Gruha Lakshmi Scheme ಸಾಕಷ್ಟು ಓದಿಕೊಂಡಿರುವ ನಾನು ಬಡವರಿಗೆ ಸಹಾಯ ಮಾಡುವ, ಸಮಾಜ ಸೇವೆ ಮಾಡುವ ಕನಸನ್ನು ಹೊತ್ತಿದ್ದೆ. ಆದರೆ ಅದು ಅಷ್ಟರ ಮಟ್ಟಿಗೆ ಸಾಕಾರ ಆಗಿರಲಿಲ್ಲ. ಕಾರಣ ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಇದೀಗ ಗೃಹಲಕ್ಷ್ಮಿ ಯೋಜನೆಯಿಂದ ಇದು ಸಾಕಾರಗೊಂಡಿದೆ. ನಾನು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಡವರಿಗೆ ವಿನಿಯೋಗಿಸಬೇಕೆಂದು ನಿರ್ಧರಿಸಿದೆ. ನಂತರ ಯೋಜನೆಯ ಹಣದಲ್ಲಿ ಬಡ ಹೆಣ್ಣುಮಕ್ಕಳಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸಿ, ಸ್ಲಂ ನಲ್ಲಿ ವಾಸವಿರುವ Gruha Lakshmi Scheme ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚುತ್ತಾ ಬಂದೆ. ಹಾಗೂ ಬೀದಿ ಬದಿ ವ್ಯಾಪಾರ ಮಾಡುವ ವೃದ್ಧ ಮಹಿಳೆಯರಿಗೆ ಬಿಸಿಲು, ಮಳೆಗೆ ನೆರವಾಗಲು ಕೊಡೆಗಳನ್ನು ನೀಡಿದೆ ಮತ್ತು ಅಂಧರ ಶಾಲೆಯ ಮಕ್ಕಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ನೀಡಿದ್ದು ಯೋಜನೆಯ ಹಣವನ್ನು ಸಮಾಜ ಸೇವೆಗೆಂದು ಮೀಸಲಿಟ್ಟಿದ್ದೇನೆ. ಈ ರೀತಿಯಾದ ಸಮಾಜ ಸೇವೆಯಿಂದಾಗಿ ನನ್ನಲ್ಲಿ ಒಂದು ರೀತಿಯ ಸಮಾಧಾನ ಮತ್ತು ಸಾರ್ಥಕ ಭಾವ ಮೂಡಿದೆ. ಇಂತಹ ಉತ್ತಮ ಯೋಜನೆ ನೀಡಿದ ಸರ್ಕಾರಕ್ಕೆ ನನ್ನ ಧನ್ಯವಾದಗಳು.
-ಅನುಪಮಾ ಎಸ್, ವಿನೋಬನಗರ, ಶಿವಮೊಗ್ಗ ದೂರವಾಣಿ ಸಂಖ್ಯೆ:9901594441
Gruha Lakshmi Scheme ಸಮಾಜಸೇವೆಗೆ ಮನಸ್ಸು ಮಾಡಿದ “ಗೃಹ ಲಕ್ಷ್ಮಿ” ಫಲಾನುಭವಿ ಅನುಪಮಾ
Date:
