District Committee of Karnataka Folk Council ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಮತ್ತು ಕುವೆಂಪು ವಿ.ವಿ. ಕನ್ನಡ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ಮೇ ೨೮ ರಂದು ಮಂಗಳವಾರ ಬೆಳಿಗ್ಗೆ ೧೦ ರಿಂದ ಸಂಜೆಯ ವರೆಗೆ ಜಾನಪದ ದಿಕ್ಕು-ದೆಸೆ ವಿಚಾರವಾಗಿ ಒಂದು ದಿನದ ರಾಜ್ಯ ಮಟ್ಟದ ಜಾನಪದ ಅಧ್ಯಯನ ಶಿಬಿರ ಏರ್ಪಡಿಸಲಾಗಿದೆ.
ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಡಾ. ರಾಧಾಕೃಷ್ಣ ಸಭಾಂಗಣ ದಲ್ಲಿ ಕಾರ್ಯಕ್ರಮ ನಡೆಯಲಿದೆ. ಕುವೆಂಪು ವಿ.ವಿ. ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿಗಳು, ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಹಿ. ಶಿ. ಬೋರಲಿಂಗಯ್ಯ, ಪ್ರೊ. ಎನ್. ರಾಜೇಶ್ವರಿ, ಪ್ರಿನ್ಸಿಪಾಲರು, ಸಹ್ಯಾದ್ರಿ ವಿಜ್ಞಾನ ಕಾಲೇಜು, ಡಾ. ಸಬಿತಾ ಬನ್ನಾಡಿ, ಅಧ್ಯಕ್ಷರು, ಕನ್ನಡ ಅಧ್ಯಾಪಕರ ವೇದಿಕೆ ಅವರು ಭಾಗವಹಿಸಲಿದ್ದಾರೆ.
District Committee of Karnataka Folk Council ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ಡಾ. ವಿಶ್ವನಾಥ ಬದಿಕಾನೆ ಅವರು ಜಾನಪದ ಸ್ವರೂಪ ಮತ್ತು ಮಹತ್ವ ವಿಚಾರವಾಗಿ, ಬಳ್ಳಾರಿಯ ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಜಾನಪದ ಅಧ್ಯಯನದ ಸಾಧ್ಯತೆ ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ.ಆರ್. ಲವ ಸಮನ್ವಯ ಕಾರರಾಗಿರುತ್ತಾರೆ.
ಗೋಷ್ಠಿ ೨ ರಲ್ಲಿ ಡಾ. ಎಸ್. ಎಂ. ಮುತ್ತಯ್ಯ ಅವರು ಜಾನಪದ ಅನ್ವಯಿಕತೆಯ ಸಾಧ್ಯತೆಗಳು, ಡಾ. ಮೊಗಳ್ಳಿ ಗಣೇಶ್ ಅವರು ಜಾನಪದ ಅಧ್ಯಯನದ ಇತ್ತೀಚಿನ ಬೆಳವಣಿಗೆಗಳು ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ. ಕೆ. ಪ್ರೇಮಾ ಸಮನ್ವಯ ಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂವಾದ, ಸಮಾರೋಪ, ಪ್ರಮಾಣ ಪತ್ರ ವಿತರಣೆ ನಡೆಯಲಿದೆ.
ಅಧ್ಯಯನ ಶಿಬಿರದಲ್ಲಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಕಜಾಪ ತಾಲ್ಲೂಕು, ಹೋಬಳಿ ಪದಾಧಿಕಾರಿಗಳು, ದ್ವಿತೀಯ ಬಿ. ಎ. ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ತರಗತಿಗಳ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತರು ಹೆಸರು, ವಿಳಾಸ, ಕಾಲೇಜು ಹೆಸರು, ದೂರವಾಣಿ ಸಂಖ್ಯೆ ಜೊತೆಯಲ್ಲಿ ನೋಂದಾಯಿಸಿಕೊಳ್ಳಲು ಕಜಾಪ ಜಿಲ್ಲಾ ಅಧ್ಯಕ್ಷರು ಮನವಿ ಮಾಡಿದ್ದಾರೆ. ದೂರವಾಣಿ ಸಂಖ್ಯೆ 9449552795, ಡಾ. ಎಸ್. ಎಂ. ಮುತ್ತಯ್ಯ, ಡಾ. ಮೋಹನ್ ಚಂದ್ರಗುತ್ತಿ, ಡಾ. ಜಿ. ಆರ್. ಲವ, ಡಾ. ಜಿ. ಕೆ. ಪ್ರೇಮಾ, ಅವರಲ್ಲಿ ಹೆಸರು ನೋಂದಾಯಿಸಲು ಡಿ. ಮಂಜುನಾಥ ಕೋರಿದ್ದಾರೆ.