Shivamogga Chamber of Commerce 25 ವರ್ಷಗಳ ಸುಧೀರ್ಘ ಯಶಸ್ವಿ ಹೊಟೇಲ್ ಉದ್ಯಮ ನಡೆಸಿದಂತಹ ಮುಥುರಾ ಪ್ಯಾರಾಡೈಸ್‌ನ ಮಾಲಿಕರಾದ ಶ್ರೀ ಎನ್ ಗೋಪಿನಾಥ್‌ರವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ೨೫ವರ್ಷಗಳ ಹಿಂದೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಉದ್ಯಮವನ್ನು ಆರಂಭಿಸಿ ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಜೊತೆಗೆ ಸಂಘ-ಸಂಸ್ಥೆ ಮತ್ತು ಸಭೆ-ಸಮಾರಂಭಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಹಕರಿಸುತ್ತಾ ಬಂದಿದ್ದೇವೆ ಹಾಗೂ ಈ ಎಲ್ಲಾ ಬೆಳವಣಿಗೆಗಳಿಗೆ ನಮ್ಮಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ನೌಕರರು ಹಾಗೂ ನಮ್ಮ ಕುಟುಂಬದವರ ನಿರಂತರ ಸಹಕಾರ ಎಂದೂ ಮರೆಯಲು ಸಾದ್ಯವಿಲ್ಲ ಹಾಗೆ ಗ್ರಾಹಕರು ಮಾದ್ಯಮ ಮಿತ್ರರು ಸಂಘ-ಸಂಸ್ಥೆಯವರು ಸದಾ ನಿರಂತರವಾಗಿ ಸಹಕರಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿಯವರು ಮಾತನಾಡುತ್ತಾ ಗೋಪಿನಾಥ್‌ರವರು ತಮ್ಮ ವೃತ್ತಿಯ ಜೊತೆಗೆ ಸಮಾಜಮುಖಿಯಾಗಿ ಹಲವಾರು ಗುರುತರ ಸೇವೆಗಳನ್ನು ಮಾಡುತ್ತಾ ಬಂದಿರುವುದು ತುಂಬಾ ಗಣನೀಯವಾಗಿದೆ ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಅದನ್ನು ಉಳಿಸಿ ಬೆಳಸುವುದರ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ತುಂಬಾ ಕಠಿಣವಾದ ಸವಾಲು ಈ ನಿಟ್ಟಿನಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ದೇವಿಗೋಪಿನಾಥ್‌ರವರ ಸಹಕಾರ ಮಹತ್ವದ್ದಾಗಿದೆ.
Shivamogga Chamber of Commerce ಇದರ ಜೊತೆಗೆ ಹಲವಾರು ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಅವರಿಗೆ ಬದುಕನ್ನು ಕಟ್ಟಿ ಕೊಟ್ಟಿರುವುದು ಅವರ ಮಾನವೀಯ ದೊಡ್ಡಗುಣವಾಗಿದೆ. ಇದೇ ಸಂದರ್ಭದಲ್ಲಿ ಮಥುರಾ ಪ್ಯಾರಡೈಸ್‌ನ ಏಳಿಗೆಗೆ ಪ್ರಾರಂಭದಿಂದಲೂ ಶ್ರಮಿಸಿದ ಕಾರ್ಮಿಕರು, ಸಿಬ್ಬಂದಿ ವರ್ಗದವರು ಸದಾ ಸ್ಮರಣಿಯರು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮೀದೇವಿ ಗೋಪಿನಾಥ್‌ರವರು ಮಾತನಾಡಿ ಹೋಟೇಲ್ ಹಾಗೂ ವಸತಿ ಗೃಹ ನಡೆಸುವುದು ತುಂಬಾ ಕಷ್ಟಕರ ಅದರಲ್ಲೂ ಮಹಿಳೆಯರು ಉದ್ಯೋಗಿಗಳಾಗಿ ಸಹಕಾರ ನೀಡುತ್ತಿರುವುದು ತುಂಬಾ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಂಸ್ಥೆಯ ಪರವಾಗಿ ಅರ್ಪಿಸುತ್ತಿದ್ದೇವೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರಾದ ಕೆ.ಎಸ್. ಸುಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಆರ್. ಆಶ್ವಥ್ ನಾರಾಯಣ ಶೆಟ್ಟಿ, ಜನಾರ್ಧನ್ ಪೈ, ಚನ್ನವೀರಪ್ಪ ರವರು ಉಪಸ್ಥಿತರಿದ್ದರು.