Monday, August 3, 2026
Monday, August 3, 2026

Grocers Association of Shivamogga ಸಂಘ ಸಂಸ್ಥೆಗಳು ಸುತ್ತಮುತ್ತಲ ಸಾಧಕರನ್ನ ಗಮನಿಸಿ ಗೌರವಿಸಬೇಕು- ಪಿ.ಎಸ್.ಹಾಲಸ್ವಾಮಿ

Date:

Grocers Association of Shivamogga ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ. ಸಂಘ ಸಂಸ್ಥೆಗಳು ನಮ್ಮ ಸುತ್ತಮುತ್ತ ಇರುವ ಮಹನೀಯರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಿ.ಎಸ್.ಹಾಲಸ್ವಾಮಿ ಹೇಳಿದರು.
ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್ ನಲ್ಲಿ ದಿನಸಿ ವರ್ತಕರ ಸಂಘದಿಂದ ಏರ್ಪಡಿಸಿದ್ದ ಕುಟುಂಬ ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವರ್ತಕರ ಸಂಘದಿಂದ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು.
ದಿನಸಿ ವರ್ತಕರ ಸಂಘದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಪ್ರತಿಭಾ ಪುರಸ್ಕಾರ ಹಾಗೂ ಕುಟುಂಬ ಮಿಲನ ಕಾರ್ಯಕ್ರಮದ ಮಾಡುವುದರಿಂದ ಪರಸ್ಪರರಲ್ಲಿ ಅವಿನಾಭಾವ ಸಂಬಂಧ ಪರಿಚಯವಾಗಿ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ ಎಂದರು.
ಹಳೆಯ ಗೀತೆಗಳು ನಮಗೆ ಖಿನ್ನತೆಯಿಂದ ದೂರ ಮಾಡುವುದರ ಜತೆಗೆ ನಮ್ಮ ಮನಸ್ಸನ್ನು ಆರಳಿಸುತ್ತವೆ. ಹಳೆಯ ಚಿತ್ರಗೀತೆಗಳು ಇಂದಿಗೂ ಸಹ ಪ್ರಸ್ತುತ. ನಮ್ಮ ಬದುಕಿಗೆ ತುಂಬಾ ಹತ್ತಿರವಾಗಿವೆ. ಸಾಹಿತ್ಯ ಸಂಗೀತವೂ ಕೂಡ ತುಂಬಾ ಅರ್ಥಪೂರ್ಣವಾಗಿರುತ್ತದೆ ಎಂದು ನುಡಿದರು.
Grocers Association of Shivamogga ಇದೇ ಸಂದರ್ಭದಲ್ಲಿ ಕನ್ನಿಕಾ ಟ್ರೇಡರ್ಸ್ ಅವರು ಎಲ್ಲಾ ವರ್ತಕರಿಗೆ ವಿಶೇಷವಾದ ಫುಡ್ ಕೀಟ್ ವಿತರಿಸಿದರು. ಹೊಸನಗರದ ಸುಗಮ ಸಂಗೀತ ಆಕಾಶವಾಣಿ ಕಲಾವಿದರಾದ ಆದ್ಯಾ, ರಮೇಶ್ ಹಾಗೂ ಜಿ.ವಿಜಯಕುಮಾರ್, ಬಿಂದು ವಿಜಯಕುಮಾರ್, ಶಾರುಖ್ ಖಾನ್ ಅವರಿಂದ ಮಧುರ ಮಧುರವಿ ಮಂಜುಳಗಾನ, ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು. ಎಸ್ ಎಸ್ ಎಲ್ ಸಿ ಹಾಗೂ ಪಿಯುನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಆರ್.ಬಿ.ಕಡದಕಟ್ಟೆ, ಎಂ.ಪಿ.ನಾಗರಾಜ್, ಎಚ್.ಜೆ.ದೇವರಾಜ್, ರಘುಪ್ರಸಾದ್, ಲಕ್ಷಿö್ಮಕಾಂತ್, ಆನಂದ್, ಉಮೇಶ್, ನಂದಕುಮಾರ್, ಸಂತೋಷ್, ಪ್ರಸನ್ನ, ಪ್ರಕಾಶ್, ಸಿದ್ದಪ್ಪ, ಶ್ರೀಕಾಂತ್, ಶಿವಪ್ರಕಾಶ್ ಮತ್ತು ಅಶೋಕ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...