S. N. Channabasappa ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಮಾನ್ಯ ಸಚಿವರಾದ ಶ್ರೀ ವೆಂಕಟೇಶ್ ಕೆ ಅವರನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಿವಮೊಗ್ಗದ ಪಶುಸಂಗೋಪನೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತ ಮನವಿಗಳನ್ನು ಅವರ ಗಮನಕ್ಕೆ ತಂದರು.
ಸಲ್ಲಿಸಲಾದ ಪ್ರಮುಖ ಮನವಿಗಳ ವಿವರಗಳು ಹೀಗಿವೆ:
1. ನಿಗೂಢ ಕಾಯಿಲೆಗಳ ಅಧ್ಯಯನಕ್ಕಾಗಿ ಸಂಶೋಧನಾ ಕೇಂದ್ರ
ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ನಿಗೂಢ ಹಾಗೂ ಅಪರೂಪದ ಕಾಯಿಲೆಗಳ ಅಧ್ಯಯನಕ್ಕಾಗಿ ಶಿವಮೊಗ್ಗದಲ್ಲಿಯೇ ವಿಶೇಷ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸುವಂತೆ ಮನವಿ ಮಾಡಿದರು.
2. ಪಶು ವಿಶ್ವವಿದ್ಯಾನಿಲಯ ಅಭಿವೃದ್ಧಿಗೆ ಅನುದಾನ
ಪಶು ವಿಶ್ವವಿದ್ಯಾನಿಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ಅಭಿವೃದ್ಧಿಗಾಗಿ ₹10 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡುವಂತೆ ಕೋರಿದರು.
3. ತಾಲೂಕು ಪಶುವೈದ್ಯಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ
ಪ್ರಸ್ತುತ ತಾಲ್ಲೂಕು ಮಟ್ಟದ ಪಶುವೈದ್ಯಕೀಯ ಸೇವೆಗಳ ಬಲವರ್ಧನೆಗಾಗಿ, ಹೊಸ ಕಚೇರಿ ಕಟ್ಟಡ ನಿರ್ಮಿಸಲು ಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
4. ಪುರಲೆಯಲ್ಲಿ ಪಶು ಕ್ಲಿನಿಕ್ ಸ್ಥಾಪನೆ
S. N. Channabasappa ಪುರಲೆಯ ಜನರಿಗೆ ಸುಲಭವಾಗಿ ಪಶು ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಅಲ್ಲಿಗೆ ಹೊಸ ಪಶು ಕ್ಲಿನಿಕ್ ಅನ್ನು ಸ್ಥಾಪಿಸುವ ಕುರಿತು ಮನವಿ ಸಲ್ಲಿಸಿದರು.
