Shimoga News ವ್ಯಾಪಾರದ ಜತೆಯಲ್ಲಿ ಸಾರ್ವಜನಿಕ ಸೇವೆಯು ಮುಖ್ಯ. ಹಲವಾರು ಎಪಿಎಂಸಿಗಳಲ್ಲಿ ನಾನು ಸೇವೆ ಮಾಡಿದ್ದೇನೆ. ಆದರೆ ಶಿವಮೊಗ್ಗ ಎಪಿಎಂಸಿ ಒಂದು ಮಾದರಿಯಾಗಿದೆ ಎಂದು ಎಪಿಎಂಸಿ ಶಿವಮೊಗ್ಗ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಎಚ್.ವೈ.ಸತೀಶ್ ಹೇಳಿದರು.
ದಿನಸಿ ವರ್ತಕರ ಸಂಘದ ವತಿಯಿಂದ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬೆಳದಿಂಗಳ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬ ಸಮೇತ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ. ಬೆಳದಿಂಗಳ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರವನ್ನು ವ್ಯವಸ್ಥಿತವಾಗಿ ಮಾಡಿದ ವರ್ತಕ ಸಂಘದವರಿಗೆ ವಿಶೇಷ ಅಭಿನಂದನೆಗಳು. ಇದೇ ರೀತಿ ನಿಮ್ಮ ಕಾಯಕ ಮುಂದುವರೆಯಲಿ ಎಂದು ಆಶಿಸಿದರು.
ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಿ.ಎಸ್.ಹಾಲಸ್ವಾಮಿ ಮಾತನಾಡಿ, ವೃತ್ತಿ ಕ್ಷೇತ್ರದ ಕಾರ್ಯಗಳ ಜತೆಯಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುವುದು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ ಎಂದು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಲ್ಲಿ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು. ಸಮಾಜದ ಪ್ರಗತಿಯಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು. ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Shimoga News ದಿನಸಿ ವರ್ತಕರ ಸಂಘದ ಪದಾಧಿಕಾರಿಗಳು, ಕುಟುಂಬ ಸದಸ್ಯರು ಭಾಗವಹಿಸಿದ್ದರು. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಜಿ. ವಿಜಯಕುಮಾರ್ ಹಾಗೂ ಆದ್ಯ ಹೊಸನಗರ ಅವರ ಸಂಗೀತ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ದಿನಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಎನ್.ಬಿ.ಜಯದೇವಪ್ಪ, ರಮೇಶಪ್ಪ, ಶಿವಮೊಗ್ಗ ದಿನಸಿ ವರ್ತಕ ಸಂಘದ ಅಧ್ಯಕ್ಷ ಪಿ.ಎಸ್.ಹಾಲಸ್ವಾಮಿ, ಕಾರ್ಯದರ್ಶಿ ಎಂ.ಪಿ.ನಾಗರಾಜ್, ಉಪಾಧ್ಯಕ್ಷ ರೇಣುಕಾ ಬಣಕಾರ್, ನಿರ್ದೇಶಕರಾದ ಟಿ.ಜೆ.ದೇವರಾಜ್, ಎಸ್ಎನ್ಟಿ ಆನಂದ್, ವೈ.ಎ.ಅಶೋಕ್, ಶ್ರೀಕಾಂತ್, ಬಿ.ಎನ್.ನಂದನ್ ಕುಮಾರ್, ಸಿದ್ದಪ್ಪ, ಎ.ಬಿ.ಪ್ರಸನ್ನ, ಎ.ಎಸ್.ರವಿ, ಎಚ್.ಎನ್.ರಘು ಪ್ರಸಾದ್, ರಮೇಶ್, ನಟರಾಜ್, ಶಿವಕುಮಾರ್, ಅರಸೀಕೆರೆ ಶಂಕರ್ ಇಂಡಸ್ಟ್ರೀಸ್ ಕೆ.ಪಿ.ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.
Shimoga News ವ್ಯಾಪಾರದ ಜೊತೆ ಸಾರ್ವಜನಿಕ ಸೇವೆಯೂ ಮುಖ್ಯ- ಹೆಚ್.ವೈ.ಸತೀಶ್
Date: