Saturday, December 6, 2025
Saturday, December 6, 2025

JCI ಪೌರ ಕಾರ್ಮಿಕರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವ ಅಗತ್ಯವಿದೆ- ಡಾ.ಆರ್.ಅನುರಾಧ ಪಟೇಲ್

Date:

JCI ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯಕ್ರಮ ಮಾಡುವಂತಹ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರು ಅವರಿಗೆ ಸಹಕರಿಸುವುದರ ಮೂಲಕ ಸ್ವಚ್ಛ ಭಾರತ ಆಂದೋಲನಕ್ಕೆ ಸಹಕರಿಸಿದಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಅವಶ್ಯಕತೆ ಇದೆ ಎಂದು ಪ್ರೊ. ಡಾ. ಆರ್.ಅನುರಾಧ ಪಟೇಲ್ ಹೇಳಿದರು.

ಜೆ.ಸಿ.ಐ ಸಮೃದ್ಧಿ ಘಟಕದಿಂದ ಅಧ್ಯಕ್ಷರಾದ ಜೆಸಿ ನರಸಿಂಹಮೂರ್ತಿ ಅವರು ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, 18 ಹಾಗೂ 19ನೇ ಶತಮಾನದಲ್ಲಿ ಕೈಗಾರಿಕೀಕರಣ ಆದಂತಹ ಸಂದರ್ಭದಲ್ಲಿ ಕಾರ್ಮಿಕರು 12 ರಿಂದ 15 ಗಂಟೆಗಳವರೆಗೆ ನಿರಂತರವಾಗಿ ಕೆಲಸ ಮಾಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಅವರಿಗೆ ಯಾವ ಮೂಲಭೂತ ಸೌಕರ್ಯಗಳು ಇರಲಿಲ್ಲ. ಇದರ ವಿರುದ್ಧ ಸಂಘಟಿತರಾಗಿ ಹೋರಾಟ ಪ್ರಾರಂಭಿಸಿದರು. ಅವರು ಮೇ 1 ರಿಂದ ಪ್ರತಿಭಟನೆ ಪ್ರಾರಂಭಿಸಿದ ಕಾರಣ ಮೇ 1 ರಂದು ಕಾರ್ಮಿಕರ ದಿನಾಚರಣೆ ಎಂದು ಆಚರಣೆ ಪ್ರಾರಂಭವಾಯಿತು. ಇದರ ಮುಖ್ಯ ಉದ್ದೇಶ 15 ಗಂಟೆಯಿಂದ ಎಂಟು ಗಂಟೆಗಳಿಗೆ ಕೆಲಸಗಳನ್ನು ಸೀಮಿತಗೊಳಿಸುವುದು ಮತ್ತು ಅವರಿಗೆ ವಿಶೇಷವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಅವಶ್ಯಕತೆ ಇದೆ. ಹಾಗೆ ಅವರು ಸ್ವಚ್ಛತಾ ಕಾರ್ಯಕ್ರಮ ಮಾಡುವಂತಹ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರು ಅವರಿಗೆ ಸಹಕರಿಸುವುದರ ಮೂಲಕ ಸ್ವಚ್ಛ ಭಾರತ ಆಂದೋಲನಕ್ಕೆ ಸಹಕರಿಸಿದಂತಾಗುವುದು ಎಂದು ನುಡಿದರು.

JCI ಅಧ್ಯಕ್ಷರಾದ ಜೆಸಿ ನರಸಿಂಹಮೂರ್ತಿಯವರು ಪೌರಕಾರ್ಮಿಕರಾದ ಲಕ್ಷ್ಮಮ್ಮ, ಅಣ್ಣಪ್ಪ, ವೆಂಕಟೇಶ್ ರವರಿಗೆ ಶಾಲು ಹೊದಿಸಿ, ಹಾರ ಹಾಕಿ, ಹಣ್ಣು ಮತ್ತು ಸ್ವೀಟ್ ಕೊಟ್ಟು ಸನ್ಮಾನಿಸಿದರು. ಕಾರ್ಯದರ್ಶಿಯಾದ ಜೆಸಿ ಗಾಯತ್ರಿ ಯಲ್ಲಪ್ಪಗೌಡರವರು ಸ್ವಾಗತಿಸಿ, ಜೆಸಿ ಲೋಲಾ ವಂದಿಸಿದರು. ಈ ಕಾರ್ಯಕ್ರಮಕ್ಕೆ ಜೆಸಿ ಅನಿತಾ ಸಿರಿಲ್, ಜೆಸಿ ಅಶ್ವಿನಿ, ಜೆಸಿ ಸುಮಾ, ಜೆಸಿ ಸರಳ, ಜೆಸಿ ಅನ್ನಪೂರ್ಣ, ರಶ್ಮಿ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...