Guarantee scheme ನಾನು ಗೋಪಾಳದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದೇನೆ. ಮಾಚೇನಹಳ್ಳಿಯಿಂದ ಗೋಪಾಳಕ್ಕೆ ಪ್ರತಿ ದಿನ ಓಡಾಡಲು ಮೊದಲು ಕಾಲೇಜು ಪಾಸ್ ಮಾಡಿಸಿದ್ದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಅತ್ಯಂತ ಅನುಕೂಲವಾಗಿದೆ. ಮೊದಲು ವಿದ್ಯಾರ್ಥಿ ಪಾಸ್ ಪಡೆದು ಕಾಲೇಜಿಗೆ ಹೋಗಿ ಬರುತ್ತಿದ್ದೆ. ಆ ಪಾಸ್‌ನಿಂದ ನಿಗದಿತ ಮಾರ್ಗದಲ್ಲಿ ಅಂದರೆ ಮನೆಯಿಂದ ಕಾಲೇಜಿಗೆ ಮಾತ್ರ ಸಂಚರಿಸಬೇಕಿತ್ತು. ಬೇರೆ ಮಾರ್ಗಕ್ಕೆ ಸಂಚರಿಸಲು ಹಣ ನೀಡಿ ಟಿಕೆಟ್ ಪಡೆಯಬೇಕಿತ್ತು. ಪ್ರಸ್ತುತ ಶಕ್ತಿ ಯೋಜನೆಯಿಂದ ಕಾಲೇಜು ಸೇರಿದಂತೆ ಬೇರೆ ಬೇರೆ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸುತ್ತೇನೆ. ಪ್ರಯಾಣಕ್ಕೆಂದು ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಿದ್ದು ಈ ಹಣವನ್ನು ವಿದ್ಯಾಭ್ಯಾಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೇನೆ. ಹಾಗೂ ನಾನು ಮತ್ತು ನನ್ನ ಅಮ್ಮ, ತಂಗಿ ಎಲ್ಲರೂ ಪ್ರವಾಸಿ ತಾಣಗಳು, ದೇವಸ್ಥಾನಗಳಿಗೆ Guarantee scheme ಹೋಗಬೇಕೆಂಬ ಹಂಬಲ ಹೊಂದಿದ್ದೆವು. ಆದರೆ ಅದು ನಮಗೆ ದುಬಾರಿಯಾದ ಕಾರಣ ಹೋಗಿರಲಿಲ್ಲ. ಆದರೆ ಶಕ್ತಿ ಯೋಜನೆ ಬಂದ ಮೇಲೆ ನಾವೆಲ್ಲ ಅನೇಕ ಪ್ರವಾಸಿ ಸ್ಥಳಗಳು ಮತ್ತು ದೇವಸ್ಥಾನಗಳಿಗೆ ಹೋಗಿ ಬಂದೆವು. ಇದರಿಂದ ಖುಷಿಯಾಗಿದೆ. ಈಗ ನಾವು ಮುಕ್ತವಾಗಿ ಓಡಾಡಲು ಸಾಧ್ಯವಾಗಿದೆ. ಶಕ್ತಿ ಯೋಜನೆಯಿಂದ ನಿಜವಾಗಿ ಮಹಿಳೆಯರಲ್ಲಿ ಬಲ ಬಂದAತಾಗಿದ್ದು, ಸ್ವತಂತ್ರವಾಗಿ ರಾಜ್ಯಾದ್ಯಂತ ಸಂಚಾರ ಮಾಡಿ ವಿವಿಧ ಸ್ಥಳಗಳನ್ನು ನೋಡಲು ಸಾಧ್ಯವಾಗಿಸಿದ ಸರ್ಕಾರಕ್ಕೆ ಧನ್ಯವಾದಗಳು.
– ದೀಕ್ಷಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಗೋಪಾಳ, ಶಿವಮೊಗ್ಗ
Guarantee scheme ಕಾಲೇಜಿಗೆ ಹೋಗಿಬರಲು “ಶಕ್ತಿ” ನೀಡಿದ ಪಾಸ್ ನಿಂದನಾನೀಗ ನಿರಾಳ- ದೀಕ್ಷಾ
Date: