ಮನಸ್ಸಿನಲ್ಲಿನ ಭಾವನೆಗಳನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ. ಮಕ್ಕಳ ಮನಸ್ಸನ್ನು ಹಾಗೂ ಅವರ ಸಮಸ್ಯೆಗಳನ್ನು ಅರಿತು ಬಗೆಹರಿಸುವ ವ್ಯವಸ್ಥೆ ನಮ್ಮ ದೇಶದಲ್ಲಿ ಕಡಿಮೆ. ಇಂತಹ ಸಮಯದಲ್ಲಿ ಶಿಕ್ಷಕರಿಗೆ ಕಾರ್ಯಗಾರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಸ್.ಹೆಚ್., ಬಿಜಿಎಸ್ ವಸತಿ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್, ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲ ದಿವ್ಯ ಕರಣಂ, ಮುಖ್ಯ ಶಿಕ್ಷಕಿ ವೀಣಾ ಇನ್ನೂ ಮುಂತಾದವರಿದ್ದರು.
Sri Adichunchanagiri Shikshana Trust ಯಾವ ವ್ಯಕ್ತಿಯು ವೃತ್ತಿಗೆ ಗೌರವ ಕೊಡುತ್ತಾನೋ ಅವರ ಬದುಕು ಹಸನ- ಶ್ರೀ ಸಾಯಿನಾಥ ಶ್ರೀ
Date:
